ಮೈಸೂರು: ಸಾಲ ತೀರಿಸಲು ಹಣ ನೀಡದಿದ್ದಕ್ಕೆ ಪತ್ನಿಯನ್ನ ಕೊಲೆ ಮಾಡಿದ ಪತಿ
ಮಂಡ್ಯ ಮೂಲದ ಅಕ್ಬರ್ ಅಲಿ ಆಟೋ ಚಾಲಕನಾಗಿದ್ದನು. ನವೀದಾ-ಅಕ್ಬರ್ ಅಲಿ ಮದುವೆ ಆಗಿ 13 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದು, ಮೈಸೂರಿನ ರಾಜೀವ್ ನಗರದಲ್ಲಿ ನೆಲೆಸಿದ್ದರು. ಅಕ್ಬರ್ ಅಲಿ ಗೂಡ್ಸ್ ಆಟೋ, ಪ್ರಾವಿಷನ್ ಸ್ಟಾಲ್, ಆಟೋಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಆರಂಭಿಸಿದನು. ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದನು. ಮುಂದೇನಾಯ್ತು ಈ ಸ್ಟೋರಿ ಓದಿ...
ಮೈಸೂರು, ಫೆಬ್ರವರಿ 07: ಜೀವ ಉಳಿಸಿದ್ದ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಮೈಸೂರಿನ (Mysore) ರಾಜೀವ್ ನಗರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನವೀದಾ ಮೃತ ದುರ್ದೈವಿ. ಅಕ್ಬರ್ ಅಲಿ ಕೊಲೆ ಮಾಡಿರುವ ಆರೋಪಿ. ಆರೋಪಿ ಪತಿ ಅಕ್ಬರ್ ಅಲಿಯನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಮಂಡ್ಯ (Mandya) ಮೂಲದ ಅಕ್ಬರ್ ಅಲಿ ಆಟೋ ಚಾಲಕನಾಗಿದ್ದನು. ನವೀದಾ-ಅಕ್ಬರ್ ಅಲಿ ಮದುವೆ ಆಗಿ 13 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದು, ಮೈಸೂರಿನ ರಾಜೀವ್ ನಗರದಲ್ಲಿ ನೆಲೆಸಿದ್ದರು.
ಈ ಹಿಂದೆ ಅಕ್ಬರ್ ಅಲಿ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಪತ್ನಿ ನವೀದಾ ತನ್ನ ತವರು ಮನೆಯವರ ನೆರವಿನಿಂದ ಪತಿಗೆ ಚಿಕಿತ್ಸೆ ಕೊಡಿಸಿದ್ದಳು. ಅಕ್ಬರ್ ಅಲಿ ಗುಣಮುಖನಾಗಿ ಬಂದ ಮೇಲೆ, ಗೂಡ್ಸ್ ಆಟೋ, ಪ್ರಾವಿಷನ್ ಸ್ಟಾಲ್, ಆಟೋ ಮೊಬೈಲ್ಸ್ ಅಂಗಡಿ ಹೀಗೆ ಹಲವು ವ್ಯಾಪಾರ ಮಾಡಲು ಆರಂಭಿಸಿದನು. ಇದಕ್ಕಾಗಿ ಹಲವೆಡೆ ಸಾಲ ಮಾಡಿದ್ದನು. ಮತ್ತು ನವೀದಾ ತವರು ಮನೆಯವರು ಕೂಡ ಅಕ್ಬರ್ ಅಲಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಈ ಮಧ್ಯೆ ನವೀದಾ ಸಣ್ಣ ಅಂಗಡಿ ನಡೆಸುತ್ತಿದ್ದು, ಹಲವು ಬಾರಿ ಪತಿಯ ಸಾಲ ತೀರಿಸಿದ್ದಳು. ಆದರು ಕೂಡ ಅಕ್ಬರ್ ಅಲಿ ಪದೇ ಪದೆ ಸಾಲ ಮಾಡುತ್ತಿದ್ದನು. ಈ ಸಾಲವನ್ನು ತೀರಿಸಲು ಹಣ ನೀಡು ಎಂದು ಅಕ್ಬರ್ ಅಲಿ ಪತ್ನಿ ನವೀದಾಗೆ ಕಿರುಕುಳ ಕೊಡುತ್ತಿದ್ದನು.
ಇದನ್ನೂ ಓದಿ: ಹುಬ್ಬಳ್ಳಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ
ಇದೇ ವಿಚಾರಕ್ಕೆ ಫೆಬ್ರವರಿ 4ರಂದು ದಂಪತಿ ನಡುವೆ ಜಗಳ ಆಗಿತ್ತು. ಜಗಳ ತಾರಕಕ್ಕೆ ಏರಿದ್ದು, ಅಕ್ಬರ್ ಪತ್ನಿ ನವೀದಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಂದು ಸಂಜೆಯಾದರೂ ನವೀದಾ ಕಾಣದಿದ್ದಾಗ ಮತ್ತು ಸಂಪರ್ಕಕ್ಕೆ ಸಿಗದಿದ್ದಾಗ ಅಕ್ಬರ್ ಅಲಿಯನ್ನು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಆಗ ಅಕ್ಬರ್ ಅಲಿ ತಂದೆ ಮನೆಗೆ ಹೋಗಿದ್ದಾಳೆ, ಅಂಗಡಿಯಲ್ಲಿ ಇದ್ದಾಳೆ ಎಂದು ಉತ್ತರ ನೀಡಿದ್ದಾನೆ. ಆದರೆ ಕುಟುಂಬಸ್ಥರು ಅನುಮಾನಗೊಂಡು ಮನೆಗೆ ಹಾಕಿದ್ದ ಬೀಗವನ್ನು ಒಳಗೆ ಹೋದಾಗ ನವೀದಾ ಅಸ್ವಸ್ಥರಾಗಿ ಬಿದ್ದಿದ್ದರು. ಕುತ್ತಿಗೆ ಮೇಲೆ ಗಾಯದ ಗುರುತುಗಳು ಇದ್ದವು. ಕೂಡಲೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ನವೀದಾ ಪ್ರಾಣ ಪಕ್ಷಿ ಹಾರಿಹೋಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿ ನಡೆದಿದೆ. ರೋಹನ್ ವಾಕಡೆ (22) ಮೃತದುರ್ದೈವಿಗಳು. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರೋಹನ್‌ನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ