AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ

ಜನವರಿ 10 ರಂದು ಹುಬ್ಬಳ್ಳಿಯ ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಇತ್ತ ಕೊಲೆಯಾದ ವ್ಯಕ್ತಿಯ ಪತ್ನಿ ನವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಕೊಲೆ ಹಿಂದಿನ ಸತ್ಯ ತಿಳಿದಿದೆ.

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿ
ಸಾಂದರ್ಭಿಕ ಚಿತ್ರ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:Feb 06, 2024 | 11:27 AM

ಹುಬ್ಬಳ್ಳಿ, ಫೆಬ್ರವರಿ 06: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಪತ್ನಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ (Hubballi) ಎಪಿಎಂಸಿ-ಮಾರಡಗಿ ರೋಡ್‌ನಲ್ಲಿ ನಡೆದಿದೆ. ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಕೊಲೆಯಾದ ವ್ಯಕ್ತಿ. ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿ ಜೈಲು ಸೇರಿದ ಪ್ರೇಮಿಗಳು. ಜನವರಿ 10 ರಂದು ಎಪಿಎಂಸಿ (APMC) ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನವನಗರ ಪೊಲೀಸರು (Police) ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಇತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನವನಗರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಳು‌. ನವನಗರ ಪೊಲೀಸರು ಎಲ್ಲಾ ಆಯಾಮಗಳಲ್ಲು ತನಿಖೆ ನಡೆಸಿ ಸತ್ಯಾಂಶ ಹೊರ ತಂದಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯಿ ಬಿಟ್ಟ ಮಂಜುಳಾ

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಚಂದ್ರಶೇಖರ ಲಮಾಣಿ ಪತ್ನಿ ಮಂಜುಳಾ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆ ನಡೆಸಿದ್ದಾರೆ. ಆಗ ಮಂಜುಳಾ, ಕಳೆದ ಐದು ವರ್ಷಗಳಿಂದ ರಿಯಾಜ್ ಅಹ್ಮದ್​ ಮತ್ತು ನನ್ನ ನಡುವೆ ಅನೈತಿಕ ಸಂಬಂಧ ಇತ್ತು. ಇದಕ್ಕೆ ಪತಿ ಚಂದ್ರಶೇಖರ ಲಮಾಣಿ ವಿರೋಧ ಮಾಡುತ್ತಿದ್ದನು. ಅಲ್ಲದೆ ನನಗೆ ಕಿರುಕುಳ ನೀಡಲು ಆರಂಭಿಸಿದ್ದನು. ಈ ವಿಚಾರವನ್ನು ಪ್ರಿಯಕರ ರಿಯಾಜ್ ಅಹ್ಮದ್​ಗೆ ಹೇಳಿದ್ದೆ. ಆಗ ಪ್ರಿಯಕರ ರಿಯಾಜ್ ಅಹ್ಮದ್ ಚಂದ್ರಶೇಖರನನ್ನು ಕೊಲೆ ಮಾಡಿದ್ದಾನೆ ಎಂದು ಮಂಜುಳಾ ಸತ್ಯ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಕೆಆರ್ ಪುರಂನಲ್ಲಿ ನಡೆದಿದ್ದ ಮಗನಿಂದ ತಾಯಿ ಕೊಲೆಗೆ ಟ್ವಿಸ್ಟ್; ಕೊಲೆ ಮಾಡಿ ಅಪ್ಪನನ್ನು ಎಸ್ಕೇಪ್ ಮಾಡಿಸಿ ಸರೆಂಡರ್ ಆಗಿದ್ದ ಅಪ್ರಾಪ್ತ ಮಗ

ತಂತಿಯಿಂದ ಕುತ್ತಿಗೆ ಬಿಗಿದು ವ್ಯಕ್ತಿಯ ಬರ್ಬರ ಕೊಲೆ

ಬಾಗಲಕೋಟೆ: ತಂತಿಯಿಂದ ಕುತ್ತಿಗೆ ಬಿಗಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ಬೀಳಗಿ ಪಟ್ಟಣ ಹೊರವಲಯ ಬೀಳಗಿ – ಜಮಖಂಡಿ ರಸ್ತೆಯಲ್ಲಿ ‌ನಡೆದಿದೆ. ಬೀಳಗಿ ತಾಲೂಕಿನ ‌ಡವಳೇಶ್ವರ ಡವಳೇಶ್ವರ ಗ್ರಾಮದ ಈರಪ್ಪ ಗರಸಂಗಿ (50) ಕೊಲೆಯಾದ ವ್ಯಕ್ತಿ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿ ವ್ಯಕ್ತಿಯ ಬರ್ಬರ ಹತ್ಯೆ

ನೆಲಮಂಗಲ: ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಲ್ಲಸಂದ್ರ ಬಾಬಣ್ಣ ಲೇಔಟ್​​ನಲ್ಲಿ ನಡೆದಿದೆ. ಹೇಮಂತ್ ಮೃತ ದುರ್ದೈವಿ. ಆರೋಪಿಗಳಾದ ಕಿರಣ್, ಅಕ್ಷಯ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೆಯ ವೈಶಮ್ಯ ಹಿನ್ನೆಲೆಯಲ್ಲಿ ಆರೋಪಿಗಳು ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಹೇಮಂತ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೇಮಂತ್​ ಮೃತಪಟ್ಟಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Tue, 6 February 24