AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ಪುರಸಭಾ ಸದಸ್ಯನ ಬರ್ಬರ ಹತ್ಯೆ, ಕಾವೇರಿ ನದಿಗೆ ಹಾರಿದ ಸರ್ಕಾರಿ ನೌಕರ

ಮಾರಕಾಸ್ತ್ರಗಳಿಂದ ಕೊಚ್ಚಿ ಪುರಸಭಾ ಸದಸ್ಯನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಆನೇಕಲ್(Anekal) ನಗರದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಇತ್ತ ಕುಶಾಲನಗರ ಪಟ್ಟಣದ ಕಾವೇರಿ ಸೇತುವೆ ಬಳಿ ಸರ್ಕಾರಿ ನೌಕರನೊಬ್ಬ ಕಾವೇರಿ ನದಿಗೆ ಹಾರಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಪ್ರತ್ಯೇಕ ಘಟನೆ: ಪುರಸಭಾ ಸದಸ್ಯನ ಬರ್ಬರ ಹತ್ಯೆ, ಕಾವೇರಿ ನದಿಗೆ ಹಾರಿದ ಸರ್ಕಾರಿ ನೌಕರ
ಪುರಸಭಾ ಸದಸ್ಯನ ಬರ್ಬರ ಕೊಲೆ
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 24, 2024 | 9:40 PM

Share

ಬೆಂಗಳೂರು, ಜು.24: ಆನೇಕಲ್(Anekal) ನಗರದ ಹೊಸೂರು ಮುಖ್ಯರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಆನೇಕಲ್ ಪುರಸಭಾ ಸದಸ್ಯನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ರವಿ ಅಲಿಯಾಸ್ ಸ್ಕ್ರಾಪ್ ರವಿ, ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳು ಸಿಕ್ಕ ಸಿಕ್ಕ ಕಡೆಗಳಲ್ಲಿ ಮಚ್ಚು ಬೀಸಿ ಕೊಲೆಗೈದಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುನ್ನೆಚ್ಚರಿಕೆಯಿಂದ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್‌

ಇನ್ನು ಮೃತ ರವಿ, ಆನೇಕಲ್ ಪುರಸಭೆ 22ನೇ ವಾರ್ಡ್‌ ಬಹದ್ದೂರ್ ಪುರದ ಸದಸ್ಯನಾಗಿದ್ದ. ಇದೀಗ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿರುವ ರವಿ ಮೃತದೇಹ ಇಡಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಹಾಗೂ ಆಪ್ತರು ಜಮಾಯಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಿಂದ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿದೆ.

ಇದನ್ನೂ ಓದಿ:ಲೇಡಿಸ್ ಪಿಜಿಯಲ್ಲಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಕೊಲೆಗಾರನ ಸುಳಿವು ಪತ್ತೆ, ಯಾರು ಗೊತ್ತಾ?

ಕಾವೇರಿ ನದಿಗೆ ಹಾರಿದ ಸರ್ಕಾರಿ ನೌಕರ

ಕೊಡಗು: ಸರ್ಕಾರಿ ನೌಕರನೊಬ್ಬ ಕಾವೇರಿ ನದಿಗೆ ಹಾರಿದ ಘಟನೆ ಕುಶಾಲನಗರ ಪಟ್ಟಣದ ಕಾವೇರಿ ಸೇತುವೆ ಬಳಿ ನಡೆದಿದೆ. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಿಬ್ಬಂದಿ ಆಗಿದ್ದ ಅರುಣ್‌ ಎಂಬಾತ, ಏಕಾಎಕಿ ನದಿಗೆ ಹಾರಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Wed, 24 July 24