ಚಿಕ್ಕಮಗಳೂರು: ಗಂಡ ಹೆಂಡತಿ ನಡುವಿನ ಗಲಾಟೆಗೆ‌ 5 ವರ್ಷದ ಮಗಳು ಬಲಿ

ಸೆಪ್ಟೆಂಬರ್​ 19 ರಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಐದು ವರ್ಷದ ಮಗುವಿನ ಶವ ಪತ್ತೆಯಾಗಿತ್ತು. ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿದೆ ಎಂದು ಸ್ವತಃ ತಂದೆಯೇ ಹೇಳಿದ್ದನು. ಇದೀಗ, ಪೊಲೀಸ್​ ತನಿಖೆ ವೇಳೆ ಸತ್ಯ ಬಯಲಾಗಿದೆ. ಕೊಲೆಗಾರ ಯಾರು ಅಂತ ಗೊತ್ತಾಗಿದೆ.

ಚಿಕ್ಕಮಗಳೂರು: ಗಂಡ ಹೆಂಡತಿ ನಡುವಿನ ಗಲಾಟೆಗೆ‌ 5 ವರ್ಷದ ಮಗಳು ಬಲಿ
ಆರೋಪಿ ಮಂಜುನಾಥ್​, ಬಾಲಕಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on: Sep 25, 2024 | 9:45 AM

ಚಿಕ್ಕಮಗಳೂರು, ಸೆಪ್ಟೆಂಬರ್​ 25: ಅಜ್ಜಂಪುರ (Ajjampur) ತಾಲೂಕಿನ ಶಿವನಿ ಗ್ರಾಮದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದೆ. ತಂದೆಯಿಂದಲೇ ಬಾಲಕಿ ಕೊಲೆಯಾಗಿದ್ದಾಳೆ ಎಂಬ ವಿಚಾರ ಪೊಲೀಸ್ (Police)​ ತನಿಖೆ ವೇಳೆ ತಿಳಿದುಬಂದಿದೆ. ಮಗಳನ್ನು ಹತ್ಯೆಗೈದ ತಂದೆ ಮಂಜುನಾಥ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಹೆಂಡತಿ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದನು. ಇದೇ ಅನುಮಾನದಲ್ಲಿ ಮಂಜುನಾಥ್ ನಿತ್ಯವೂ ಕುಡಿದು ಬಂದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಇದೇ ಸೆಪ್ಟೆಂಬರ್​ 19 ರಂದು ಕುಡಿದು ಮಧ್ಯಾಹ್ನ ಮನೆಗೆ ಬಂದ ಮಂಜುನಾಥ್​ನನ್ನು ಐದು ವರ್ಷದ ಮಗಳು ಪ್ರಶ್ನಿಸಿದ್ದಾಳೆ. ಇದರಿಂದ ಕ್ರೋಧಗೊಂಡ ಮಂಜುನಾಥ್​ ಕೊಳಪೆಯಿಂದ ಮಗಳ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸಾವಿನ ಮನೆಯಲ್ಲಿ ಹಲವರ ಬೆರಳಚ್ಚು ಗುರುತು ಪತ್ತೆ

ಎರಡು ಗ್ಯಾಂಗ್ ನಡುವೆ ಗಲಾಟೆ, 8 ಮಂದಿ ಅರೆಸ್ಟ್​

ಬೆಂಗಳೂರು: ಗಣೇಶ ಕೂಡಿಸುವ ವಿಚಾರವಾಗಿ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದಿದೆ. ಘಟನೆಗೆ ಸಂಬಂಧಿಸಿದ ಒಟ್ಟು ಎಂಟು ಜನ ಆರೋಪಿಗಳನ್ನು ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಶ್ವಾಸ್ ಹಾಗೂ ಸುಹಾಸ್ ಎಂಬುವರು ರಸ್ತೆ ಮಧ್ಯೆ ಯಾಕೆ ಗಣೇಶ ಇಟ್ಟಿದ್ದರು. ರಸ್ತೆ ಮಧ್ಯೆ ಯಾಕೆ ಗಣೇಶ ಇಟ್ಟಿದ್ದಿರಾ ಚಂದನ್ ಪ್ರಶ್ನಿಸಿದ್ದನು. ಈ ವಿಚಾರವಾಗಿ ರೌಡಿಶೀಟರ್ ಚಂದನ್ ಹಾಗೂ ಪ್ರದೀಪ್ ಗ್ಯಾಂಗ್ ನಡುವೆ ನಡೆದಿದ್ದ ಗಲಾಟೆ ನಡೆದಿದೆ. ಸೆಪ್ಟೆಂಬರ್​ 22ರ ಮಧ್ಯರಾತ್ರಿ ಗಲಾಟೆ ನಡೆದಿದೆ. ಚಂದನ್, ದೀಪಕ್, ರಕ್ಷಿತ್, ಪ್ರದೀಪ್, ವಿಶ್ವಾಸ್, ಸುಹಾಸ್, ಚಿರಾಗ್ ಬಂಧಿತರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ