ಸಲಿಂಗಕಾಮಿಯಾಗಿದ್ದ ವಿಖ್ಯಾತ ಫ್ಯಾಶನ್ ಡಿಸೈನರ್ ಜಿಯಾನಿ ವರ್ಸಾಚೆರನ್ನು ಜೊತೆಗಾರನೇ ಗುಂಡಿಟ್ಟು ಕೊಂದ!
ಜಿಯಾನಿ ವರ್ಸಾಚೆ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅವರೊಬ್ಬ ವಿಶ್ವವಿಖ್ಯಾತ ಫ್ಯಾಶನ್ ಡಿಸೈನರ್ ಅಗಿದ್ದರು ಮತ್ತು ವರ್ಸಾಚೆ ಫ್ಯಾಶನ್ ಹೌಸ್ ಸಂಸ್ಥಾಪಕರಾಗಿದ್ದರು. ಫ್ಯಾಶನ್ ಉದ್ದಿಮೆಯಲ್ಲಿ ವರ್ಸಾಚೆ ಬಹುದೊಡ್ಡ ಹೆಸರು. ವೇಲ್ಸ್ ರಾಜಕುಮಾರಿ ಡಯಾನಾ ಕೂಡ ವರ್ಸಾಚೆ ವಿನ್ಯಾಸಗೊಳಿಸಿದ್ದ ಉಡುಪು ಧರಿಸುತ್ತಿದ್ದರು.
ಮಾಡೆಲ್ ಗಳು, ನಟ-ನಟಿಯರು, ಸೆಲೆಬ್ರಿಟಿ ಫ್ಯಾಶನ್ ಡಿಸೈನರ್, ಹೇರ್ ಸ್ಟೈಲಿಸ್ಟ್ -ಗಳು-ಮೊದಲಾದರ ಬದುಕೇ ವಿಚಿತ್ರ. ಥಳುಕು ಬಳುಕಿನ ಪ್ರಪಂಚದಲ್ಲಿ ಜೀವಿಸುವ ಅವರು ತಮ್ಮ ಖಾಸಗಿ ಬದುಕನ್ನು ತಮ್ಮದೇ ಅದ ರೀತಿಯಲ್ಲಿ ಜೀವಿಸುತ್ತಾರೆ. ಅ ಬದುಕಿನಲ್ಲಿ ಪ್ರೀತಿ-ವಿಶ್ವಾಸಗಳಿರುವಂತೆಯೇ ವಂಚನೆ ದ್ರೋಹಗಳೂ ಇರುತ್ತವೆ. ಹಾಗಂತ ಅವರೆಲ್ಲ ಸ್ಚಚ್ಛಂದ ಬದುಕು ನಡೆಸುತ್ತಾರೆ ಅನ್ನೋದು ಇದರರ್ಥವಲ್ಲ. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ಇವತ್ತು ನಿಮಗೆ ಫ್ಯಾಶನ್ ಜಗತ್ತಿನ (fashion world) ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಇಟಲಿಯ ಜಿಯಾನಿ ವರ್ಸಾಚೆ (Gianni Versace), ಜುಲೈ 15, 1997ರಂದು ಅಮೆರಿಕಾದ ಮಿಯಾಮಿ (Miami) ಸೌತ್ ಬೀಚ್ ಗೆ ಹತ್ತಿರದ ತನ್ನ ಐಷಾರಾಮಿ ಬಂಗ್ಲೆಯ ಮುಂದೆ ಹಾಡುಹಗಲೇ ಕೊಲೆಯಾದ ಕತೆಯನ್ನು ನಿಮಗೆ ಹೇಳುತ್ತೇವೆ. ಅವರ ಹತ್ಯೆ ಈಗಲೂ ಜನರಲ್ಲಿ ಸೋಜಿಗವನ್ನು ಹುಟ್ಟಿಸುತ್ತದೆ. ಕೊಲೆಯಾದಾಗ ಜಿಯಾನಿ ವರ್ಸಾಚೆ ವಯಸ್ಸು 51 ಆಗಿತ್ತು.
ಜಿಯಾನಿ ವರ್ಸಾಚೆ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅವರೊಬ್ಬ ವಿಶ್ವವಿಖ್ಯಾತ ಫ್ಯಾಶನ್ ಡಿಸೈನರ್ ಅಗಿದ್ದರು ಮತ್ತು ವರ್ಸಾಚೆ ಫ್ಯಾಶನ್ ಹೌಸ್ ಸಂಸ್ಥಾಪಕರಾಗಿದ್ದರು. ಫ್ಯಾಶನ್ ಉದ್ದಿಮೆಯಲ್ಲಿ ವರ್ಸಾಚೆ ಬಹುದೊಡ್ಡ ಹೆಸರು. ವೇಲ್ಸ್ ರಾಜಕುಮಾರಿ ಡಯಾನಾ ಕೂಡ ವರ್ಸಾಚೆ ವಿನ್ಯಾಸಗೊಳಿಸಿದ್ದ ಉಡುಪು ಧರಿಸುತ್ತಿದ್ದರು.
ಆದರೆ ಜುಲೈ 15, 1997ರಂದು ಅವರು ವಿಚಿತ್ರವಾಗಿ ವರ್ತಿಸುತ್ತಿದ್ದುದನ್ನು ಬಹಳಷ್ಟು ಜನರು ಗಮನಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವರ್ಸಾಚೆ ತಮ್ಮ ಬಂಗ್ಲೆಗೆ ಹತ್ತಿರದ ಕೆಫೆಯೊಂದಕ್ಕೆ ಹೋಗಿ ಅದರ ಬಾಗಿಲು ಮುಂದಕ್ಕೆ ತಳ್ಳಿ ಒಳಗೆ ಪ್ರವೇಶಿಸಿದವರು ಸರಕ್ಕನೆ ತಿರುಗಿ ವಾಪಸ್ಸು ಹೋದರು. ಅವರ ಸಾವಿಗೆ ಕೆಲವೇ ನಿಮಿಷಗಳ ಮೊದಲು ನಡೆದ ಘಟನೆಯಿದು. ಕೆಫೆಯ ಪರಿಚಾರಕಿಯೊಬ್ಬಳು ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭಾವನೆ ಅವರ ವರ್ತನೆಯಲ್ಲಿ ಕಾಣುತಿತ್ತು.
ಕೆಫೆಯಿಂದ ಹೊರಬಿದ್ದ ವರ್ಸಾಚೆ ದಿನಪತ್ರಿಕೆಯೊಂದನ್ನು ಖರೀದಿಸಿ ಬಹು-ಕೋಟಿ ಬೆಲೆಯ ‘ಮೆಡಿಟರೇನಿಯನ್’ ಬಂಗ್ಲೆಯತ್ತ ಹೆಜ್ಜೆ ಹಾಕಿದರು. ಆದರೆ ಹಾಗೆ ಹೋದ ವರ್ಸೇಸ್ ಗೆ ಮನೆಯ ಮೇನ್ ಗೇಟ್ ದಾಟಿ ಒಳಹೋಗುವುದು ಕೂಡ ಸಾಧ್ಯವಾಗಲಿಲ್ಲ. ವರ್ಸಾಚೆ ಹತ್ಯೆ ಹೇಗೆ ನಡೆಯಿತು ಅನ್ನೋದು ಇವತ್ತಿಗೂ ಸ್ಪಷ್ಟವಾಗಿಲ್ಲ. ಕೆಲ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿದ ವಿವರಣೆಯ ಪ್ರಕಾರ ಸುಮಾರು 25-ವರ್ಷ-ವಯಸ್ಸಿನ ಯುವಕನೊಬ್ಬ ವರ್ಸಾಚೆ ಹಿಂದಿನಿಂದ ಹತ್ತಿರಕ್ಕೆ ಹೋಗಿ ಅವರ ತಲೆಗೆ ಎರಡು ಬಾರಿ ಗುಂಡು ಹಾರಿಸಿದ.
ಇನ್ನೂ ಕೆಲವರು ಹೇಳುವ ಪ್ರಕಾರ ವರ್ಸಾಚೆಗೆ ಹಂತಕ ಅಪರಚಿತನಾಗಿರಲಿಲ್ಲ, ಅವರಿಬ್ಬರ ನಡುವೆ ಒಂದು ಬ್ಯಾಗ್ ಗಾಗಿ ಜಗಳ ಮತ್ತು ಹೊಡೆದಾಟ ಶುರುವಾಗಿತ್ತು. ಆಗಲೇ ಗುಂಡು ವರ್ಸೇಸ್ ತಲೆಯೆಡೆ ಹಾರಿತು. ಗುಂಡು ಹೇಗಾದರೂ ಹಾರಿರಲಿ, ಅದು ವಿಶ್ವದ ಪ್ರಖ್ಯಾತ ಫ್ಯಾಶನ್ ಡಿಸೈನರ್ ಗಳಲ್ಲಿ ಒಬ್ಬರಾಗಿದ್ದವರ್ಸಾಚೆ ಅವರ ಬಲಿ ತೆಗೆದುಕೊಂಡಿದ್ದು ಮಾತ್ರ ಸತ್ಯ.
ಅಂದಹಾಗೆ, ವರ್ಸಾಚೆರನ್ನು ಕೊಂದಿದ್ದು 27-ವರ್ಷ-ವಯಸ್ಸಿನ ಆ್ಯಂಡ್ರ್ಯೂ ಕುನನ್. ಸ್ಥಳೀಯ ಸಲಿಂಗಕಾಮಿಗಳ ಸಮುದಾಯದಲ್ಲಿ ಅವನಿಗೊಂದು ಕುಖ್ಯಾತಿಯಿತ್ತು. ಅವನು ವಯಸ್ಕ ಶ್ರೀಮಂತ ಪುರುಷರನ್ನು ಬೇಟೆಯಾಡಿ ಅವರೊಂದಿಗೆ ದುಬಾರಿ ಪ್ರವಾಸಗಳಿಗೆ ಹೋಗುತ್ತಿದ್ದ ಮತ್ತು ಭಾರಿ ಬೆಲೆಬಾಳುವ ಗಿಫ್ಟ್ ಗಳನ್ನು ಪಡೆಯುತ್ತಿದ್ದ.
ಆದರೆ, ಅವನೊಂದಿಗೆ ಸಮಯ ಕಳೆಯುತ್ತಿದ್ದವರು ಅಂದರೆ ಅವನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವರು ಅವನೊಬ್ಬ ವಿಲಕ್ಷಣ ವ್ಯಕ್ತಿ ಅಂತ ಹೇಳುತ್ತಿದ್ದರು.
ಪಾತಕಿ ಕುನನ್, ವರ್ಸಾಚೆ ಅವರನ್ನು ಕೊಲ್ಲುವ ಮೊದಲು ಮೂರು ತಿಂಗಳು ಅವಧಿಯಲ್ಲಿ ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ 4 ಜನರನ್ನು ಕೊಂದಿದ್ದ. ಹಾಗಾಗೇ, ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ಬೆಸ್ಟಿಗೇಷನ್ (ಎಫ್ ಬಿ ಐ) ಅವನ ಹೆಸರನ್ನು ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಇಟ್ಟಿತ್ತು.
ಆದರೆ ಕುನನ್ ತನ್ನ ಮೇಲಿನ ಆರೋಪಗಳನ್ನೆಲ್ಲ ನಿರಾಕರಿಸಿದ ಮತ್ತು ವರ್ಸಾಚೆ ಅವನ್ನು ಕೊಲ್ಲುವ ಹಿಂದಿನ ಉದ್ದೇಶವೇನಾಗಿತ್ತು ಅನ್ನೋದನ್ನು ಬಾಯಿ ಬಿಡಲಿಲ್ಲ. ವರ್ಸಾಚೆ ಅವರನ್ನು ಕೊಂದ ಕೆಲವೇ ದಿನಗಳ ನಂತರ ಅವನು ಮಿಯಾಮಿ ಹೌಸ್ ಬೋಟ್ ಒಂದರಲ್ಲಿ ಅತ್ಮಹತ್ಯೆ ಮಾಡಿಕೊಂಡ! ಶವದ ಪಕ್ಕ ಅವನ ಒಂದಷ್ಟು ಸಾಮಾನುಗಳನ್ನು ಬಿಟ್ಟರೆ ನ ಡೆತ್ ನೋಟ್ ಏನೂ ಸಿಗಲಿಲ್ಲ.
ಅವಿವಾಹಿತರಾಗಿದ್ದ ವರ್ಸಾಚೆ ತಮ್ಮ ವಿಲ್ ನಲ್ಲಿ ಕೋಟ್ಯಾಂತರ ಆಸ್ತಿಯನ್ನು ಅಣ್ಣನ ಮಕ್ಕಳಾದ ಅಲೆಗ್ರಾ ವರ್ಸಾಚೆ ಮತ್ತವಳ ಕಿರಿಯ ಸಹೋದರ ಡ್ಯಾನಿಯಲ್ ವರ್ಸಾಚೆ ಹೆಸರಿಗೆ ಬರೆದಿದ್ದರು.