ವೀಕ್ಷಕರಿಗೆ ಬಂಪರ್ ಕೊಡುಗೆ ನೀಡಿದ ಅಮೇಜಾನ್ ಪ್ರೈಮ್ ವಿಡಿಯೋ

ಅಮೇಜಾನ್ ಪ್ರೈಮ್ ವಿಡಿಯೋ ಹಾಗೂ ನೆಟ್​ಫ್ಲಿಕ್ಸ್ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಭಾರತದಲ್ಲಿ ಒರಿಜಿನಲ್ ಸೀರಿಸ್​ಗಳನ್ನು ನಿರ್ಮಾಣ ಮಾಡಲು ನೆಟ್​ಫ್ಲಿಕ್ಸ್ ಹಿಂದೇಟು ಹಾಕುತ್ತಿದೆ. ಇದರ ಲಾಭವನ್ನು ಪಡೆಯಲು ಅಮೇಜಾನ್ ಪ್ರೈಮ್ ವಿಡಿಯೋ ಮುಂದಾಗಿದೆ ಎನ್ನಲಾಗುತ್ತಿದೆ. 

ವೀಕ್ಷಕರಿಗೆ ಬಂಪರ್ ಕೊಡುಗೆ ನೀಡಿದ ಅಮೇಜಾನ್ ಪ್ರೈಮ್ ವಿಡಿಯೋ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 28, 2022 | 8:23 PM

ಒಟಿಟಿ ಜಗತ್ತು (OTT Platform) ಹಿರಿದಾದಂತೆ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಅಮೇಜಾನ್ ಪ್ರೈಮ್ ವಿಡಿಯೋಗೆ (Amazon Prime Video) ಭಾರತದಲ್ಲಿ ಹಲವು ಸ್ಪರ್ಧಿಗಳಿದ್ದಾರೆ. ಈ ಸ್ಪರ್ಧೆಯನ್ನು ಎದುರಿಸಲು ಈ ಒಟಿಟಿ ಸಂಸ್ಥೆ ಹೊಸ ತಂತ್ರಗಾರಿಕೆ ಮಾಡಲು ಮುಂದಾಗಿದೆ. ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ. ವಿಶೇಷ ಎಂದರೆ ಮುಂದಿನ ಎರಡು ವರ್ಷಗಳಲ್ಲಿ ತೆರೆಗೆ ಬರಲಿರುವ 40 ಹೊಸ ಶೋ/ವೆಬ್​ ಸೀರಿಸ್​ಗಳ ಟೈಟಲ್ ಅನಾವರಣಗೊಂಡಿದೆ. ಈ ಮೂಲಕ ಸಿನಿಪ್ರಿಯರಿಗೆ ಬಂಪರ್ ಕೊಡುಗಡೆ ನೀಡಿದಂತಾಗಿದೆ.

40 ಶೀರ್ಷಿಕೆಗಳ ಪೈಕಿ ಕೆಲವು ಅಮೇಜಾನ್ ಪ್ರೈಮ್​ ವಿಡಿಯೋ ಒರಿಜಿನಲ್ ಕಂಟೆಂಟ್ ಆಗಿದೆ. ಇನ್ನೂ ಕೆಲವು ಸಿನಿಮಾ/ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡಲು ಯಶ್ ರಾಜ್​ ಫಿಲ್ಮ್ಸ್​, ಧರ್ಮ ಪ್ರೊಡಕ್ಷನ್, ಅಜಯ್ ದೇವಗನ್ ಫಿಲ್ಮ್ಸ್​, ಎಕ್ಸೆಲ್ ಮೀಡಿಯಾ ಸೇರಿ ಹಲವು ನಿರ್ಮಾಣ ಸಂಸ್ಥೆಗಳ ಜತೆ ಅಮೇಜಾನ್ ಪ್ರೈಮ್ ವಿಡಿಯೋ ಕೈ ಜೋಡಿಸಿದೆ.

ಅಮೇಜಾನ್ ಪ್ರೈಮ್ ವಿಡಿಯೋ ಒರಿಜಿನಲ್ ಕಂಟೆಂಟ್ ಕೆಟಗರಿಯಲ್ಲಿ ಪ್ರಸಾರ ಕಂಡ, ಪಂಕಜ್ ತ್ರಿಪಾಟಿ ನಟನೆಯ ‘ಮಿರ್ಜಾಪುರ್’, ಮನೋಜ್ ಬಾಜಪೇಯಿ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’, ಅಭಿಷೇಕ್ ಬಚ್ಚನ್ ನಟನೆಯ ‘ಬ್ರೀತ್​: ಇಂಟು ದಿ ಶ್ಯಾಡೋಸ್’ ಮೆಚ್ಚುಗೆ ಪಡೆದುಕೊಂಡಿವೆ. ಇವುಗಳ ಸೀಕ್ವೆಲ್​ಗಳು ರೆಡಿ ಆಗುತ್ತಿವೆ.

ಸೀಕ್ವೆಲ್​ಗಳೊಂದಿಗೆ ಬರಲಿರುವ ಶೋಗಳ ಪೈಕಿ ‘ಮಿರ್ಜಾಪುರ್ 3’, ‘ದಿ ಫ್ಯಾಮಿಲಿ ಮ್ಯಾನ್ 3’, ‘ಪಂಚಾಯತ್ 2’, ‘ಪಾತಾಳ್ ಲೋಕ್ 2’ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಹೊಸ ಶೀರ್ಷಿಕೆಗಳ ಪೈಕಿ, ‘ಅಧುರಾ’, ‘ಬಂಬೈ ಮೇರಿ ಜಾನ್’, ‘ಫರ್ಜಿ’, ‘ಹಶ್ ಹಶ್’, ‘ಮಾಡರ್ನ್ ಲವ್ ಮುಂಬೈ’ ಮೊದಲಾದ ಶೀರ್ಷಿಕೆಗಳು ಗಮನ ಸೆಳೆದಿವೆ. ಇವಿಷ್ಟು ಹಿಂದಿಗೆ ಸಂಬಂಧಿಸಿದ ಶೋ/ ಸಿನಿಮಾಗಳಾದರೆ, ‘ಮಾಡರ್ನ್​ ಲವ್​ ಚೆನ್ನೈ’, ‘ಮಾಡರ್ನ್​ ಲವ್​ ಹೈದರಾಬಾದ್’ ಶೋಗಳ ಶೀರ್ಷಿಕೆ ಗಮನ ಸೆಳೆಯುತ್ತಿದೆ.

ಅಮೇಜಾನ್ ಪ್ರೈಮ್ ವಿಡಿಯೋ ಹಾಗೂ ನೆಟ್​ಫ್ಲಿಕ್ಸ್ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಭಾರತದಲ್ಲಿ ಒರಿಜಿನಲ್ ಸೀರಿಸ್​ಗಳನ್ನು ನಿರ್ಮಾಣ ಮಾಡಲು ನೆಟ್​ಫ್ಲಿಕ್ಸ್ ಹಿಂದೇಟು ಹಾಕುತ್ತಿದೆ. ಇದರ ಲಾಭವನ್ನು ಪಡೆಯಲು ಅಮೇಜಾನ್ ಪ್ರೈಮ್ ವಿಡಿಯೋ ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​

ಪೊಲೀಸ್​ ಆಫೀಸರ್​​ ಆಗಿ ಬರ್ತಿದ್ದಾರೆ ದಾನಿಶ್ ಸೇಠ್; ವೂಟ್​ನಲ್ಲಿ ರಿಲೀಸ್ ಆಗ್ತಿದೆ ‘ಸೋಲ್ಡ್’

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ