Honey Trap: ಹನಿ ಟ್ರಾಪ್ ಸದಾಕಾಲ ಟ್ರೆಂಡ್ ನಲ್ಲಿ ಇರುವ ಕ್ರೈಂ! ಇಂದಿನ ಇಂಟರ್ನೆಟ್​ ಯುಗದಲ್ಲಿ ಹೇಗಿದೆ, ಬನ್ನೀ ನೋಡೋಣಾ!

ವಿಡಿಯೋ ಕಾಲ್ ಮಾಡಿ ನೇರವಾಗಿ ಸೆಕ್ಸ್ ಚಾಟ್ ಗೆ ಕರೆಯುತ್ತಾರೆ. ಈ ಸೆಕ್ಸ್ ಚಾಟ್ ಗೆ ಒಪ್ಪಿದರೂ ಅಷ್ಟೆ, ಒಪ್ಪಿಲ್ಲಾ ಅಂದರೂ ಅಷ್ಟೇ... ನೇರವಾಗಿ ವಿಡಿಯೋ ಕಾಲ್ ಮಾಡಿ ಖಾಸಗಿ ದೃಶ್ಯಗಳನ್ನು ತೋರಿಸುತ್ತಾರೆ. ಜೊತೆಗೆ ಕರೆ ಸ್ವಿಕರಿಸಿದವನಿಗೂ ಸಹ ಆತನ ದೇಹನ ಖಾಸಗಿ ಅಂಗಾಗಗಳನ್ನು ತೋರಿಸುವಂತೆ ಉದ್ರೇಕಗೊಳಿಸಿ ಮಾತಾಡುತ್ತಾರೆ.

Honey Trap: ಹನಿ ಟ್ರಾಪ್ ಸದಾಕಾಲ ಟ್ರೆಂಡ್ ನಲ್ಲಿ ಇರುವ ಕ್ರೈಂ! ಇಂದಿನ ಇಂಟರ್ನೆಟ್​ ಯುಗದಲ್ಲಿ ಹೇಗಿದೆ, ಬನ್ನೀ ನೋಡೋಣಾ!
ವಿಡಿಯೋ ಕಾಲ್ ಮಾಡಿ ನೇರವಾಗಿ ಸೆಕ್ಸ್ ಚಾಟ್ ಗೆ ಕರೆಯುತ್ತಾರೆ. ಈ ಸೆಕ್ಸ್ ಚಾಟ್ ಗೆ ಒಪ್ಪಿದರೂ ಅಷ್ಟೆ, ಒಪ್ಪಿಲ್ಲಾ ಅಂದರೂ ಅಷ್ಟೇ... ನೇರವಾಗಿ ವಿಡಿಯೋ ಕಾಲ್ ಮಾಡಿ ಖಾಸಗಿ ದೃಶ್ಯಗಳನ್ನು ತೋರಿಸುತ್ತಾರೆ. ಜೊತೆಗೆ ಕರೆ ಸ್ವಿಕರಿಸಿದವನಿಗೂ ಸಹ ಆತನ ದೇಹನ ಖಾಸಗಿ ಅಂಗಾಗಗಳನ್ನು ತೋರಿಸುವಂತೆ ಉದ್ರೇಕಗೊಳಿಸಿ ಮಾತಾಡುತ್ತಾರೆ. ಒಂದು ಬಾರಿ ಫೋನ್ ಕಾಲ್ ಸ್ವೀಕರಿಸಿದವರು ಖಾಸಗಿ ಅಂಗ ತೋರಿಸಿದ್ರೆ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಇಟ್ಟುಕೊಳ್ಳುತ್ತಾರೆ.
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 05, 2022 | 7:25 PM

ಹನಿಟ್ರಾಪ್ ಇದು ಇವತ್ತು ನಿನ್ನೆಯಿಂದ ಶುರುವಾದ ಆಪರಾಧವಲ್ಲಾ. ಹಿಂದೆ ಅಂದ್ರೆ ಸಾವಿರಾರು ವರ್ಷಗಳ ಹಿಂದೆಯೂ ಸಹ ಈ ಟ್ರಾಪ್ ಇತ್ತು. ಅದ್ರೆ ಕಾರಣಗಳು ಮಾತ್ರ ಬೇರೆ ಬೇರೆ ಇರ್ತಿತ್ತು , ರಾಜರ ಕಾಲದಲ್ಲಿ ಸುಂದರವಾದ ಯುವತಿಯರನ್ನು ಬಳಸಿ, ಅವ್ರ ಮೂಲಕ ನೆರೆ ರಾಜ್ಯ ಅಥವಾ ಶತ್ರು ರಾಷ್ಟ್ರಗಳ ರಹಸ್ಯ ಮಾಹಿತಿಯನ್ನು ಪಡೆದು ವಿರೋಧಿಗಳು ಅವರ ಸಂಚನ್ನು ಕಾರ್ಯರೂಪಕ್ಕೆ ತರುವ ಮೊದಲೆ ಎಲ್ಲವನ್ನು ಉಲ್ಟಾ ಮಾಡ್ತಿದ್ರು. ಇದು ಕಾಲ ಬದಲಾದ ರೀತಿಯಲ್ಲಿ ಹನಿಟ್ರಾಪ್ ಕಾರ್ಯಾಚರಣೆ ರೀತಿ ಸಹ ಬದಲಾಗುತ್ತಾ ಹೋಯ್ತು. ವಾಸ್ತವವಾಗಿ ನಡೆಯುವ ಹನಿಟ್ರಾಪ್ ಗಳ ಪೈಕಿ ಹೊರ ಜಗತ್ತಿಗೆ ಕಾಣಸಿಗುವುದು 10 ಪರ್ಸೆಂಟ್ ಮಾತ್ರ! ಉಳಿದ 90 ಪರ್ಸೆಂಟ್ ಹನಿಟ್ರಾಪ್ ಗಳು ಹೊರ ಜಗತ್ತಿಗೆ ಬರುವುದೇ ಇಲ್ಲಾ. ಇವತ್ತಿನ್ನ ಜಮಾನಾದಲ್ಲಿ ಟ್ರೆಂಡ್ ನಲ್ಲಿ ಇರುವ ಟಾಪ್ ಕ್ರೈಮ್ ಗಳಲ್ಲಿ ಹನಿ ಟ್ರಾಪ್ ಸಹ ಒಂದು. ಈ ಆಧುನಿಕ ಕಾಲದಲ್ಲಿ ಯಾವೆಲ್ಲಾ ರೀತಿಯಲ್ಲಿ ಹನಿಟ್ರಾಪ್ ನಡೆಯುತ್ತೆ, ಯಾರು ಯಾರು ಗುರಿಯಾಗುತ್ತಿದ್ದಾರೆ ಅನ್ನೊ ಸಂಪೂರ್ಣ ವರದಿ ಇಲ್ಲಿದೆ.

ಫಿಸಿಕಲ್ ಹನಿಟ್ರಾಪ್… ಈ ಫಿಸಿಕಲ್ ಹಿನಿಟ್ರಾಪ್ ಅನ್ನು ಸಾಂಪ್ರದಾಯಿಕ ಹನಿಟ್ರಾಪ್ ಅಂತಲೂ ಕರೆಯುತ್ತಾರೆ. ಇತ್ತಿಚೇಗೆ ಸಾಂಪ್ರದಾಯಿಕ ಹನಿಟ್ರಾಪ್ ಗೆ ಒಳಗಾದವರು ಅಂದ್ರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ತಿಪ್ಪಾರೆಡ್ಡಿ, ಬಂಡೆ ಮಠದ ಸ್ವಾಮೀಜಿ ಹೀಗೆ ಲಿಸ್ಟ್ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತೆ. ಈ ಸಾಂಪ್ರದಾಯಿಕ ಹನಿಟ್ರಾಪ್ ನಡೆಯುವುದೆ ರೋಚಕ. ಮೊದಲಿಗೆ ಯುವತಿಯರು ಮುಖತಃ ಭೇಟಿ ಆಗ್ತಾರೆ. ಇಲ್ಲಿ ಯುವತಿ ಕೇವಲ ನಿಮಿತ್ತ ಮಾತ್ರ. ಸುಂದರ ಯುವತಿಯನ್ನು ಮುಂದೆ ಬಿಟ್ಟು… ಆಟ ಆಡಿಸುವುದು ಮಾತ್ರ ಹಿಂದೆ ಇರುವಂತಹ ಭಯಾನಕ ಗ್ಯಾಂಗ್. ಪ್ರತಿಯೊಂದು ಹನಿಟ್ರಾಪ್ ನಲ್ಲಿಯೂ ಹಿಂದೆ ಗ್ಯಾಂಗ್ ಗಳು ಇರುತ್ವೆ.

ಸುಂದರಿ ಮೊದಲಿಗೆ ಪರಿಚಯ ಮಾಡಿಕೊಳ್ಳುತ್ತಾಳೆ. ನಂತ್ರ ಒಂದಷ್ಟು ದಿನ ನಂಬಿಕೆಯನ್ನು ಗಳಿಸುತ್ತಾಳೆ. ಯಾವಾಗ ಟಾರ್ಗೆಟ್ ಹತ್ತಿರವಾಗಿದ್ದಾನೆ ಎಂದಾಗ ದೈಹಿಕ ಸಂಪರ್ಕಕ್ಕೆ ಹೋಗ್ತಾರೆ. ಕೆಲವೊಂಮ್ಮೆ ಸಂಪೂರ್ಣ ದೈಹಿಕ ಸಂಪರ್ಕವನ್ನು ಬೆಳೆಸುತ್ತಾರೆ. ನಂತ್ರ ದೈಹಿಕ ಸಂಪರ್ಕ ಬೆಳೆಸಿದ್ದ ಖಾಸಗಿ ಸಮಯದಲ್ಲಿ ವ್ಯಕ್ತಿಗೆ ಗೊತ್ತಾಗದ ರೀತಿಯಲ್ಲಿ ವಿಡಿಯೋ ಅಥವ ಫೋಟೊ ಸೆರೆ ಹಿಡಿಯುತ್ತಾರೆ. ನಂತರ ಅವುಗಳನ್ನು ತೋರಿಸಿ ಹೊರ ಜಗತ್ತಿಗೆ, ಕುಟುಂಬಕ್ಕೆ ಕಳಿಸುತ್ತೇವೆ ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಾರೆ.

ಇಲ್ಲಿ ಒಂದಷ್ಟು ಜನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ದೂರು ನೀಡಿದ್ರೆ ಮತ್ತಷ್ಟು ಜನರು ಮರ್ಯಾದೆಗೆ ಅಂಜಿ, ಹಣ ನೀಡಿ ವಿಚಾರ ಹೊರಗೆ ಬಾರದಂತೆ ಮಾಡ್ತಾರೆ. ಇದೇ ಸಾಂಪ್ರದಾಯಿಕ ಹನಿಟ್ರಾಪ್ ನಲ್ಲಿ ಇನ್ನೊಂದು ಭಯಾನಕ ರೀತಿಯಲ್ಲಿ ನಡೆಯುತ್ತೆ. ಸುಂದರಿ ಹತ್ತಿರವಾಗಿ ಇನ್ನೇನು ದೈಹಿಕ ಸಂಪರ್ಕ ಅಗುತ್ತೆ ಅನ್ನೊ ಸಮಯದಲ್ಲಿ ಇಬ್ಬರು ಇರುವ ಕೋಣೆಗೆ ಗ್ಯಾಂಗ್ ಎಂಟ್ರಿ ಕೊಡುತ್ತೆ. ಕೆಲವೊಮ್ಮೆ ಪೊಲೀಸರು, ಇನ್ನು ಕೆಲವೊಮ್ಮೆ ಯುವತಿಯ ಕುಟುಂಬದವರು ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡ್ತಾರೆ. (ವರದಿ: ಕಿರಣ್ ಹೆಚ್​ ವಿ)

ಆನ್ಲೈನ್ ಹನಿಟ್ರಾಪ್..

ಇವತ್ತಿನ ಜಮಾನಾದಲ್ಲಿ ಎಲ್ಲವೂ ಅನ್ಲೈನ್! ಹೀಗಿರುವಾಗ ಅಪರಿಚಿತ ವ್ಯಕ್ತಿಗಳ ಜೊತೆಗೆ ಸ್ನೆಹ ಒಂದು ರೀತಿಯ ಟ್ರೆಂಡಿಂಗ್! ಮುಖ ಊರು ಗೊತ್ತಿಲ್ಲದ ವ್ಯಕ್ತಿಗಳು ಫೆಸ್ಬುಕ್, ಇನ್ಸ್ಟಾಗ್ರಾಮ್, ಜೋಶ್, ಲೊಕ್ಯಾಂಟೊ ಹಾಗೂ ಇತರ ವಾಟ್ಸಪ್ ಗ್ರೂಪ್ ನಲ್ಲಿ ಪರಿಚಯವಾಗಿ ಸ್ನೇಹ ಬೆಳೆಸುತ್ತಾರೆ. ಇವ್ರು ಯಾವ ಕಾರಣಕ್ಕೂ ನೇರವಾಗಿ ಭೇಟಿಯಾಗಲ್ಲ. ಬಹುಮುಖ್ಯವಾಗಿ ಇವ್ರು ಫೇಸ್ ಬುಕ್ ನಲ್ಲಿ ಗೆಳೆತನ ಸಂಪಾದಿಸುತ್ತಾರೆ. ನಂತ್ರ ಚಾಟಿಂಗ್ ಮಾಡಿ ಹತ್ತಿರವಾಗ್ತಾರೆ. ಯಾವ ಕಾರಣಕ್ಕೂ ಇವ್ರು ನೇರೆವಾಗಿ ಕರೆ ಮಾಡುವುದಿಲ್ಲಾ. ಏನಿದ್ರೂ ವಾಟ್ಸ್ಪ್ ಕಾಲ್ ಮತ್ತು ಬೇರೆ ಮಾದರಿಯಲ್ಲೆ ಇಂಟರ್ನೆಟ್ ಕಾಲ್ ಮಾಡ್ತಾರೆ.

ಅದ್ರಲ್ಲಿ ವಿಡಿಯೋ ಕಾಲ್ ಮಾಡಿ ನೇರವಾಗಿ ಸೆಕ್ಸ್ ಚಾಟ್ ಗೆ ಕರೆಯುತ್ತಾರೆ. ಈ ಸೆಕ್ಸ್ ಚಾಟ್ ಗೆ ಒಪ್ಪಿದರೂ ಅಷ್ಟೆ, ಒಪ್ಪಿಲ್ಲಾ ಅಂದರೂ ಅಷ್ಟೇ… ನೇರವಾಗಿ ವಿಡಿಯೋ ಕಾಲ್ ಮಾಡಿ ಖಾಸಗಿ ದೃಶ್ಯಗಳನ್ನು ತೋರಿಸುತ್ತಾರೆ. ಜೊತೆಗೆ ಕರೆ ಸ್ವಿಕರಿಸಿದವನಿಗೂ ಸಹ ಆತನ ದೇಹನ ಖಾಸಗಿ ಅಂಗಾಗಗಳನ್ನು ತೋರಿಸುವಂತೆ ಉದ್ರೇಕಗೊಳಿಸಿ ಮಾತಾಡುತ್ತಾರೆ. ಒಂದು ಬಾರಿ ಫೋನ್ ಕಾಲ್ ಸ್ವೀಕರಿಸಿದವರು ಖಾಸಗಿ ಅಂಗ ತೋರಿಸಿದ್ರೆ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಇಟ್ಟುಕೊಳ್ಳುತ್ತಾರೆ.

ಗೆಳೆತನ ಸಂಪಾದನೆ ಮಾಡಿದಾಗ್ಲೇ ಫೇಸ್ ಬುಕ್ ಮೂಲಕ ಅಥವ ಬೇರೆ ಸಾಮಾಜಿಕ ಜಾಲತಾಣದ ಮೂಲದ ಸಂಬಂಧಿಕರ ಫೋನ್ ನಂಬರ್ ಗಳನ್ನು ಅಥವಾ ಅವ್ರ ಸಾಮಾಜಿಕ ಜಾಲತಾಣದ ಅಕೌಂಟ್ ಗಳ ಮಾಹಿತಿ ತಗೆದುಕೊಳ್ಲುತ್ತಾರೆ. ಯಾವಾಗ ಸ್ಕ್ರೀನ್ ರೆಕಾರ್ಡ್ ಅಗುತ್ತೆ ಆ ನಂತರದ ಕ್ಷಣದಿಂದ ಹಣಕ್ಕೆ ಬೇಡಿಕೆ ಇಡ್ತಾರೆ. ಹಣ ಕೊಟ್ಟಿಲ್ಲಾ ಅಂದರೆ ವಿಡಿಯೋವನ್ನು ಎಲ್ಲರಿಗೂ ಕಳಿಸಿಬೆದರಿಸುತ್ತಾರೆ, ಹಣ ವಸೂಲಿ ಮಾಡ್ತಾರೆ, ಈ ಬೆದರಿಕೆಗೆ ಅದೆಷ್ಟೋ ಜನರು ಜೀವ ಸಹ ಕಳೆದುಕೊಂಡಿದ್ದಾರೆ. ಆನ್ಲೈನ್ ಹನಿಟ್ರಾಪ್ ಗ್ಯಾಂಗ್ ಗಳು ರಾಜಸ್ಥಾನದ ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ದೇಶಾದ್ಯಾಂತ ಆಪರೇಟ್ ಮಾಡುತ್ವೆ.

Published On - 6:11 pm, Sat, 5 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ