AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಲ್ಲಲು ಬಂದವ ಅತ್ತೆ, ನಾದಿನಿ, ಮಗಳನ್ನೇ ಕೊಂದ: ಒಂದು ‌ಆಸೆಗೆ ನಾಲ್ವರು ಬಲಿ

ಚಿಕ್ಕಮಗಳೂರಿನ ಮಾಗಲು ಗ್ರಾಮದಲ್ಲಿ ರತ್ನಾಕರ್ ಎಂಬ ಬಸ್ ಚಾಲಕ ಮೂವರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ದಾಂಪತ್ಯದಲ್ಲಿ ಉಂಟಾದ ಕಲಹದಿಂದಾಗಿ ಈ ಕೃತ್ಯ ನಡೆದಿದೆ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ. ಮೂವರನ್ನು ಕೊಲೆ ಮಾಡಿದ ಬಳಿಕ ಕೊನೆಗೆ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಳೆಹೊನ್ನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಕೊಲ್ಲಲು ಬಂದವ ಅತ್ತೆ, ನಾದಿನಿ, ಮಗಳನ್ನೇ ಕೊಂದ: ಒಂದು ‌ಆಸೆಗೆ ನಾಲ್ವರು ಬಲಿ
ಕೊಲೆ ಆರೋಪಿ ರತ್ನಾಕರ್​
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Apr 02, 2025 | 9:43 PM

Share

ಚಿಕ್ಕಮಗಳೂರು, ಏಪ್ರಿಲ್​ 02: ಕಾಫಿನಾಡು ‌ಚಿಕ್ಕಮಗಳೂರು (Chikkamagaluru) ತಾಲೂಕಿನ ಮಾಗಲು ಗ್ರಾಮದಲ್ಲಿ ಹೊಸತೊಡಕು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಾಡೂಟ ಮಾಡಿ ಇನ್ನೇನು ನಿದ್ದೆ ಮಾಡುವ ಸಮಯ, ಸುತ್ತ ಕಾಫಿತೋಟ ಎತ್ತರದ ಬೆಟ್ಟಗಳ ನಡುವಿನ ಗ್ರಾಮವಾಗಿರುವ ಮಾಗಲು‌ ಗ್ರಾಮದಲ್ಲಿ ರಾತ್ರಿ 9:30ರ ಸುಮಾರಿಗೆ ಒಂದೇ ಸಮನೆ ನಾಲ್ಕು ಗುಂಡುಗಳು (Firing) ಹಾರಿದ ಶಬ್ದ ಕೇಳಿಸಿತ್ತು. ಏನಿದು ಶಬ್ದ ಅಂತ ಹೊರಬಂದ ಗ್ರಾಮಸ್ಥರಿಗೆ ಐದನೇ ಗುಂಡಿನ ಶಬ್ದ ಕಾಫಿ ತೋಟದ ನಡುವೆ ಕೇಳಿಸಿತ್ತು.ರಾತ್ರಿ ಹಾರಿದ ಐದು ಗುಂಡು ಇಡೀ ಊರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಶಬ್ದ ಕೇಳಿ ಮನೆ ಬಳಿ ಬಂದ ಗ್ರಾಮಸ್ಥರು ಅಕ್ಷರಶಃ ನಡುಗಿಹೋಗಿದ್ದರು.

ಮಾಗಲು ಗ್ರಾಮದ ಜ್ಯೋತಿ ಎಂಬುವವರ‌‌ ಮನೆಯ ಹಿಂಬಾಗಿಲಿನ ಬಳಿ ಜ್ಯೋತಿ, ಏಳು ವರ್ಷದ ಮಗು ಮೌಲ್ಯ ಮನೆಯ ಬಾಗಿಲ‌ ಬಳಿ ಸಿಂಧು ಮೃತ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಮೂರು ಮೃತ ದೇಹದ ಪಕ್ಕದಲ್ಲೇ ನರಳಾಡುತ್ತಿದ್ದ ಅವಿನಾಶ್ ಎಂಬುವರನ್ನು ಗ್ರಾಮಸ್ಥರು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿ, ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದರು. ಆಸ್ಪತ್ರೆ ಸೇರುವ ಮಾರ್ಗ ಮಧ್ಯದಲ್ಲೇ ರಾತ್ರಿ ನಡೆದ ಮೂವರ ಹತ್ಯೆಯ ಘೋರ ಸತ್ಯವನ್ನ ಅವಿನಾಶ್ ಹೇಳಿದ್ದರು. ಅಲ್ಲಿಗೆ ಮೂವರ ಹತ್ಯೆ ಹಿಂದೆ ರತ್ನಾಕರ್ ಹೆಸರು ಕೇಳಿಬಂದಿತ್ತು. ಅಷ್ಟಕ್ಕೂ ರತ್ನಾಕರ್ ಕೊಂದಿದ್ದು ತನ್ನ ಏಳು ವರ್ಷದ ಮಗಳು ಮೌಲ್ಯ, ಹೆಣ್ಣು ಕೊಟ್ಟ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಅವರನ್ನು. ಇದೇ ವೇಳೆ, ಮೃತ ಸಿಂಧು ಪತಿ ಅವಿನಾಶ್​ ಅವರ ಕಾಲಿಗೆ ರತ್ನಾಕರ್ ಗುಂಡು ಹಾರಿಸಿದ್ದನು.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಿತ್ಲಿಕೊಂಡ ಮೂಲದ 40 ವರ್ಷದ ರತ್ನಾಕರ್ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಬಳಿ ಇರುವ ಪ್ರತಿಷ್ಠಿತ ವಸತಿ ಶಾಲೆಯ ಬಸ್ ಚಾಲಕನಾಗಿದ್ದಾನೆ. ರತ್ನಾಕರ್ ಮಾಗಲು ಗ್ರಾಮದ ಮೃತ ಜ್ಯೋತಿ ಅವರಿಗೆ ಪರಿಚಯವಾಗಿದ್ದನು. ಜ್ಯೋತಿ ಅವರು ತಮ್ಮ ದೊಡ್ಡ ಮಗಳು ಸ್ವಾತಿಯವರನ್ನು 8 ವರ್ಷಗಳ ಹಿಂದೆ ರತ್ನಾಕರ್ ಜೊತೆ ವಿವಾಹ ಮಾಡಿದ್ದರು. ಜ್ಯೋತಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು ತಮ್ಮ ಮನೆಗೆ ಮಗನಂತೆ ರತ್ನಾಕರ್ ಬಂದ ಅಂದುಕೊಂಡಿದ್ದರು. ಅತ್ತೆ ಮನೆಯಲ್ಲೇ ಇದ್ದ ರತ್ನಾಕರ್ ಮತ್ತು ಸ್ವಾತಿ ದಾಂಪತ್ಯಕ್ಕೆ ಮೌಲ್ಯ ಸಾಕ್ಷಿಯಾಗಿದ್ದರು.

ಇದನ್ನೂ ಓದಿ
Image
ಒಂದು ಕಿಸ್​ಗೆ 50 ಸಾವಿರ! ಲಕ್ಷ ರೂ. ಸುಲಿಗೆ: ಟೀಚರ್ ಹಾಗೂ ಗ್ಯಾಂಗ್ ಬಂಧನ
Image
ಬ್ಯಾಂಕ್ ದರೋಡೆ ಮಾಡಲೆಂದೇ ಆ ವೆಬ್​ ಸಿರೀಸ್ ನೋಡಿದ್ದ ಸಹೋದರರು
Image
ತಂದೆಯನ್ನ ಕೊಂದು ಅಪಘಾತ ಕಥೆ ಕಟ್ಟಿದ: ತನಿಖೆಯಲ್ಲಿ ಮಗನ ಅಸಲಿ ಸತ್ಯ ಬಟಾಬಯಲು
Image
ಕೋಲಾರ: ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ, ಚಾಕು ಇರಿತ

ಆರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಸ್ವಾತಿ ಮತ್ತು ರತ್ನಾಕರ್ ನಡುವೆ ಎರಡು ವರ್ಷಗಳ ಹಿಂದೆ ಗಲಾಟೆಯಾಗಿತ್ತು. ಆಗ, ಅತ್ತೆ ಮನೆ ತೊರೆದ ರತ್ನಾಕರ್ ಕಡಬಗೆರೆ ಬಳಿಯ ಶಾಲೆಯಿಂದ ನೀಡಿದ್ದ ಕ್ವಾಟ್ರಸ್​ನಲ್ಲಿ ಹೆಂಡತಿ ಜೊತೆ ಜೀವನ ನಡೆಸುತ್ತಿದ್ದನು. ಸ್ವಾತಿ ರತ್ನಾಕರ್ ನಡುವೆ ಅದೇನಾಯ್ತೋ ಗೊತ್ತಿಲ್ಲ, ನಿತ್ಯವೂ ಗಲಾಟೆಯಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಹತ್ತಾರು ಬಾರಿ ಸಂಬಂಧಿಕರು ರಾಜಿ ಪಂಚಾಯಿತಿ ಮಾಡಿದ್ದರು. ಆದರೆ, ಯಾವುದೇ ರಾಜಿಗೆ ಒಪ್ಪದ ಅತ್ತೆ ಜ್ಯೋತಿ, ಮಗಳು ಸ್ವಾತಿ ಒಂದು ನಿರ್ಧಾರಕ್ಕೆ ಬಂದರು. ಪತ್ನಿ ಸ್ವಾತಿ ಪುತ್ರಿ ಮೌಲ್ಯರನ್ನು ಪತಿ ರತ್ನಾಕರ್ ಬಳಿ ಬಿಟ್ಟು ಬೆಂಗಳೂರು ಸೇರಿದ್ದರು. ಬೆಂಗಳೂರಿನಿಂದ ಉಡುಪಿ ಬಂದ ಜ್ಯೋತಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡತೊಡಗಿದ್ದರು. ಗಂಡ ಹೆಂಡತಿ ನವಿನ ಗಲಾಟೆ ಇಬ್ಬರನ್ನು ದೂರ ಮಾಡಿತ್ತು. ಹೆಂಡತಿ ಬೇಕು ಎಂದು ಈ ನಡುವೆ ರತ್ನಾಕರ್ ಸಂಬಂಧಿಕರ ಬಳಿ ಪಂಚಾಯಿತಿ ಮಾಡುವಂತೆ ಹೇಳಿಕೊಂಡಿದ್ದರು. ಆದರೆ ಯಾವುದಕ್ಕೂ ಸ್ವಾತಿ ಮತ್ತು ಅತ್ತೆ ಜ್ಯೋತಿ ಸಮ್ಮತಿ ನೀಡಿರಲಿಲ್ಲ.

ಈ ನಡುವೆ ಜ್ಯೋತಿ ತನ್ನ ಎರಡನೇ ಮಗಳನ್ನು ತಮ್ಮ ಊರಿನ ಸಮೀಪವಿರುವ ಉಜೈನಿ ಗ್ರಾಮದ ಅವಿನಾಶ್​ ಅವರಿಗೆ ಮದುವೆ ಮಾಡಿಕೊಟ್ಟರು. ಮೊದಲ ಅಳಿಯ ನಾನಿದ್ದರೂ, ನನ್ನ ಒಂದು ಮಾತು ಕೇಳದೆ ಮದುವೆ ಮಾಡಿದರು ಎಂಬ ಸಿಟ್ಟು ರತ್ನಾಕರ್​ಗೆ ಕುದಿಯ ತೊಡಗಿತ್ತು.

ತಾಯಿಯಿಂದ ದೂರವಾದ ಮಗಳು ಮೌಲ್ಯಳನ್ನು ತಂದೆ ರತ್ನಾಕರ್ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದನು. ಮಗಳಿಗಾಗಿ ಕುಡಿಯೋದನ್ನು ಬಿಟ್ಟು ತಾನು ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಿದ್ದನು. ಮಗಳೇ ನನ್ನ ಜಗತ್ತು ಅಂದುಕೊಂಡಿದ್ದ ರತ್ನಾಕರ್ ಮಗಳು ಮೌಲ್ಯ ನನ್ನ ತಾಯಿ ಅನ್ನುತ್ತಿದ್ದನು. ಮಗಳು ಹೇಳಿದ್ದನ್ನು ಪಾಲಿಸುತ್ತಿದ್ದನು. ಮಗಳಿಗೆ ತಾಯಿ ಬೇಕು ಎಂಬ ಕಾರಣಕ್ಕೆ ಹಿಂದೆ ನಡೆದ ತಪ್ಪನ್ನ ಕ್ಷಮಿಸಿ ರತ್ನಾಕರ್​ಗೆ ಒಂದಾಗುವ ಆಸೆ ಮೂಡಿತ್ತು. ಆದರೆ, ಕಾಲ ಮಿಂಚಿಹೋಗಿತ್ತು. ಹಿಂದೆ ಹತ್ತಾರು ಬಾರಿ ರಾಜಿ ಪಂಚಾಯಿತಿ ಮಾಡಿ ಒಂದು ಮಾಡಿದ್ದವರು ಯಾರು ಮತ್ತೊಮ್ಮೆ ಮುಂದೆಬಂದು ರಾಜಿ ಮಾಡಲು ಮುಂದಾಗಿರಲಿಲ್ಲ. ಇನ್ನೂ ರಾಜಿಯಾಗಲು‌ ಅತ್ತೆ ಜ್ಯೋತಿ, ಹೆಂಡತಿ ಕೂಡ ಒಪ್ಪಿಗೆ ನೀಡಿರಲಿಲ್ಲ. ನಿರಂತರವಾಗಿ ರತ್ನಾಕರ್ ಮಾಡಿದ ಪ್ರಯತ್ನ ವಿಫಲವಾಗಿತ್ತು. ಈ ನಡುವೆ ಮಗಳು ಕೇಳಿದ ಒಂದು ಪ್ರಶ್ನೆ ಇನ್ನಷ್ಟು ರತ್ನಾಕರ್ ಅವರನ್ನ ಕುಗ್ಗುವಂತೆ ಮಾಡಿತ್ತು.

ಮಗಳು ಮೌಲ್ಯ ತಂದೆ ರತ್ನಾಕರ್ ಬಳಿ ನನ್ನ ತಾಯಿ ಎಲ್ಲಿ ಶಾಲೆಯಲ್ಲಿ, ನನ್ನ ಸ್ನೇಹಿತರು ನಿನ್ನ ತಾಯಿ ಎಲ್ಲಿ ಅಂತಾರೆ ಎಂದಿದ್ದಳು. ನನ್ನ ಸ್ನೇಹಿತರಿಗೆ ಅಪ್ಪ-ಅಮ್ಮ ಜೊತೆ ಇರುವ ಫೋಟೋವನ್ನು ತೋರಿಸಿ ಇವಳೇ ನನ್ನಮ್ಮ ಎಂದಿರುವ ವಿಚಾರ ರತ್ನಕರ್​ಗೆ ತಿಳಿದಿತ್ತು, ಮಗಳಿಗೆ ತಾಯಿ ಬೇಕು ಹಿಂದೆ ನಡೆದ ತಪ್ಪನ್ನ ಕ್ಷಮಿಸಿ ಒಟ್ಟಿಗೆ ಬದುಕುವ ಆಸೆ ಹೊರ ಹಾಕಿದರು. ಯಾರು ಪ್ರಯತ್ನ ಮಾಡುತ್ತಿಲ್ಲ ಎಂಬ ಸಿಟ್ಟು ರತ್ನಾಕರ್​ಗೆ ಅತಿ ದೊಡ್ಡ ದುರಂತಕ್ಕೆ ಕಾರಣವಾಗಿತ್ತು.

ಯುಗಾದಿ ಮುಗಿದ ಎರಡು ದಿನದ ಬಳಿಕ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹೊಸತೊಡಕು ಹಬ್ಬ. ಈ ಹಬ್ಬಕ್ಕೆ ಹೆಂಡತಿ ಸ್ವಾತಿ ಬಂದೇ ಬರುತ್ತಾಳೆ ಅಂದುಕೊಂಡಿದ್ದ ರತ್ನಾಕರ್​ಗೆ ಮಂಗಳವಾರ ಸಂಜೆ ಕಡಬಗೆರೆ ಪಟ್ಟಣದ ಬಳಿ ಅತ್ತೆ ಜ್ಯೋತಿ, ನಾದಿನಿ ಸಿಂಧು, ಸಿಂಧು ಪತಿ ಅವಿನಾಶ್ ಸಿಕ್ಕಿದ್ದರು. ಅವಿನಾಶ್ ಮೌಲ್ಯಳನ್ನು ಮಾತನಾಡಿಸಿದರು. ಅವಿನಾಶ್​ ಕಾರಿನಲ್ಲಿ ಸಂಜೆ 7 ಗಂಟೆಯವರೆಗೂ ಸಂಬಂಧಿಕರ ಮನೆಯಲ್ಲಿದ್ದ, ಮೂವರು ಮಾಗಲು ಗ್ರಾಮದ ಮನೆಗೆ ಬಂದಿದ್ದರು. ಅನಾರೋಗ್ಯದ ಕಾರಣ ಸಿಂಧು ಮಲಗಿದರೆ, ಅಳಿಯ, ಅತ್ತೆ ಊಟ ಮಾಡಿ ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ ಮನೆಯ ಹಿಂಬಾಗಿಲು ಬಡಿದ ಶಬ್ದ ಕೇಳಿಸಿತು. ಮೌಲ್ಯಳ ಧ್ವನಿಯಲ್ಲಿ ಮಮ್ಮಿ ಮಮ್ಮಿ ಎಂದು ಕರೆದ ಧ್ವನಿ ಕೇಳಿಸಿತ್ತು.

ಹೌದು, ಮೌಲ್ಯಳ ಜೊತೆ ಮಾಗಲು‌ ಗ್ರಾಮದ ಜ್ಯೋತಿ ಮನೆಗೆ ಬಂದಿದ್ದ ರತ್ನಾಕರ್ ಮೌಲ್ಯಳ ಮೂಲಕ ಬಾಗಿಲು ತೆಗೆಯುವಂತೆ ಮಾಡಿಸಿದ್ದನು. ಬಾಗಿಲು ತೆಗದ ಅತ್ತೆ ಬಳಿ ಸ್ವಾತಿ ಎಲ್ಲಿ ಎಂದು ರತ್ನಾಕರ್​ ಕೇಳಿದ್ದನು. ಸ್ವಾತಿ ಎಲ್ಲಿದ್ದಾಳೋ ಗೊತ್ತಿಲ್ಲ ಅನ್ನುತ್ತಿದ್ದಂತೆ, ಕತ್ತಲೆಯಲ್ಲಿ ತನ್ನ ಕೈಯಲ್ಲಿ ಇರಿಸಿಕೊಂಡಿದ್ದ ಬಂದೂಕಿನಿಂದ ಲೋಡ್ ಮಾಡಿ ಅತ್ತೆ ಮೇಲೆ ಫೈರ್ ಮಾಡಿದನು. ಬಂದೂಕಿನ ಶಬ್ದ ಕೇಳಿ ಹೊರ ಬಂದ ನಾದಿನಿ ಸಿಂಧು ಮೇಲೆ‌ ಗುಂಡು ಹಾರಿಸಿದ ರತ್ನಾಕರ್ ಆಕ್ರೋಶದಲ್ಲಿ ನಾಲ್ಕು ಬಾರಿ ಫೈರ್ ಮಾಡಿದನು. ರತ್ನಾಕರ್ ಕೈಯಲ್ಲಿ ಇದ್ದ ಬಂದೂಕಿನಿಂದ ಹಾರಿದ ಮೂರು ಗುಂಡು ತನ್ನ ಪ್ರೀತಿಯ ಮಗಳು ಮೌಲ್ಯ, ಅತ್ತೆ ಜ್ಯೋತಿ, ನಾದಿನಿ ಸಿಂಧುಗೆ ತಗುಲಿ ಸಾವನ್ನಪ್ಪಿದರೇ, ಶಬ್ದ ಕೇಳಿ ಹೊರ ಬಂದ ಅವಿನಾಶ್ ಕಾಲಿಗೆ ಒಂದು ಗುಂಡು ತಗುಲಿತ್ತು. ಮಗಳು ಸಾವನ್ನಪ್ಪಿದನ್ನು ತಿಳಿದ ರತ್ನಾಕರ್ ತಾನು ತಂದ ಬಂದೂಕಿನ ಜೊತೆ ಎಸ್ಕೇಪ್ ಆಗಿದ್ದನು. ಊರಿನವರು ಶಬ್ದ ಕೇಳಿ ಜ್ಯೋತಿ ಮನೆ ಬಳಿ ಬಂದು ನೋಡಿದಾಗ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಅವಿನಾಶ್ ಗಾಯಗೊಂಡು ನರಳಾಡುತ್ತಿದ್ದರು.

ಇದನ್ನೂ ಓದಿ: ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದನಿಗೆ ಹಿಂದೂಗಳಿಂದ ಬೆದರಿಕೆ

ಮೂವರ‌ನ್ನು ಹತ್ಯೆ ಮಾಡಿ ಬಳಿಕ, ಮನೆಯ ಹಿಂಭಾಗದ ಕಾಫಿ‌ ತೋಟಕ್ಕೆ ‌ತೆರಳಿ ಬಂದೂಕಿನಿಂದ ‌ಗುಂಡು ಹಾರಿಸಿಕೊಂಡು ‌ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರತ್ನಾಕರ್ ಬಳಿ‌‌ ಯಾವುದೇ ಪರವಾನಿಗೆ ಪಡೆದ ಬಂದೂಕು ಇರಲಿಲ್ಲ. ರತ್ನಾಕರ್ ಬಳಿ‌‌ಸಿದ ಬಂದೂಕು ಪರವಾನಿಗೆ ಪಡೆದ ಬಂದೂಕಾಗಿದ್ದು ಬಂದುಕಿನ ಮೇಲೆ ಇರೋ ನಂಬರನ್ನು ಅಳಿಸಲಾಗಿದೆ. ಈ ಬಗ್ಗೆ ಬಾಳೆಹೊನ್ನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Wed, 2 April 25