ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ. ಒಂದು ಕಪ್ ಟೀಗಾಗಿ ಮರ್ಡರ್​: ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ […]

ಒಂದು ಕಪ್ ಚಹಾ ಕೊಡಲಿಲ್ಲ ಅಂತಾ ಸಹೋದರನನ್ನೇ ಕೊಚ್ಚಿ ಕೊಂದ ಕ್ರೂರಿ!
ಸಾಧು ಶ್ರೀನಾಥ್​

Updated on: Feb 18, 2020 | 2:05 PM

ಯಾದಗಿರಿ: ಆಸ್ತಿಗಾಗಿ ಅದೆಷ್ಟೋ ದಾಯಾದಿಗಳ ಮಧ್ಯೆ ಕಲಹ ನಡೆದಿದೆ. ಇದೂ ಅಷ್ಟೇ.. ದಾಯಾದಿಗಳ ಕಲಹವೇ. ಆದ್ರೆ ಕೊಲೆ ನಡೆದಿದ್ದು ಕೇವಲ ಒಂದು ಕಪ್ ಟೀಗಾಗಿ. ಇಷ್ಟಕ್ಕೂ ಇಲ್ಲಿ ಕೊಲೆಯಾಗಿದ್ದು ನಾಗರಾಜ್. ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕಾಡಮಗೇರ ಗ್ರಾಮದ ನಿವಾಸಿ. ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ನಾಗರಾಜ್, ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದ.

ಒಂದು ಕಪ್ ಟೀಗಾಗಿ ಮರ್ಡರ್​:
ನಿನ್ನೆ ಮಧ್ಯಾಹ್ನ ಮನೆ ಮುಂದಿನ ಮಂಚದ ಮೇಲೆ ಮಲಗಿದ್ದ. ಇದೇ ಹೊತ್ತಿಗೆ ಎಂಟ್ರಿ ಕೊಟ್ಟಿದ್ದೇ ಈ ಭೂಪ ಸಾಯಿಬಣ್ಣ. ಸಂಬಂಧದಲ್ಲಿ ದೊಡ್ಡಪ್ಪನ ಮಗ. ಅಂದ್ರೆ ಸಹೋದರನಾಗಬೇಕು. ಒಂದು ಕಪ್ ಟೀ ಕೊಡು ಅಂತಾ ನಾಗರಾಜ್​ಗೆ ಕೇಳಿದ್ದಾನೆ. ಆದ್ರೆ, ನಾಗರಾಜ್​ ಕೊಡಲ್ಲ ಅಂದಿದ್ದಾನೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಯಿಬಣ್ಣ, ಮಲಗಿದ್ದ ನಾಗರಾಜ್ ಮೇಲೆರಗಿದ್ದಾನೆ. ನೋಡ ನೋಡ್ತಿದ್ದಂತೆ ಕೊಡಲಿಯಿಂದ ಕೊಚ್ಚಿ ಕೊಲೆಗಿದ್ದಾನೆ.

ಇನ್ನು, ಸಾಯಿಬಣ್ಣ ಆಗಾಗ ಬಂದು ಟೀ ಕುಡಿದು ದುಡ್ಡು ಕೊಡದೇ ಹೋಗ್ತಿದ್ದನಂತೆ. ಕೇಳಿದ್ರೆ ಅಕೌಂಟ್​ಗೆ ಹಚ್ಚು ಅಂತಾ ಹೇಳ್ತಿದ್ದನಂತೆ. ನಿನ್ನೆಯೂ ಪುಕ್ಸಟ್ಟೆ ಟೀ ಕೇಳಿದ್ದಕ್ಕೆ ನಾಗರಾಜ್ ಕೊಡಲ್ಲ ಅಂದಿದ್ದಾನೆ. ಅಷ್ಟಕ್ಕೆ ಈ ಸಾಬಣ್ಣ ಅಟ್ಯಾಕ್ ಮಾಡಿದ್ದಾನೆ. ಡೆಡ್ಲಿ ಹಲ್ಲೆ ಬಳಿಕ ನಾಗರಾಜ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ. ಜೀವ ಇದೆ ಅಂತಾ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ, ಆದಾಗಲೇ ನಾಗರಾಜ್ ಪ್ರಾಣಬಿಟ್ಟಿದ್ದ.

ಸುದ್ದಿ ತಿಳಿದ ವಡಗೇರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ರು. ಇನ್ನು, ಆರೋಪಿ ಸಾಯಿಬಣ್ಣ ಮಾನಸಿಕ ಅಸ್ವಸ್ಥ ಅಂತಾ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೇಳ್ತಿದ್ದಾರೆ. ಅದೇನೆ ಇರಲಿ, ಒಂದು ಕಪ್ ಟೀ ಕೊಡದಿದ್ದಕ್ಕೆ ಈ ಕ್ರೂರಿ ತನ್ನ ಸಹೋದರನ ಹೆಣ ಕೆಡವಿದ್ದು ನಿಜಕ್ಕೂ ಘೋರ ದುರಂತ.




Published On - 12:54 pm, Tue, 18 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us