ಸೈಕೋಪಾಥ್, ಸರಣಿ ಹಂತಕ ಮತ್ತು ಶಿಶುಕಾಮಿ ಕಮಾರ್ಗೊ ಬಾರ್ಬೊಸಾನನ್ನು ಕಂಡು ಜೈಲಲ್ಲಿದ್ದ ಕೈದಿಗಳೂ ಹೆದರುತ್ತಿದ್ದರು!

1988 ರಲ್ಲಿ ಈಕ್ವೆಡಾರ್ ನ ಕ್ವಿಟೊ ಎಂಬಲ್ಲಿ ಒಬ್ಬ 12-ವರ್ಷದ ಗ್ಲೋರಿಯ ಅಂಡಿನೋ ಹೆಸರಿನ ಬಾಲಕಿಯ ಕೊಲೆ ಪ್ರಕರಣದಲ್ಲಿ ಅವನು ಅರೆಸ್ಟ್ ಆಗಿದ್ದ. ಕ್ಯಾಂಡಿ ರ್ಯಾಪರ್ ಮೇಲೆ ಅವನ ಫಿಂಗರ್ ಪ್ರಿಂಟ್ ಪತ್ತೆಯಾದ ಬಳಿಕ ಪೊಲೀಸರು ಅವನನ್ನು ಬಂಧಿಸಿದ್ದರು.

ಸೈಕೋಪಾಥ್, ಸರಣಿ ಹಂತಕ ಮತ್ತು ಶಿಶುಕಾಮಿ ಕಮಾರ್ಗೊ ಬಾರ್ಬೊಸಾನನ್ನು ಕಂಡು ಜೈಲಲ್ಲಿದ್ದ ಕೈದಿಗಳೂ ಹೆದರುತ್ತಿದ್ದರು!
ಡೇನಿಯಲ್ ಕಮಾರ್ಗೊ ಬಾರ್ಬೊಸಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 03, 2023 | 7:53 AM

ದಕ್ಷಿಣ ಅಮೇರಿಕ ದೇಶವಾಗಿರುವ ಕೊಲಂಬಿಯಾದ ಸೈಕೋಪಾಥ್, ಸರಣಿ ಹಂತಕ ಡೇನಿಯಲ್ ಕಮಾರ್ಗೊ ಬಾರ್ಬೊಸಾ (Daniel Camargo Barbosa) ಅಸಾಮಾನ್ಯ ಅಪರಾಧಿ ಅಂತ ಹೇಳಿದರೆ ಅವನ ಕ್ರೌರ್ಯ, ಪಾಶವೀತನದ ಪರಿಚಯವಾಗದು. ಒಂದು ಮಾಹಿತಿಯ ಪ್ರಕಾರ ಅವನು ಕೊಲಂಬಿಯ (Columbia) ಮತ್ತು ಈಕ್ವೆಡಾರ್ ನಲ್ಲಿ (Ecuador) 150 ಕ್ಕೂ ಹೆಚ್ಚು ಬಾಲಕಿಯರ ಹತ್ಯೆಗೈದಿದ್ದ. ಬಾರ್ಬೊಸಾ ಬಾಲ್ಯದಲ್ಲೇ ಅಮ್ಮನನ್ನು ಕಳೆದುಕೊಂಡಿದ್ದ ಮತ್ತು ಅವನನ್ನು ಬೆಳೆಸಿದ್ದು ಕ್ರೂರ ಸ್ವಭಾವದವಳಾಗಿದ್ದ ಮಲತಾಯಿ. ಆಕೆ ಸುಖಾಸುಮ್ಮನೆ ಅವನಿಗೆ ಹೊಡೆಯುತ್ತಿದ್ದಳು ಮತ್ತು ಕೆಲವು ಸಲ ಹುಡುಗಿಯರಂತೆ ಡ್ರೆಸ್ ಮಾಡಿಸುತ್ತಿದ್ದಳು. ಬಾರ್ಬೊಸಾ ಅಪರಾಧ ಲೋಕಕ್ಕೆ ಕಾಲಿಟ್ಟಾಗ ಅವನೊಂದಿಗೆ ಎಸ್ಪರಾಂಜಾ ಹೆಸರಿನ ಒಬ್ಬ ಸಂಗಾತಿ ಇದ್ದಳು. ಅವಳು ಬಾಲಕಿಯರನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಅಪಾರ್ಟ್ಮೆಂಟ್ ಗೆ ಕರೆದೊಯ್ದು ಅವರಿಗೆ ಡ್ರಗ್ಸ್ ಕೊಡುತ್ತಿದ್ದಳು. ಅವರು ಪ್ರಜ್ಞಾಹೀನರಾದ ಮೇಲೆ ಬಾರ್ಬೋಸಾ ರೇಪ್ ಮಾಡುತ್ತಿದ್ದ. ಈ ವಿಲಕ್ಷಣ ಜೋಡಿ ಯಾರನ್ನೂ ಕೊಂದಿರಲಿಲ್ಲ. ಆದರೆ, 1964ರಲ್ಲಿ ಅವರ 5ನೇ ಆಹುತಿ ಪೊಲೀಸ್ ಗೆ ದೂರು ಸಲ್ಲಿಸಿದ ನಂತರ ಬಾರ್ಬೊಸಾ ಮತ್ತು ಎಸ್ಪರಾಂಜಾರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಎಂಟು ವರ್ಷ ಸೆರೆವಾಸದ ನಂತರ ಹೊರಬಂದ ಬಾರ್ಬೊಸಾನಲ್ಲಿ ರಾಕ್ಷಸ ಅವತರಿಸಿಬಿಟ್ಟಿದ್ದ,

ಕೊಲಂಬಿಯಾದಲ್ಲಿ  80 ಆಹುತಿಗಳು 

ಕೊಲಂಬಿಯನ್ ಪೊಲೀಸ್ ಮೂಲಗಳ ಪ್ರಕಾರ ಬಾರ್ಬೋಸಾ ಆ ದೇಶದಲ್ಲಿ 80ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದಾನೆ. ಅವನ ಮೊಟ್ಟಮೊದಲ ಬಲಿಯೆಂದರೆ, ಒಬ್ಬ 9-ವರ್ಷದ ಬಾಲಕಿ. ಅವಳನ್ನು ಕೊಂದ ನಂತರ ಬಾರ್ಬೊಸಾ ಪುನಃ ಜೈಲು ಸೇರಿದ್ದ. ತನಗೆ ಪಿಶಾಚಿಗಳ ಜೊತೆ ಸ್ನೇಹವಿದೆ, ಅವರೊಂದಿಗೆ ನಾನು ಮಾತಾಡುತ್ತಿರುತ್ತೇನೆ ಅಂತ ಅವನು ಹೇಳುತ್ತಿದ್ದ ಕಾರಣ ಕಾರಾಗೃಹದಲ್ಲಿ ಜೊತೆ ಕೈದಿಗಳು ಅವನನ್ನು ಕಂಡು ಹೆದರುತ್ತಿದ್ದರಂತೆ. 1984 ರಲ್ಲಿ ಅವನು ಲಾ ಇಸ್ಲಾ ಡೆ ಲಾ ಗೊರ್ಗೊನಾ ಜೈಲಿನಿಂದ ತಪ್ಪಿಸಿಕೊಂಡಿದ್ದ. ಆಗ ಜೈಲಿನ ಅಧಿಕಾರಿಯೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಈಜುತ್ತಿದ್ದಾಗ ಅವನು ಶಾರ್ಕ್ ಗಳಿಗೆ ಬಲಿಯಾದ,’ ಎಂದಿದ್ದರು.

ಇದನ್ನೂ ಓದಿ:  ಭಾರತದೊಂದಿಗೆ ಕೆಲಸ ಮಾಡಲು ಸಿದ್ಧ: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ

ಅದರೆ ಅಸಲಿಗೆ ಬಾರ್ಬೊಸಾ ನೆರೆರಾಷ್ಟ್ರ ಈಕ್ವೆಡಾರ್ ಗೆ ನುಸುಳಿದ್ದ. ಅಲ್ಲೂ ಅವನು ಬಾಲಕಿಯರನ್ಮು ರೇಪ್ ಮಾಡಿ ಕೊಲ್ಲುವ ಹೀನ ಕ್ರೌರ್ಯವನ್ನು ಅವ್ಯಾಹತವಾಗಿ ಮುಂದುವರಿಸಿದ.

ಕ್ಯಾಂಡಿ ರ್ಯಾಪರ್ ಸುಳಿವು ನೀಡಿತ್ತು

1988 ರಲ್ಲಿ ಈಕ್ವೆಡಾರ್ ನ ಕ್ವಿಟೊ ಎಂಬಲ್ಲಿ ಒಬ್ಬ 12-ವರ್ಷದ ಗ್ಲೋರಿಯ ಅಂಡಿನೋ ಹೆಸರಿನ ಬಾಲಕಿಯ ಕೊಲೆ ಪ್ರಕರಣದಲ್ಲಿ ಅವನು ಅರೆಸ್ಟ್ ಆಗಿದ್ದ. ಕ್ಯಾಂಡಿ ರ್ಯಾಪರ್ ಮೇಲೆ ಅವನ ಫಿಂಗರ್ ಪ್ರಿಂಟ್ ಪತ್ತೆಯಾದ ಬಳಿಕ ಪೊಲೀಸರು ಅವನನ್ನು ಬಂಧಿಸಿದ್ದರು.

ಕೊಲಂಬಿಯಾ ಕಾರಾಗೃಹದಿಂದ ತಪ್ಪಿಸಿಕೊಂಡು ಈಕ್ವೆಡಾರ್ ಗೆ ಹೋದ ಬಳಿಕ 71 ಬಾಲಕಿಯರನ್ನು ಕೊಂದಿರುವುದಾಗಿ ಅವನು ಹೇಳಿದ್ದ. ತನ್ನ ಆಹುತಿಗಳ ಶವಗಳನ್ನು ಹೂತು ಹಾಕಿದ ಸ್ಥಳಗಳನ್ನೆಲ್ಲ ಅವನು ಪೊಲೀಸರಿಗೆ ತೋರಿಸಿದ್ದ. ಅವನ ಮುಖದಲ್ಲಿ ಪಶ್ಚಾತ್ತಪ ಒಂದೇ ಒಂದು ಎಳೆ ಕಾಣಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಅವನು ಮಚ್ಚಿನಿಂದ ಅವರನ್ನು ಕೊಚ್ಚಿಹಾಕುತ್ತಿದ್ದನಂತೆ. ಅಪ್ರಾಪ್ತ ಬಾಲಕಿಯರು ಕಿರಿಚಾಡುವುದು ಬಹಳ ಇಷ್ಟವಾಗುತ್ತಿದ್ದ ಕಾರಣಕ್ಕೆ ಅಂಥವರನ್ನು ಆರಿಸಿಕೊಳ್ಳುತ್ತಿದೆ, ಅವರ ನೋವಿನಿಂದ ಕಿರುಚಿದರೆ ತನಗೆ ಹೆಚ್ಚಿನ ತೃಪ್ತಿ ಸಿಗುತಿತ್ತು ಎಂದು ಬಾರ್ಬೊಸಾ ಹೇಳಿದ್ದ.

ಮಹಿಳೆಯರು ನಂಬಿಕೆಗೆ ಅರ್ಹರಲ್ಲ 

ಮಹಿಳೆಯರ ಅವಿಶ್ವಸನೀಯತೆ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ತಾನಂದುಕೊಳ್ಳುವ ಹಾಗೆ ಅವರಿಲ್ಲ ಎನ್ನುವ ಕಾರಣಕ್ಕೆ ಕೊಲ್ಲುತ್ತಿದ್ದೆ ಅಂತಲೂ ಬಾರ್ಬೋಸಾ ಹೇಳಿದ್ದ. ಅವನಿಗೆ ಬಲಿಯಾದವರೆಲ್ಲ ಅಪ್ರಾಪ್ತೆಯರಾಗಿದ್ದರು!

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಅಮೆರಿಕದ ಪೊಲೀಸರಿಗೆ ಸವಾಲಾಗಿ ಕಾಡಿದ ‘ಬಾಯ್ ಇನ್ ದಿ ಬಾಕ್ಸ್’ ಪ್ರಕರಣ 65 ವರ್ಷಗಳ ನಂತರವೂ ಇತ್ಯರ್ಥಗೊಂಡಿಲ್ಲ!

1989 ರಲ್ಲಿ ಬಾರ್ಬೊಸಾನನ್ನು ಈಕ್ವೆಡಾರ್ ನಲ್ಲಿ ಬಂಧಿಸಿ 16-ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಈಕ್ವೆಡಾರ್ ಅದೇ ಗರಿಷ್ಠ ಅವಧಿಯ ಶಿಕ್ಷೆ. ಪಿನಲ್ ಗಾರ್ಸಿಯ ಮೊರಿನೋ ಡೆ ಕ್ವಿಟೋ ಜೈಲಲ್ಲಿದ್ದಾಗ ಅವನು ಕ್ರೈಸ್ತ ಧರ್ಮವನ್ನು ಅಂಗೀಕರಿಸಿದನಂತೆ. ಪೆಡ್ರೊ ಅಲೊನ್ಸೊ ಲೋಪೆಜ್ ಹೆಸರಿನ ಇನ್ನೊಬ್ಬ ಶಿಶುಕಾಮಿ ಮತ್ತು ಸರಣಿ ಹಂತಕನ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಅವನು ಕೊಲಂಬಿಯ, ಈಕ್ವೆಡಾರ ಮತ್ತು ಪೆರು ದೇಶಗಳಲ್ಲಿ 300 ಕ್ಕೂ ಹೆಚ್ಚು ಬಾಲಕಿಯರನ್ನು ಕೊಂದಿದ್ದ. ಪೆಡ್ರೊ ಮತ್ತು ಬಾರ್ಬೊಸಾನನ್ನು ಒಂದೇ ಜೈಲಲ್ಲಿ ಇರಿಸಲಾಗಿತ್ತು.

ವರದಿಯೊಂದರ ಪ್ರಕಾರ ಬಾರ್ಬೊಸಾಗೆ ಬಲಿಯಾದ ಬಾಲಕಿಯೊಬ್ಬಳ ಸಂಬಂಧಿ ಲೂಯಿಸ್ ಮಸಾಚೆ ನರ್ವೇಜ್ ಎನ್ನುವವನು ಜೈಲಲ್ಲೇ ಸರಣಿ ಹಂತಕ ಬಾರ್ಬೊಸಾನನ್ನು ಕೊಂದುಬಿಟ್ಟ.

ಹೆಚ್ಚಿನ ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್