Mumbai: ತನ್ನ 2 ವರ್ಷದ ಮಗುವನ್ನು ಹತ್ಯೆ ಮಾಡಿ, ನದಿಗೆ ಎಸೆದ ಪಾಪಿ ತಂದೆ

ತಂದೆಯೇ ತನ್ನ ಎರಡು ವರ್ಷದ ಮಗುವನ್ನು ಕೊಲೆ ಮಾಡಿ, ನದಿಗೆ ಎಸೆದಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.

Mumbai: ತನ್ನ 2 ವರ್ಷದ ಮಗುವನ್ನು ಹತ್ಯೆ ಮಾಡಿ, ನದಿಗೆ ಎಸೆದ ಪಾಪಿ ತಂದೆ
ಮಗು

Updated on: Apr 20, 2023 | 8:25 AM

ತಂದೆಯೇ ತನ್ನ ಎರಡು ವರ್ಷದ ಮಗುವನ್ನು ಕೊಲೆ ಮಾಡಿ, ನದಿಗೆ ಎಸೆದಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. 22 ವರ್ಷದ ವ್ಯಕ್ತಿಯು ವಿವಾಹೇತರ ಸಂಬಂಧ ಹೊಂದಿದ್ದು, ಆ ಮಹಿಳೆಯನ್ನು ಮದುವೆಯಾಗಲು ಮಗು ಅಡ್ಡಿಬರಬಾರದು ಎನ್ನುವ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಏಕೆಂದರೆ ಆ ಮಹಿಳೆಯು ಮಗುವನ್ನು ಬಿಟ್ಟು ಆ ವ್ಯಕ್ತಿ ತನ್ನ ಜತೆಗೆ ಬರಬೇಕೆಂದು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ಮುಂಜಾನೆ ಕೇಮ್ಕಾರ್ ಚೌಕ್ ಬಳಿಯ ಮಾಹಿಮ್-ಸಿಯಾನ್ ಕ್ರೀಕ್ ಲಿಂಕ್ ರಸ್ತೆಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಪ್ಲಾಸ್ಟಿಕ್ ಚೀಲದಲ್ಲಿ ಶವವಿದ್ದು, ಮಗುವಿನ ತಲೆ ಮತ್ತು ಬಲ ಮಣಿಕಟ್ಟಿನಲ್ಲಿ ಗಾಯದ ಗುರುತುಗಳಿದ್ದವು. ತಕ್ಷಣಕ್ಕೆ ಮಗು ಯಾರೆಂದು ಪತ್ತೆ ಹಚ್ಚಲು ಕಷ್ಟವಾಗಿತ್ತು. ಆದರೆ ಮಗುವನ್ನು ಹುಡುಕುತ್ತಿದ್ದ ಸಂಬಂಧಿಕರು ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದರು, ಬಳಿಕ ಶವವನ್ನು ಅವರಿಗೆ ತೋರಿಸಿದಾಗ ಗುರುತು ಹಿಡಿದಿದ್ದಾರೆ.

ಮತ್ತಷ್ಟು ಓದಿ: ಧಾರವಾಡ: ಎರಡು ಗುಂಪಿನ ನಡುವೆ ಜಗಳ ಬಿಡಿಸಿ ಕಳಿಸಿದ್ದ ಗ್ರಾಮ‌ ಪಂಚಾಯಿತಿ ಉಪಾಧ್ಯಕ್ಷನನ್ನ ಚಾಕುವಿನಿಂದ ಇರಿದು ಕೊಲೆ

ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಬಾಲಕನ ಸಂಬಂಧಿಕರೊಂದಿಗೆ ವಿಚಾರಣೆ ನಡೆಸಿದಾಗ, ಆತನ ತಂದೆ ಧಾರಾವಿ ಕೊಳೆಗೇರಿಯಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ತೆರಳಿ ಆತನನ್ನು ಬಂಧಿಸಿದ್ದಾರೆ.

ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಆರೋಪಿ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು. ಆಕೆ ತನ್ನನ್ನು ಮದುವೆಯಾಗಲು ಬಯಸಿದರೆ ತನ್ನ ಹೆಂಡತಿ ಮತ್ತು ಮಗನನ್ನು ಬಿಟ್ಟು ಬಾ ಎಂದು ಷರತ್ತು ಹಾಕಿದ್ದಳು. ನಂತರ ಆರೋಪಿಗಳು ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಆಸೆ ತೋರಿಸಿ ಮಗುವನ್ನು ಕರೆದುಕೊಂಡು ಹೋಗಿ ಹತ್ಯೆ ಮಾಡಿ ಬಳಿಕ ನದಿಗೆ ಎಸೆದಿದ್ದರು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us