AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಅಳಿಯನ ಜೊತೆ ಅತ್ತೆಯ ಲವ್ವಿ-ಡವ್ವಿ: ಆಮೇಲೇನಾಯ್ತು?

Crime News In Kannada: ಪ್ರೀತಿ ಪ್ರೇಮದ ಅಮಲಿನಲ್ಲಿ ಇಬ್ಬರೂ ತಮ್ಮ ಸಂಬಂಧಗಳನ್ನೇ ಮೆರೆತಿದ್ದಾರೆ. ಅಲ್ಲದೆ ಪ್ರೇಮ ಪಕ್ಷಿಗಳಾಗಿ ಜೊತೆ ಜೊತೆಯಾಗಿ ತಿರುಗಾಡಲಾರಂಭಿಸಿದ್ದರು.

Crime News: ಅಳಿಯನ ಜೊತೆ ಅತ್ತೆಯ ಲವ್ವಿ-ಡವ್ವಿ: ಆಮೇಲೇನಾಯ್ತು?
ಸಾಂದರ್ಭಿಕ ಚಿತ್ರ
TV9 Web
| Updated By: ಝಾಹಿರ್ ಯೂಸುಫ್|

Updated on: Jul 04, 2022 | 7:09 PM

Share

ಪ್ರೀತಿಗೆ ಕಣ್ಣಿಲ್ಲ ನಿಜ, ಆದರೆ ಪ್ರೀತಿಸೋರಿಗೆ ಬುದ್ದಿ ಇಲ್ವಾ? ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಅದರಲ್ಲೂ ಕೆಲ ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು ವಿಚಿತ್ರ ಪ್ರಕರಣವೊಂದು ರಾಜಸ್ಥಾನದ ಬಾರ್ಮರ್​ನಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ಅತ್ತೆ ಮತ್ತು ಅಳಿಯನೇ ಪ್ರಮುಖ ಪಾತ್ರಧಾರಿಗಳು. ಅಂದರೆ ವರ್ಷಗಳ ಹಿಂದೆ ದರಿಯಾ ದೇವಿ (38) ತನ್ನ ಮಗಳನ್ನು ಖರಾಂತಿಯಾ ಪ್ರದೇಶದ ಹೋತಾರಾಮ್ (22) ​ಗೆ ವಿವಾಹ ಮಾಡಿಕೊಟ್ಟಿದ್ದರು. ಆರಂಭದಲ್ಲಿ ಅತ್ತೆ-ಅಳಿಯನ ಸಂಬಂಧದಲ್ಲಿದ್ದ ದರಿಯಾ ದೇವಿ ಹಾಗೂ ಹೋತಾರಾಮ್ ನಡುವೆ ಹೆಚ್ಚಿನ ಅನೋನ್ಯತೆ ಮೂಡಿದೆ. ಈ ಅನೋನ್ಯತೆಯು ನಿಧಾನವಾಗಿ ಅಳಿಯನ ಮೇಲಿನ ಪ್ರೇಮವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ತನ್ನ ಮನದ ಇಂಗಿತವನ್ನು ದರಿಯಾ ದೇವಿ ಅಳಿಯನಿಗೆ ತಿಳಿಸಿದ್ದಾಳೆ. ಆದರೆ ಇತ್ತ ಹೋತಾರಾಮ್​ಗೂ ಅದಾಗಲೇ ಅತ್ತೆಯ ಮೇಲೆ ಪ್ರೇಮಾಂಕುರವಾಗಿತ್ತು.

ಪ್ರೀತಿ ಪ್ರೇಮದ ಅಮಲಿನಲ್ಲಿ ಇಬ್ಬರೂ ತಮ್ಮ ಸಂಬಂಧಗಳನ್ನೇ ಮೆರೆತಿದ್ದಾರೆ. ಅಲ್ಲದೆ ಇಬ್ಬರೂ ಪ್ರೇಮ ಪಕ್ಷಿಗಳಾಗಿ ಜೊತೆ ಜೊತೆಯಾಗಿ ತಿರುಗಾಡಲಾರಂಭಿಸಿದ್ದರು. ಈ ವಿಚಾರ ಮಗಳಿಗೆ ಅನುಮಾನ ಮೂಡಿಸದಿದ್ದರೂ, ಊರವರಿಗೆ ಗೊತ್ತಾಗಿತ್ತು. ಇದರ ನಡುವೆ ಇಬ್ಬರೂ ಜೊತೆಯಾಗಿ ಬದುಕಲು ಕೂಡ ನಿರ್ಧರಿಸಿದ್ದರು. ಆದರೆ ಮಗಳಿಗೆ ಮೋಸ ಮಾಡಿ, ಸಮಾಜವನ್ನು ಎದುರು ಹಾಕಿಕೊಳ್ಳುವ ಭಯ ಇಬ್ಬರಲ್ಲೂ ಆವರಿಸಿದೆ.

ಅಲ್ಲದೆ ಇಬ್ಬರ ನಡುವಿನ ಸಂಬಂಧದ ಬಗ್ಗೆ  ಊರಲ್ಲಿ ಚರ್ಚೆಗಳು ಶುರುವಾಗಿದ್ದವು. ಇದರಿಂದ ಅವಮಾನಿತರಾದ ಅತ್ತೆ-ಅಳಿಯ ಜೋಡಿ ಆತ್ಮಹತ್ಯೆಯ ದಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮನೆಯಿಂದ ಪಡಿತರ ತರಲು ಹೋದ ಹೋತಾರಾಮ್ ಹಾಗೂ ದರಿಯಾ ದೇವಿ ಮತ್ತೆ ಹಿಂತಿರುಗಿರಲಿಲ್ಲ. ಆರಂಭದಲ್ಲಿ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮರುದಿನ ಊರ ಹೊರಗಿನ ಜಾಗದ ಮರವೊಂದರಲ್ಲಿ ಇಬ್ಬರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಈ ಬಗ್ಗೆ ಬಾರ್ಮರ್​ನ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ಇಬ್ಬರ ಬಗ್ಗೆಗಿನ ಮಾಹಿತಿ ಕಲೆಹಾಕಿದ್ದಾರೆ. ಈ ವೇಳೆ ಇಬ್ಬರು ಅದೇ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಅಲ್ಲದೆ ಹೆಚ್ಚಿನ ತನಿಖೆಯ ವೇಳೆ ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಜೊತೆಯಾಗಿ ಬಾಳುವ ಅವಕಾಶ ಸಿಗಲ್ಲ ಎಂಬ ಭಯದಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿಯ ಅಮಲಿನಲ್ಲಿ ಮೈಮರೆತ ಅತ್ತೆ-ಅಳಿಯನ ಪ್ರೇಮಕಥೆ ದಾರುಣ ಅಂತ್ಯ ಕಂಡಿದೆ.

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ