AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳತನ ಮಾಡುವುದನ್ನು ಕಂಡಳೆಂದು ಬಾಲಕಿಯನ್ನು ಕೊಂದು, ಸುಟ್ಟು ಹಾಕಿದ ಬಾಲಕ

ಕಳ್ಳತನ ಮಾಡುತ್ತಿರುವುದನ್ನು ಬಾಲಕಿ ನೋಡಿದಳೆಂದು ಬಾಲಕ ಆಕೆಯನ್ನು ಕೊಂದು, ಸುಟ್ಟು ಹಾಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆಕೆಯನ್ನಯ ಕೊಲ್ಲಲು ನನಗೆ ಇಷ್ಟವಿರಲಿಲ್ಲ ಆದರೆ ತಾನು ಕಳ್ಳತನ ಮಾಡುತ್ತಿರುವುದನ್ನು ಯಾರಿಗೂ ಹೇಳಬೇಡ ಎಂದು ಹೇಳಿದರೂ ಆಕೆ ಸುಮ್ಮನಿರಲು ಸಿದ್ಧಳಿರಲಿಲ್ಲ ಹೀಗಾಗಿ ಅನಿವಾರ್ಯವಾಗಿ ಕೊಲೆ ಮಾಡಬೇಕಾಯಿತು ಎಂದು ಆರೋಪಿ ಹೇಳಿದ್ದಾನೆ.

ಕಳ್ಳತನ ಮಾಡುವುದನ್ನು ಕಂಡಳೆಂದು ಬಾಲಕಿಯನ್ನು ಕೊಂದು, ಸುಟ್ಟು ಹಾಕಿದ ಬಾಲಕ
ನಯನಾ ರಾಜೀವ್
|

Updated on: Jul 02, 2024 | 8:28 AM

Share

ಪಕ್ಕದ ಮನೆಯಲ್ಲಿ ಕಳ್ಳತನ ಮಾಡಲು ಹೋಗಿ ಬಾಲಕನೊಬ್ಬ 9 ವರ್ಷದ ಬಾಲಕಿ ಎದುರು ಸಿಕ್ಕಿಬಿದ್ದಿದ್ದ. ಆಕೆಗೆ ಯಾರ ಬಳಿಯೂ ಈ ವಿಚಾರವನ್ನು ಹೇಳದಂತೆ ಮನವಿ ಮಾಡಿದ್ದ ಆದರೆ ಆಕೆ ಒಪ್ಪದ ಕಾರಣ ಆಕೆಯನ್ನು ಕೊಂದು, ದೇಹವನ್ನು ಸುಟ್ಟು ಹಾಕಿರುವ ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ, ಇಲ್ಲಿನ ಹೌಸಿಂಗ್ ಸೊಸೈಟಿಯಲ್ಲಿರುವ ತನ್ನ ಫ್ಲಾಟ್​ನಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿರುವುದನ್ನು ಆಕೆ ನೋಡಿದ್ದಳು.

ಆ ಕಾರಣಕ್ಕೆ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿ, ದೇಹಕ್ಕೆ ಬೆಂಕಿ ಹೆಚ್ಚಿದ್ದಾನೆ. ಮೃತ ಬಾಲಕಿಯ ಕುಟುಂಬದವರು ಹಾಗೂ ಆರೋಪಿ ಯುವಕನ ಕುಟುಂಬದವರು ಆಪ್ತರಾಗಿದ್ದರು. ಮೃತ ಬಾಲಕಿ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು, ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆತ ಆಕೆಯ ಮನೆಗೆ ಬಂದು ಕಳ್ಳತನ ಮಾಡಿದ್ದ. ಆತ 10ನೇ ತರಗತಿ ವಿದ್ಯಾರ್ಥಿ.

ಆರಂಭದಲ್ಲಿ ಇಬ್ಬರು ಮನೆಗೆ ನುಗ್ಗಿ ಬಾಲಕಿಯನ್ನು ಕೊಂದಿದ್ದಾರೆ ಎಂದು ಪೊಲೀಸರ ಬಳಿ ಹೇಳಲು ಪ್ರಯತ್ನಿಸಿದ್ದ ಆದರೆ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮತ್ತಷ್ಟು ಓದಿ: ಸಮ್ಮಿಲನಕ್ಕೆ ಆಹ್ವಾನಿಸಿ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಗೆಳತಿ, ಕಾರಣ ಕೇಳಿ ಪೊಲೀಸರೇ ದಂಗು!

20 ಸಾವಿರ ಸಾಲ ತೀರಿಸಲು ಚಿನ್ನಾಭರಣ ಕದಿಯುತ್ತಿದ್ದೆ ಎಂದು ಹೇಳಿದ್ದಾನೆ. ಆಕೆಯನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ, ಆದರೆ ಆಕೆ ಸುಮ್ಮನಿರಲು ನಿರಾಕರಿಸಿದ್ದರಿಂದ ತಾನು ಸಿಕ್ಕಿಬೀಳುವ ಭಯದಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಈ ಸಂಬಂಧ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಬಾಲಕಿಯ ತಂದೆ ಕಚೇರಿಗೆ ಹೋಗಿದ್ದರು, ತಾಯಿ ಹಾಗೂ ಸಹೋದರ ಅದೇ ಸೊಸೈಟಿಯಲ್ಲಿರುವ ಆರೋಪಿಯ ಮನೆಗೆ ಹೋಗಿದ್ದರು.

ಬಾಲಕಿಯ ತಾಯಿ ತನ್ನ ಮನೆಯಲ್ಲಿ ಇಲ್ಲದಿರುವುದನ್ನು ನೋಡಿದ ಆರೋಪಿ ತಾನು ಟ್ಯೂಷನ್​ಗೆ ಹೋಗುವುದಾಗಿ ಹೇಳಿ ಬಾಲಕಿಯ ಮನೆಗೆ ಬಂದಿದ್ದ. ಕಾಲಿಂಗ್​ ಬೆಲ್ ಆದಾಗ ಬಾಲಕಿ ಬಾಗಿಲು ತೆರೆದಿದ್ದಳು. ಸೋಫಾ ಮೇಲೆ ಕುಳಿತು ನೀರು ಕೇಳಿದ್ದ, ನಂತರ ಹೋಂವರ್ಕ್​ನಲ್ಲಿ ಸಹಾಯ ಮಾಡಿದ್ದ. ಆಕೆ ಬಾತ್​ ರೂಂಗೆ ಹೋದಾಗ ಕೆಲವು ಆಭರಣಗಳನ್ನು ಕದ್ದಿದ್ದ.

ಬಾತ್​ರೂಂನಿಂದ ಬಂದ ಬಾಲಕಿ ಆತನ ಕೈಲಿದ್ದ ಆಭರಣ ನೋಡಿ ಕಿರುಚಾಡಲು ಶುರು ಮಾಡಿದ್ದಳು, ಆಗ ಆತ ಆಭರಣವನ್ನು ಬಾಲ್ಕಿನಿಯ ಕೆಳಗೆ ಎಸೆದಿದ್ದ, ನಂತರ ಆಕೆ ಆರೋಪಿಗೆ ಹೊಡೆಯಲು ಆರಂಭಿಸಿದ್ದಳು. ಆತ ಕೂಡಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮನೆಯ ದೇವರಕೋಣೆಯಲ್ಲಿದ್ದ ಕರ್ಪೂರದ ಸಹಾಯದಿಂದ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಬಾಲಕಿಯ ತಾಯಿ ಮನೆಗೆ ಬಂದಾಗ ಕಾಲಿಂಗ್​ ಬೆಲ್ ಒತ್ತಿದ್ದರೂ ಯಾರೂ ಬಾಗಿಲು ತೆರೆದಿರಲಿಲ್ಲ ಆಗ ನೆರೆಹೊರೆಯವರನ್ನು ಕರೆದು ಮನೆಗೆ ಹೋದಾಗ ಮಗಳ ಅರೆಬೆಂದ ದೇಹವನ್ನು ಕಂಡು ಕಂಗಾಲಾಗಿದ್ದರು. ಒಂದು ಮೂಲೆಯನ್ನು ಬಾಲಕ ಕೂಡ ಕುಳಿತಿರುವುದನ್ನು ಕಂಡರು.

ಇಬ್ಬರು ಕಳ್ಳರು ಮನೆಗೆ ನುಗ್ಗಿ ಆತನನ್ನು ಕೆಟ್ಟದಾಗಿ ಥಳಿಸಿದ್ದರು ಎಂದು ಹೇಳಿದ್ದ ಬಳಿಕ ಪೊಲೀಸರ ಬಳಿ ಆಕೆಯನ್ನು ತಾನೇ ಕೊಂದಿದ್ದು ಎಂದು ಒಪ್ಪಿಕೊಂಡಿದ್ದಾನೆ. 20 ಸಾವಿರ ಸಾಲ ಇತ್ತುಅ ದನ್ನು ತೀರಿಸಲು ಕಳ್ಳತನ ಮಾಡಲು ನಿರ್ಧರಿಸಿದ್ದೆ ಎಂದು ಹೇಳಿದ್ದಾನೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ