ಮಂಗಳೂರು: ಹಳೇ ದ್ವೇಷ ಹಿನ್ನೆಲೆ ಮಾರಕಾಸ್ತ್ರದಿಂದ ರೌಡಿಶೀಟರ್ ಓರ್ವನ ಬರ್ಬರ ಹತ್ಯೆ
ಗೂಡ್ಸ್ ವಾಹನ ಪಲ್ಟಿಯಾಗಿ 13 ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಕೂಡ್ಲಿಗಿ ತಾಲೂಕಿನ ರಂಗನಾಥನಹಳ್ಳಿ ಬಳಿ ನಡೆದಿದೆ. ಪುಷ್ಪ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿ.
ಮಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಓರ್ವನ ಬರ್ಬರ ಹತ್ಯೆ (Murder) ಮಾಡಿರುವಂತಹ ಘಟನೆ ನಗರದ ಎಮ್ಮೆಕೆರೆ ಎಂಬಲ್ಲಿ ನಡೆದಿದೆ. ಹೊಯಿಗೆ ಬಝಾರ್ ನಿವಾಸಿಯಾಗಿದ್ದ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್(26) ಕೊಲೆಯಾದ ರೌಡಿಶೀಟರ್. ಮಾರಕಾಸ್ತ್ರದಿಂದ ಹತ್ಯೆ ನಡೆಸಿ ಅಪರಿಚಿತರ ಗುಂಪು ಪರಾರಿಯಾಗಿದೆ. ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು, ಆಸ್ಪತ್ರೆಗೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗೂಡ್ಸ್ ವಾಹನ ಪಲ್ಟಿಯಾಗಿ 13 ವರ್ಷದ ಬಾಲಕಿ ಸಾವು:
ವಿಜಯನಗರ: ಗೂಡ್ಸ್ ವಾಹನ ಪಲ್ಟಿಯಾಗಿ 13 ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಕೂಡ್ಲಿಗಿ ತಾಲೂಕಿನ ರಂಗನಾಥನಹಳ್ಳಿ ಬಳಿ ನಡೆದಿದೆ. ಪುಷ್ಪ (13) ಸ್ಥಳದಲ್ಲೇ ಮೃತಪಟ್ಟ ಬಾಲಕಿ. ದಾವಣಗೆರೆಯಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಹಾಗೂ ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಜಿಲ್ಲೆಯ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮದುವೆ ಕಾರ್ಡ್ ಹಂಚಿ ಮನೆಗೆ ವಾಪಸ್ ಆಗಮಿಸೋ ವೇಳೆ; ಸಿಡಿಲು ಬಡಿದು ಪತಿ, ಪತ್ನಿಗೆ ಗಂಭೀರ ಗಾಯ
ವಿಜಯಪುರ: ಮದುವೆ ಕಾರ್ಡ್ ಹಂಚಿ ಮನೆಗೆ ವಾಪಸ್ ಆಗಮಿಸೋ ವೇಳೆ ಸಿಡಿಲು ಬಡಿದು ಪತಿ, ಪತ್ನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ತಾಲೂಕಿನ ಹೊನಗನಹಳ್ಳಿ ಬಳಿ ನಡೆದಿದೆ. ಮಕ್ಕಳ ಮದುವೆಯ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ದಂಪತಿಗಳು, ಬೈಕ್ ಮೇಲೆ ವಿಜಯಪುರಕ್ಕೆ ಆಗಮಿಸೋ ವೇಳೆ ಅವಘಡ ನಡೆದಿದೆ. ವಿಜಯಪುರ ನಗರ ನಿವಾಸಿಗಳಾದ ಶರಣಯ್ಯ ಸಂಗಮದ ( 45) ಹಾಗೂ ಪತ್ಮಿ ಕವಿತಾ ಸಂಗಮದ (40) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳು ವಿಜಯಪುರ ನಗರದ ಭಾಗ್ಯವಂತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ನಾಯಿ (Dog) ದಾಳಿಯಿಂದ ಬಾಲಕ ದುರ್ಮರಣ:
ಧಾರವಾಡ; ನಾಯಿ (Dog) ದಾಳಿಯಿಂದ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಗರದ ನವಲೂರ ರೈಲು ನಿಲ್ದಾಣದ ಬಳಿ ನಡೆದಿದೆ. ಧಾರವಾಡ ತಾಲೂಕಿನ ದುಮ್ಮವಾಡ ಗ್ರಾಮದ ನಿವಾಸಿ ಪ್ರಥಮ ನೀರಲಕಟ್ಟಿ (11) ಸಾವನ್ನಪ್ಪಿದ ಬಾಲಕ. ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕ ತೋಟಕ್ಕೆ ಹೋಗುವಾಗ ನಾಯಿ ದಾಳಿ ಮಾಡಿದೆ. ಕುಟುಂಬಸ್ಥರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಸಿಡಿಲು ಬಡಿದು ಎತ್ತು ಸಾವು:
ಬಾಗಲಕೋಟೆ: 50 ಸಾವಿರ ಕಿಮ್ಮತ್ತಿನ ಎತ್ತು ಹೊಲದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಕೂಗಟಿ ಎಂಬುವವರಿಗೆ ಎತ್ತು ಸೇರಿದ್ದಾಗಿದೆ.
ಇದನ್ನೂ ಓದಿ;
ವೀಕ್ಷಕರಿಗೆ ಬಂಪರ್ ಕೊಡುಗೆ ನೀಡಿದ ಅಮೇಜಾನ್ ಪ್ರೈಮ್ ವಿಡಿಯೋ
ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಹಿನ್ನೆಲೆ: ಸಂಘಟನೆಗಳ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಹೈಕೋರ್ಟ್
Published On - 8:44 pm, Thu, 28 April 22