AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಗಾಜಿಯಾಬಾದ್ ಕಾಲುವೆಯಲ್ಲಿ ಪತ್ತೆ

ಗುರುಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಗಂಗ್ನಹಾರ್ ಕಾಲುವೆಯ ಬಳಿ ಆತನ ಕೊಳೆತ ಮೃತದೇಹ ಪತ್ತೆಯಾಗಿದ್ದು, ಮೃತನಾದ ವ್ಯಕ್ತಿಯ ಆಧಾರ್ ಕಾರ್ಡ್ ಇರುವ ಕೈಚೀಲ ಪತ್ತೆಯಾಗಿತ್ತು. ಇದರಿಂದ ಆತನ ಗುರುತು ದೃಢಪಟ್ಟಿತ್ತು. ಅವರ ಕುಟುಂಬಸ್ಥರು ಅವರ ಗುರುತನ್ನು ದೃಢಪಡಿಸಿದ ನಂತರ ಈ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಗುರುಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಗಾಜಿಯಾಬಾದ್ ಕಾಲುವೆಯಲ್ಲಿ ಪತ್ತೆ
Dead Body
ಸುಷ್ಮಾ ಚಕ್ರೆ
|

Updated on: Jan 23, 2025 | 7:18 PM

Share

ಗುರುಗ್ರಾಮ: ಗಾಜಿಯಾಬಾದ್‌ನ ಕಾಲುವೆಯಲ್ಲಿ ಪ್ರಿನ್ಸ್ ರಾಣಾ ಎಂಬ 33 ವರ್ಷದ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದ್ದು ಗುರುಗ್ರಾಮದ ಆತನ ಕುಟುಂಬ ಇದರಿಂದ ಗಾಬರಿಗೊಂಡಿದೆ. ಆ್ಯಪ್ ಅಗ್ರಿಗೇಟರ್‌ನೊಂದಿಗೆ ಯೋಜನಾ ವ್ಯವಸ್ಥಾಪಕರಾಗಿರುವ ಪ್ರಿನ್ಸ್, ಜನವರಿ 15ರಂದು ಗುರುಗ್ರಾಮದಲ್ಲಿರುವ ತಮ್ಮ ಮನೆಯಿಂದ ಇದ್ದಕ್ಕಿದ್ದಂತೆ ಆಚೆ ಹೊರಟಿದ್ದರು. ಅವರ ಪತ್ನಿ ತನ್ನ ಗಂಡ ಕಾಣೆಯಾಗಿದ್ದಾರೆ ಎಂದು ಮರುದಿನ ದೂರು ದಾಖಲಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಪ್ರಿನ್ಸ್ ಮನೆಯಲ್ಲೇ ತನ್ನ ಫೋನ್ ಬಿಟ್ಟು ಹೋಗಿದ್ದಾನೆ ಎಂದು ಪತ್ತೆಯಾಗಿದೆ. ಅವರ ಮೊಬೈಲ್ ಬ್ರೌಸಿಂಗ್ ಹಿಸ್ಟರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಹುಡುಕಾಟ ನಡೆಸಿರುವುದು ಪತ್ತೆಯಾಗಿದೆ. ಗಂಗ್ನಹಾರ್ ಕಾಲುವೆಯ ಬಳಿ ಶವ ಪತ್ತೆಯಾಗಿದೆ ಎಂದು ಗಾಜಿಯಾಬಾದ್ ಪೊಲೀಸರಿಗೆ ತಿಳಿಸಲಾಯಿತು.

ಇದನ್ನೂ ಓದಿ: ಮತ್ತೆ ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ!

ಆ ಕೊಳೆತ ದೇಹವನ್ನು ಹುಡುಕಿದಾಗ ಅವರು ಪ್ರಿನ್ಸ್ ಅವರ ಬ್ಯಾಗ್​ನಲ್ಲಿ ಅವರ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅವರ ಕುಟುಂಬ ಅವರ ಗುರುತನ್ನು ದೃಢಪಡಿಸಿತು. ಪೊಲೀಸರು ಆತನ ಸಾವಿಗೆ ಕಾರಣವನ್ನು ನಿರ್ಧರಿಸಲು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ