ತಂದೆಯನ್ನೇ ಕೊಂದು ಅಪಘಾತ ಕಥೆ ಕಟ್ಟಿದ: ತನಿಖೆಯಲ್ಲಿ ಮಗನ ಅಸಲಿ ಸತ್ಯ ಬಟಾಬಯಲು
ಕಲಬುರಗಿಯ ರಾಜು ಗಾಯಕವಾಡ್ ಎಂಬಾತ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಸುಖವಾದ ಸಂಸಾರ ಎಲ್ಲರೂ ಅನ್ನೋನ್ಯವಾಗಿದ್ದರು. ಆದರೆ, ಅನ್ಯೋನ್ಯ ಸಂಬಂಧಕ್ಕೆ ಸರಾಯಿ ಚಟ್ ವಿಲನ್ ಆಗಿತ್ತು. ತಂದೆಯಾದವನು ಸಂಸಾರದ ಬಂಡಿಯನ್ನು ಎಳೆದುಕೊಂಡು ಹೋಗಬೇಕಿತ್ತು. ಆದರೆ, ಕುಡಿತದ ದಾಸನಾಗಿ ದಿನ ನಿತ್ಯ ಮನೆಯಲ್ಲಿ ಕಿರಿಕಿರಿ ನೀಡುತ್ತಿದ್ದನು. ಹೆಂಡತಿ ಮೇಲೆ ಹಲ್ಲೆ ಮಾಡುತ್ತಿದ್ದನು. ತಂದೆಯ ಕಾಟಕ್ಕೆ ಬೇಸತ್ತ ಮಗ ಏನು ಮಾಡಿದ? ಇಲ್ಲಿದೆ ಓದಿ.

ಕಲಬುರಗಿ, ಮಾರ್ಚ್ 31: ಕುಡಿತದ ಚಟಕ್ಕೆ ದಾಸನಾಗಿ, ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ರಾಜು ಗಾಯಕವಾಡ (43) ಕೊಲೆಯಾದ ವ್ಯಕ್ತಿ. ರಾಜು ಗಾಯಕವಾಡ ಕಲಬುರಗಿ ಹೊರ ವಲಯ ಶಾಹಬಾದ್ ರಸ್ತೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ರಾಜು, ಮನೆಯಲ್ಲಿ ಮಾತ್ರ ಅಕ್ಷರಶಃ ಖಳನಾಯಕನ ರೀತಿ ಆಗಿದ್ದರು. ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ಮೂಲದ ರಾಜು ಗಾಯಕವಾಡ ಕುಟುಂಬ ಕಳೆದ 20 ವರ್ಷಗಳಿಂದ ಕಲಬುರಗಿಯಲ್ಲಿ ವಾಸವಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ರಾಜು ಕುಡಿತ ಜಾಸ್ತಿ ಆಗಿತ್ತು ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದರು. ಕೊನೆಗೆ ಹಣ ಕಿತ್ತುಕೊಂಡು ಹೋಗಿ ಕುಡಿದು ಬಂದು ಅವರನ್ನೇ ಹೊಡೆಯುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ಮಾರ್ಚ 17 ರಂದು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ.
ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶಪಡಿಸಲು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ರಾಜು ಅವರ ಮೃತದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಶಾಹಬಾದ್ ಮುಖ್ಯರಸ್ತೆಯಲ್ಲಿ ಎಸೆದು, ತಲೆ ಮೇಲೆ ಕಲ್ಲು ಹಾಕಿದ್ದಾರೆ. ಅಪಘಾತ ಎನ್ನೋರೀತಿ ಬಿಂಬಿಸಿದ್ದಾರೆ.
ಇದನ್ನೂ ಓದಿ: ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ, ಚಾಕು ಇರಿತ
ತಂದೆಯ ಶವ ಎಸೆದು ಏನೂ ಅಗಿಯೇ ಇಲ್ಲ ಅನ್ನುವ ರೀತಿ ಮನೆಗೆ ಬಂದು ಆರಾಮಾಗಿ ನಿದ್ದೆ ಮಾಡಿದ್ದಾರೆ. ಮಾರನೇ ದಿನ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗ ಪೊಲೀಸರಿಗೆ ಇದು ಅಪಘಾತವಲ್ಲ, ಕೊಲೆ ಎಂಬ ಸುಳಿವು ಸಿಕ್ಕಿದೆ. ಬಳಿಕ ಮೃತ ರಾಜು ಮನೆಯಲ್ಲಿ ಖಾಕಿ ತಪಾಸಣೆ ನಡೆಸಿದ ವೇಳೆ ಕೊಲೆಯ ಅಸಲಿ ಸತ್ಯ ಗೊತ್ತಾಗಿದೆ.
ಮನೆಯವರನ್ನ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಅಪ್ರಾಪ್ತ ಮಗ ಮತ್ತು ಅಳಿಯ ಒಪ್ಪಿಕೊಂಡಿದ್ದಾರೆ. ಸದ್ಯ ರಾಜ್ಯ ಗಾಯಕವಾಡ ಅವರನ್ನು ಕೊಲೆಗೈದಿರುವ ಅಪ್ರಾಪ್ತ ಮಗ ಮತ್ತು ಅಳಿಯನನ್ನು ಗುಲ್ಬರ್ಗ ವಿವಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Mon, 31 March 25