Fire Accident: ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ 10ನೇ ಮಹಡಿ
ಸುಮಾರು 10 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಲು ಪ್ರಯತ್ನಿಸಿವೆ. ಅಗ್ನಿಶಾಮಕ ದಳದ ಕಾರ್ಯಾಚರಣೆಗಳು ನಡೆಯುತ್ತಿವೆ. ಬೆಂಕಿ ಅನಾಹುತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.
ಮುಂಬೈ: ಮುಂಬೈನ ಕಂಜುರ್ಮಾರ್ಗ್‌ನ ಎನ್‌ಜಿ ರಾಯಲ್ ಪಾರ್ಕ್ ವಸತಿ ಪ್ರದೇಶದಲ್ಲಿನ ಅಪಾರ್ಟ್ಮೆಂಟ್ನ 10ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ (Fire Accident) ದೃಶ್ಯಗಳನ್ನು ಎಎನ್‌ಐ ಟ್ವೀಟ್ ಮಾಡಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಉಂಟಾದ ಬೆಂಕಿಯಿಂದ ದಟ್ಟವಾದ ಹೊಗೆಯು ಎಲ್ಲೆಡೆ ಆವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಇದು ಎರಡನೇ ಹಂತದ ಬೆಂಕಿಯಾಗಿದೆ. ಈಗಾಗಲೇ ಬೆಂಕಿ ಹಲವೆಡೆ ಆವರಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಾರಣವೇನೆಂಬುದನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಸುಮಾರು 10 ಅಗ್ನಿಶಾಮಕ ಇಂಜಿನ್‌ಗಳನ್ನು ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ರವಾನಿಸಲಾಗಿದೆ. ಇದು ಐಐಟಿ ಬಾಂಬೆಗೆ ಮುಖ್ಯ ಪ್ರವೇಶ ಕೇಂದ್ರವಾಗಿದೆ. ಪೊವೈ ಅನ್ನು ಮುಂಬೈನ ಸ್ಟಾರ್ಟ್-ಅಪ್ ಹಬ್ ಎಂದು ಕರೆಯಲಾಗುತ್ತದೆ ಮತ್ತು ಭಾರತದ ಆರ್ಥಿಕ ರಾಜಧಾನಿಯಲ್ಲಿ ವಲಸಿಗರಿಗೆ ನಿವಾಸದ ಆದ್ಯತೆಯ ಪ್ರದೇಶವಾಗಿದೆ.
#WATCH | Maharashtra: A level 2 fire breaks out in NG Royal Park area in Kanjurmarg of Mumbai. Around 10 fire tenders are present at the spot. Fire fighting operations are underway. pic.twitter.com/qUGk4j4Crd
— ANI (@ANI) February 28, 2022
ಬೆಂಕಿ ಹೊತ್ತಿಕೊಂಡು ಕಟ್ಟಡದಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.
ಸುಮಾರು 10 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಲು ಪ್ರಯತ್ನಿಸಿವೆ. ಅಗ್ನಿಶಾಮಕ ದಳದ ಕಾರ್ಯಾಚರಣೆಗಳು ನಡೆಯುತ್ತಿವೆ. ಬೆಂಕಿ ಅನಾಹುತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಂಕಿಯಿಂದ ಹೊತ್ತಿ ಉರಿಯಿತು ಸ್ಟೇಶನ್ನಲ್ಲಿ ನಿಂತಿದ್ದ ರೈಲು; ದಟ್ಟ ಹೊಗೆ, ಭಯಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಗ್ನಿ ದುರಂತ; ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಗ್ಯಾರೇಜ್