ಬಾಂಗ್ಲಾ ಗಡಿ ಮೂಲಕ ಮಾನವ ಕಳ್ಳಸಾಗಾಣಿಕೆ ಕೇಸ್: NIA ಚಾರ್ಜ್ ಶೀಟ್ನಲ್ಲಿದೆ ಸ್ಫೋಟಕ ವಿಚಾರ
ಬಾಂಗ್ಲಾ ಗಡಿಯ ಮೂಲಕ ವಿದೇಶ ಪ್ರಜೆಗಳ ಒಳನುಸುಳುವಿಕೆ ಪ್ರಕರಣ ಸಂಬಂಧ 10ಕ್ಕೂ ಹೆಚ್ಚು ಮಂದಿ ಬಾಂಗ್ಲಾ ದೇಶಿಗರ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಎಂಟು ಜನ ಆರೋಪಿಗಳು ಮೊದಲಿಗೆ ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದು, 22 ಜನರನ್ನು ಉದ್ಯೋಗ ಮತ್ತು ಉತ್ತಮ ಜೀವನೋಪಾಯದ ಭರವಸೆ ಮೇಲೆ ಆಮಿಷವೊಡ್ಡಿ ಕಳ್ಳಸಾಗಣೆ ಮಾಡಿ ಬೆಂಗಳೂರಿನ ತ್ಯಾಜ್ಯ ವಿಂಗಡಣಾ ಗೋದಾಮಿನಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು ಎಂಬ ವಿಚಾರ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, ಫೆ.6: ಬೃಹತ್ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎನ್ಐಎ (NIA) ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಬಾಂಗ್ಲಾ ಗಡಿಯ ಮೂಲಕ ವಿದೇಶ ಪ್ರಜೆಗಳನ್ನು ಅಕ್ರಮವಾಗಿ ಒಳನುಸುಳಿದ್ದ 12 ಬಾಂಗ್ಲಾ ದೇಶಿಗರ ವಿರುದ್ಧ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಸ್ಫೋಟಕ ವಿಚಾರ ಉಲ್ಲೇಖಿಸಲಾಗಿದೆ.
ಎಂ.ಡಿ.ಪಿರ್ದೌಸ್ ಬಾಪಾರಿ, ಮುಹಮ್ಮದ್ ಒಲಿ ಉಲ್ಲಾ, ಅಮೋಲ್ ದಾಸ್, ಮಸೂಲ್ ಸರ್ದಾರ್, ಎಂಡಿ ಸೋಹಾಗ್ ಗಾಜಿ,ಸುಮನ್ ಶೇಕ್, ಎಸ್ಕೆ, ಎಂಡಿ ಬೆಳ್ಳಾಲ್, ಎಂಡಿ ಮಿರಾಝಲ್ ಇಸ್ಲಾಂ, ಜಾಕಿರ್ ಖಾನ್, ಎಂಡಿ ಬಾದಲ್ ಹೌಲಾದರ್, ಎಂಡಿ ಕಬೀರ್ ತಾಲೂಕ್ದರ್, ಘರಾಮಿ ಮೊಹಮ್ಮದ್, ಬಶೀರ್ ಹೊಸನ್, ಸೌದಿ ಜಾಕಿರ್ ಸೇರಿ 12 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಆರೋಪಿಗಳು ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದರು. ಬಂಗಾಳದ ಬೆನಾಪೋಲ್ ಮತ್ತು ಜಶೋರ್ನಲ್ಲಿರುವ ಇಂಡೋ-ಬಾಂಗ್ಲಾ ಗಡಿ ಬಿಂದುಗಳು, ತ್ರಿಪುರಾ ಬಳಿಯ ಅಖೌರಾ ಮೂಲಕ ಗಡಿಯ ಎರಡು ಬದಿ ಕಾರ್ಯನಿರ್ವಹಿಸುವ ಟೌಟ್ಗಳ ಸಹಾಯದಿಂದ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಬಾಗಲಕೋಟೆಗೆ ಬಾಂಗ್ಲಾ ನುಸುಳುಕೋರರು ಪ್ರವೇಶ ಮಾಡ್ತಿದ್ದಾರೆ -ಪ್ರಮೋದ್ ಮುತಾಲಿಕ್ ಸ್ಫೋಟಕ ಹೇಳಿಕೆ
ಎಂಟು ಜನ ಆರೋಪಿಗಳು ಮೊದಲಿಗೆ ಬಾಂಗ್ಲಾ ಪ್ರಜೆಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು. 22 ಜನರನ್ನು ಉದ್ಯೋಗ ಮತ್ತು ಉತ್ತಮ ಜೀವನೋಪಾಯದ ಭರವಸೆ ಮೇಲೆ ಆಮಿಷವೊಡ್ಡಿ ಕಳ್ಳಸಾಗಣೆ ಮಾಡಿ ಬೆಂಗಳೂರಿನ ತ್ಯಾಜ್ಯ ವಿಂಗಡಣಾ ಗೋದಾಮಿನಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು ಎನ್ನುವ ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.
ವಿವಿಧ ಶೆಡ್ಗಳಲ್ಲಿ ಅವರನ್ನು ಬಂಧಿಸಿ ಅಲ್ಪವೇತನಕ್ಕಾಗಿ ಬಲವಂತದಿಂದ ದುಡಿಸಿಕೊಳ್ಳಲಾಗಿತ್ತು. ಅಲ್ಲದೆ, ಪ್ರತಿಭಟಿಸಿದರೆ ಅಕ್ರಮ ವಲಸಿಗರೆಂದು ಜೈಲಿಗೆ ಹಾಕಿಸುವುದಾಗಿ ಕಳ್ಳಸಾಗಣೆದಾರರು ಹೆಸರಿಸಿರುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
12 ಆರೋಪಿಗಳ ಬಳಿ 61 ಆಧಾರ್ ಕಾರ್ಡ್ಗಳು ಮತ್ತು ಇತರೆ ಭಾರತೀಯ ಗುರುತಿನ ದಾಖಲೆಗಳು ಪತ್ತೆಯಾಗಿದ್ದು, ಎನ್ಐಎ ವಶಕ್ಕೆ ಪಡೆದುಕೊಂಡಿತ್ತು. ಸದ್ಯ, ಎನ್ಐಎ ಭಾರತೀಯ ದಾಖಲೆಗಳ ಸಂಗ್ರಹದ ತನಿಖೆ ಮುಖದುವರೆಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ