AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಮುದ್ದಾದ ಎರಡು ಹೆಣ್ಣು ಮಕ್ಕಳಿಗೆ ತಂದೆಯಿಂದಲೇ ವಿಷವುನಿಸಿ ಸಾವನ್ನಪ್ಪಿದ್ದ ಸುದ್ದಿ ಬೆಳಗಾವಿ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದಿದ್ದ ಅಪರಾಧಿ ತಂದೆಗೆ ಜೀವಾವಧಿ ಶಿಕ್ಷೆ ನೀಡಿದ್ದು 20 ಸಾವಿರ ರೂ. ದಂಡ ವಿಧಿಸಿ ಬೆಳಗಾವಿ 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್​ ಕೋರ್ಟ್​ ಆದೇಶಿಸಿದೆ.

ಬೆಳಗಾವಿ: ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ
ಬೆಳಗಾವಿ: ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ ಜೀವಾವಧಿ ಶಿಕ್ಷೆ
Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 23, 2024 | 10:13 PM

Share

ಬೆಳಗಾವಿ, ಜುಲೈ 23: ಮಾಟ ಮಾಡಿಸಿದ್ದಾರೆಂದು ಮಕ್ಕಳನ್ನ ಹತ್ಯೆಗೈದಿದ್ದ ತಂದೆಗೆ (father) ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿ ಬೆಳಗಾವಿ (Belagavi) 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್​ ಕೋರ್ಟ್​ ಆದೇಶ ಹೊರಡಿಸಿದೆ 2021ರ ಜುಲೈ ತಿಂಗಳಿನಲ್ಲಿ ಮಕ್ಕಳನ್ನು ಅಪರಾಧಿ ತಂದೆ ಅನಿಲ್ ಚಂದ್ರಕಾಂತ ಬಾಂದೇಕರ್​ ಹತ್ಯೆಗೈದಿದ್ದರು. ಬೆಳಗಾವಿ ತಾಲೂಕಿನ ಕಂಗ್ರಾಳಿಯಲ್ಲಿ ದುರ್ಘಟನೆ ನಡೆದಿತ್ತು. ಅನನ್ಯ(4) ಅಂಜಲಿ(8) ಮೃತ ಮಕ್ಕಳು. ​

ಮಕ್ಕಳ ಮೇಲೆ ಮಾಟ ಮಂತ್ರ ಆಗಿದೆ ಎಂದು ನೊಂದಿದ್ದ ತಂದೆ, ವಿಷ ಉಣಿಸಿ ತನ್ನೆರಡು ಮಕ್ಕಳನ್ನ ಕೊಲೆಗೈದಿದ್ದ. ತನ್ನ ಗಂಡನೇ ಮಕ್ಕಳನ್ನ ಕೊಲೆಗೈದಿದ್ದಾನೆಂದು ಆರೋಪಿ ಅನಿಲ್ ಪತ್ನಿ ಜಯಾ ಬಾಂದೇಕರ್​​ರಿಂದ ದೂರು ನೀಡಲಾಗಿತ್ತು.

ಇದನ್ನೂ ಓದಿ: ಅರ್ಚಕ ದೇವೇಂದ್ರಪ್ಪಜ್ಜ‌ ಕೊಲೆ ಕೇಸ್​​ ಭೇದಿಸಿದ ಹುಬ್ಬಳ್ಳಿ ಪೊಲೀಸ್​: 24 ಗಂಟೆಗಳಲ್ಲಿ ಆರೋಪಿ ಅರೆಸ್ಟ್​

ದೋಷಾರೋಪ ಪಟ್ಟಿ ಸಲ್ಲಿಸಿದ್ದ ಇನ್ಸ್​ಪೆಕ್ಟರ್​ ಮಂಜುನಾಥ್, ಪ್ರಕರಣದ ಕುರಿತು ಸರ್ಕಾರಿ ಅಭಿಯೋಜಕ ನಸರೀನ ಬಂಕಾಪೂರ ವಾದ ಮಂಡಿಸಿದ್ದರು. ಪ್ರಕರಣದ ಸುಧೀರ್ಘ ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಜುಲೈ 14ರ ಬೆಳಗಿನ ಜಾವ ಅನಿಲ್ ಬಾಂದೇಕರ್ ತನ್ನ ಇಬ್ಬರು ಹೆಣ್ಣು ಮಕ್ಕಳು ಜೊತೆ ಹೆಂಡತಿ ತವರು ಮನೆಯಿಂದ ತಾನು ವಾಸವಿದ್ದ ಬಾಡಿಗೆ ಮನೆಗೆ ಬಂದಿದ್ದಾನೆ. ಮನೆಗೆ ಬರುವ ವೇಳೆ ಹೋಟೆಲ್‌ನಿಂದ ಮಕ್ಕಳಿಗಾಗಿ ಎರಡು ಪ್ಲೇಟ್ ಇಡ್ಲಿ, ಡೈರಿ ಮಿಲ್ಕ್ ಚಾಕೊಲೇಟ್ ತಂದಿದ್ದಾನೆ. ಜೊತೆಗೆ ಒಂದು ವಿಷದ ಬಾಟಲ್​​ ಕೂಡ ತಂದಿದ್ದು ತನ್ನೆರಡು ಮಕ್ಕಳಿಗೆ ತಂದ ಇಡ್ಲಿಯಲ್ಲಿ ವಿಷ ಹಾಕಿ ತಿನ್ನಿಸಿದ್ದಾರೆ. ಇದಾದ ಬಳಿಕ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಸಾಯಿಸಿ ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡು ಸಾಯಲು ಯತ್ನಿಸಿದ್ದಾನೆ.

ಇದನ್ನೂ ಓದಿ: ರಾಮನಗರ: ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ! ಆರೋಪಿ ಬಂಧನ

ಮಧ್ಯಾಹ್ನ ಮೂರು ಗಂಟೆಯಾದರೂ ಗಂಡ ವಾಪಸ್ ಬಾರದ ಹಿನ್ನೆಲೆ ಹೆಂಡತಿ ಜಯಶ್ರೀ ಕಂಗ್ರಾಳಿ ಕೆ.ಹೆಚ್. ಗ್ರಾಮದ ಮನೆಗೆ ಬಂದಿದ್ದಾಳೆ. ಬೆಲ್ ಬಾರಿಸಿದರೂ ಮನೆಯ ಬಾಗಿಲು ತೆಗೆಯದಿದ್ದಾಗ ಪಕ್ಕದಲ್ಲಿ ತೆರಳಿ ಕಿಟಕಿಯಿಂದ ಇಣುಕಿ ಒಳನೋಡಿದ್ದಾಳೆ. ಈ ವೇಳೆ ಇಬ್ಬರು ಹೆಣ್ಣು ಮಕ್ಕಳು‌ ಮಲಗಿದ್ದು ಕಂಡಿದೆ. ಬಳಿಕ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದವರ ಸಹಾಯದಿಂದ ಮನೆಯ ಬಾಗಿಲು ತೆರೆದು ಒಳಹೋಗಿದ್ದಾರೆ. ಆಗ ಇಬ್ಬರು ಹೆಣ್ಣು ಮಕ್ಕಳು ಅಸ್ವಸ್ಥವಾಗಿ ಬಿದ್ದಿದ್ದು ಕಂಡಿದೆ.

ಬಳಿಕ ಗಂಡ ಅನಿಲ್ ಕೈಯಿಂದ ರಕ್ತ ಸುರಿಯುತ್ತಿದ್ದು ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರೋದು ಕಂಡಿದೆ. ತಕ್ಷಣ ಆಟೋದಲ್ಲಿ ಗಂಡ ಇಬ್ಬರು ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಎಂಟು ವರ್ಷದ ಪುತ್ರಿ ಅಂಜಲಿ, ನಾಲ್ಕು ವರ್ಷದ ಪುತ್ರಿ ಅನನ್ಯ ಮೃತಪಟ್ಟಿದ್ದರು. ಗಂಡ ಅನಿಲ್ ಕುಮಾರ್‌ ಸ್ಥಿತಿ ಗಂಭೀರವಿದ್ದ ಹಿನ್ನೆಲೆ ವೈದ್ಯರು ಆತನನ್ನು ಐಸಿಯುಗೆ ಶಿಫ್ಟ್ ಮಾಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.