Crime News: ಆಪರೇಷನ್ಗಾಗಿ ಅನಸ್ತೇಷಿಯಾ ಪಡೆದ ಕೂಡಲೆ ಮುಂಬೈ ಪೊಲೀಸ್ ಸಾವು
ಮುಂಬೈನ ಮಹಿಳಾ ಪೋಲೀಸ್ ಕಾನ್‌ಸ್ಟೆಬಲ್ ಒಬ್ಬರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಆಗ ಅನಸ್ತೇಷಿಯಾ ಇಂಜೆಕ್ಷನ್ ಪಡೆದ ಕೂಡಲೆ ಸಾವನ್ನಪ್ಪಿದ್ದಾರೆ. ಕಾನ್‌ಸ್ಟೆಬಲ್ ಗೌರಿ ಸುಭಾಷ್ ಪಾಟೀಲ್ ಅವರನ್ನು ಅಂಧೇರಿಯ ಪಶ್ಚಿಮ ಉಪನಗರದಲ್ಲಿರುವ ಲೋಖಂಡ್‌ವಾಲಾದಲ್ಲಿರುವ ಆಕ್ಸಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಕಿವಿ ಶಸ್ತ್ರಚಿಕಿತ್ಸೆಗಾಗಿ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಯಿತು.
ಮುಂಬೈ: ಮುಂಬೈ ಪೊಲೀಸ್‌ನ 28 ವರ್ಷದ ಮಹಿಳಾ ಕಾನ್ಸ್‌ಟೇಬಲ್ ಖಾಸಗಿ ಆಸ್ಪತ್ರೆಯಲ್ಲಿ ಕಿವಿ ಶಸ್ತ್ರಚಿಕಿತ್ಸೆಗಾಗಿ ಅನಸ್ತೇಷಿಯಾ ಇಂಜೆಕ್ಷನ್ ಪಡೆಯುತ್ತಿದ್ದಂತೆ ತೊಂದರೆಗಳನ್ನು ಅನುಭವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನ್‌ಸ್ಟೆಬಲ್ ಗೌರಿ ಸುಭಾಷ್ ಪಾಟೀಲ್ ಅವರನ್ನು ಅಂಧೇರಿಯ ಪಶ್ಚಿಮ ಉಪನಗರದಲ್ಲಿರುವ ಲೋಖಂಡವಾಲಾದಲ್ಲಿರುವ ಆಕ್ಸಿಸ್ ಆಸ್ಪತ್ರೆಗೆ ದಾಖಲಿಸಲಾಗಿತು. ಆಗ ಈ ಘಟನೆ ನಡೆದಿದೆ.
ಗೌರಿ ಪಾಟೀಲ್ ಅವರ ಕಿವಿ ಶಸ್ತ್ರಚಿಕಿತ್ಸೆಗೂ ಮೊದಲು ಅರಿವಳಿಕೆ ನೀಡಿದಾಗ, ಅವರ ಆರೋಗ್ಯದಲ್ಲಿ ಏರುಪೇರಾಯಿತು. ಬಳಿಕ ಗುರುವಾರ ರಾತ್ರಿ ನಿಧನರಾದರು. ಗುರುವಾರ ರಾತ್ರಿ 10.45ರ ಸುಮಾರಿಗೆ ಸಾವಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: Bengaluru Crime: ಬೆಳಗ್ಗೆ ಎದ್ದಾಗ ಕತ್ತು ಸೀಳಿದ ಗೆಳತಿಯ ಶವ ಕಂಡು ಯುವತಿ ಶಾಕ್; ಬೆಂಗಳೂರಿನಲ್ಲೊಂದು ಬರ್ಬರ ಹತ್ಯೆ
ಈ ಸಾವಿಗೆ ಕಾರಣ ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಾಟೀಲ್ ಅವರನ್ನು ಮುಂಬೈ ಪೊಲೀಸರ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದಲ್ಲಿ ಅಂಧೇರಿಯ ಮರೋಲ್‌ನಲ್ಲಿ ನಿಯೋಜಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ