ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿಗೆ 21 ವರ್ಷದ ಯುವಕ ಸಾವು: ಮೂವರ ಬಂಧನ

ರಾಮನಗರದ ಹೋಂ ಸ್ಟೇನಲ್ಲಿ ಏಳು ವಿದ್ಯಾರ್ಥಿಗಳು ಉಳಿದುಕೊಂಡಿದ್ದಾಗ, ಮೂವರು ಆರೋಪಿಗಳು ನುಗ್ಗಿ ಒಬ್ಬ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿಗೆ 21 ವರ್ಷದ ಯುವಕ ಸಾವು: ಮೂವರ ಬಂಧನ
ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿಗೆ 21 ವರ್ಷದ ಯುವಕ ಸಾವು: ಮೂವರ ಬಂಧನ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2024 | 8:19 PM

ರಾಮನಗರ, ನವೆಂಬರ್​ 02: ಅವ್ರೆಲ್ಲಾ ಕಾಲೇಜು ಮುಗೀತು ಎಲ್ಲಾದರೂ ಪ್ರವಾಸ ಹೋಗೋಣ ಅಂತ ರಾಮನಗರಕ್ಕೆ ಬಂದಿದ್ದರು. ಸ್ವಿಮ್ಮಿಂಗ್​ ಪೂಲ್​ನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಇದೇ ವೇಳೆ ಹೋಮ್ ಸ್ಟೇಗೆ ನುಗ್ಗಿದ ಮೂವರು ಕಿರಾತಕರು ಒಬ್ಬ ವಿದ್ಯಾರ್ಥಿಯ ಪ್ರಾಣವನ್ನು (Death) ತೆಗೆದಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ರಾಮನಗರ ಪಟ್ಟಣ ಹೊರವಲಯದ ಹೋಂ ಸ್ಟೇ ಒಂದರಲ್ಲಿ ಉಳಿದುಕೊಂಡ ಏಳು ಜನ ಯುವಕರ ಪೈಕಿ ಇಬ್ಬರು ಯುವತಿಯರು ಸ್ವಿಮ್ಮಿಂಗ್​ ಪೂಲ್​ನಲ್ಲಿ ಎಂಜಾಯ್ ಮಾಡುತ್ತಾ ಖುಷಿಯಿಂದ ಕೂಗಾಡಿದ್ದಾರೆ. ಇದೇ ಕಾರಣಕ್ಕೆ ಒಳ ನುಗ್ಗಿದ ಸ್ಥಳೀಯ ಆರೋಪಿ ಚಂದು, ನಾಗೇಶ್​ ಮತ್ತು ಮುರುಳಿ ಏಕಾಏಕಿ ದಾಳಿ ಮಾಡಿದ್ದಾರೆ. ಚಂದು ಎನ್ನುವ ಆರೋಪಿ ವಿಡಿಯೋ ಮಾಡುತ್ತಾ ನಿಂತಿದ್ದ ಪುನೀತ್ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ ಕಾರಣ ಸ್ಥಳದಲ್ಲೇ ಕುಸಿದುಬಿದ್ದಿದ್ದ 21 ವರ್ಷದ ಪುನೀತ್ ಅ. 31ನೇ ತಾರೀಖಿಗೆ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಅಮೆಜಾನ್ ಕಂಪನಿಗೆ 30 ಕೋಟಿ ರೂ. ವಂಚನೆ: ಮಂಗಳೂರಿನಲ್ಲಿ ಇಬ್ಬರ ಬಂಧನ

ಬೆಂಗಳೂರಿನ ಬನ್ನೇರುಘಟ್ಟ ಮೂಲದ ಪುನೀತ್ ಚಾರ್ಟಡ್ ಅಕೌಂಟ್ ಆಗಿ ಇಂಟರ್ನ್ಶಿಪ್ ಮಾಡುತ್ತಿದ್ದ. ತಂದೆ ಆಟೋ ಚಾಲಕ, ಆರ್​ಎಸ್​ಎಸ್​ನಲ್ಲಿ ವಿದ್ಯಾರ್ಥಿ ದೆಸೆಯಿಂದ‌ ಕೆಲಸ ಮಾಡುತ್ತಿದ್ದ ಪುನೀತ್, ಲಿಖಿತ್ ಪರಿಚಯವಿರುವ ಚಿಕ್ಕೇನಹಳ್ಳಿಯ ಪಾರಂ‌ ಹೌಸ್ ಕಮ್ ಹೋಮ್ ಸ್ಟೇ ಗೆ ಅ.26ರ ಸಂಜೆ ಹೋಗಿದ್ದಾರೆ. ಸಂಜೆ ವೇಳೆ ಶುರುವಾದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಂದು ಸ್ವಿಮ್ಮಿಂಗ್​ ಪೂಲ್​ನಲ್ಲಿ ಈಜಾಡುತ್ತಿದ್ದ ಇಬ್ಬರ ಯುವತಿಯ ವಿಡಿಯೋ ಮಾಡಿಕೊಳ್ಳಲು ಹೋದಾಗ ಲಿಖಿತ್ ಅದನ್ನು ತಡೆದಿದ್ದಾನೆ.

ಈ ಘಟನೆಯನ್ನು ಸೈಡಲ್ಲಿ ನಿಂತು ಚಿತ್ರಿಸಿಕೊಳ್ಳುತ್ತಿದ್ದ ಪುನೀತ್ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ ಚಂದು ಮತ್ತು ಇಬ್ಬರು ಆರೋಪಿಗಳು ಯುವತಿಯರ ಮುಂದೆ ನೈತಿಕ ಪೊಲೀಸ್ ಗಿರಿಯ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಸಿಗರೇಟ್ ಹಿಡಿದು ಕೆಲ ಕಾಲ ಮಾತಿಗೆ ಮಾತು ಬೆಳೆದು ಕೊಲೆ ಆರೋಪಿ ಚಂದು, ನೀನು ಹೆಣ್ಣು ಮಕ್ಕಳ ಮೇಲೆ ಕೈಮಾಡ್ತಾ ಇದ್ದೀಯಾ, ನಾವು ಮಹಿಳಾ ರಕ್ಷಣಾ ಪಡೆಯವರು ಅಂತ ಕೂಗಾಡಿದ್ದಾನೆ. ಇದನ್ನು ಪ್ರಶ್ನಿಸಿದ ಯುವಕ ನಾವು ಸ್ನೇಹಿತರು, ನಮ್ಮ ಇಚ್ಛೆಯಂತೆ ನಾವು ಬಂದಿದ್ದೇವೆ ಬೇಕಾದರೆ ಯುವತಿಯರಿಗೆ ಕೇಳಿ ಅಂದ್ರೂ ಕೂಡ ಹಲ್ಲೆ ಮಾಡಿದ ಚಂದು ಒಬ್ಬ ಅಮಾಯಕ ಜೀವ ಬಲಿ ಪಡೆದಿದ್ದಾನೆ.

ಇದನ್ನೂ ಓದಿ: ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ: ಐವರು ವಶಕ್ಕೆ

ಇಷ್ಟಕ್ಕೂ ಚಿಕ್ಕೇನಹಳ್ಳಿ ಎಎಸ್​ಪಿ ಲೇಔಟ್​ನಲ್ಲಿರುವ ಹೆಸರಿಲ್ಲ. ಹೋಂ ಸ್ಟೇ ಇದೆ ಎಂಬುದರ ಬಗ್ಗೆಯೇ ಪ್ರವಾಸೋದ್ಯಮ ಇಲಾಖೆಯಲ್ಲಿ ಮಾಹಿತಿ ಇಲ್ಲ. ಲೈಸೆನ್ಸ್ ಕೂಡ ಇಲ್ಲ. ಸ್ಥಳೀಯರ ಹಾಗೂ ಜಾಗದ ಮಾಲಿಕನ ನಡುವೆ ಆಗಾಗ ಕಿರಿಕ್ ನಡೆದದ್ದು, ಮಾಲಿಕನಿಗೆ ಹೆದರಿಸಿ ನಿಯಂತ್ರದಲ್ಲಿ ಇಟ್ಟುಕೊಳ್ಳುವ ಕಾರಣಕ್ಕೆ ಹೋಂ ಸ್ಟೇ ಗೆ ಬರುವ ಪ್ರವಾಸಿಗರನ್ನು ಬೆದರಿಸಲು ಹಾಗೂ ಯುವತಿಯರ ಮುಂದೆ ಪೋಸ್ ಕೊಡಲು ಹೋಗಿ ಪುಂಡರು ಪುನೀತನ ಜೀವ ಬಲಿ ಪಡೆದಿದ್ದಾರೆ.‌

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ