Shocking News: ಲವರ್ ಜೊತೆ ಹೆಂಡತಿ ರೂಂನಲ್ಲಿದ್ದಾಗ ಮನೆಗೆ ಬಂದ ಗಂಡ; ಆಮೇಲೇನಾಯ್ತು?
ಘಜಿಯಾಬಾದ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ರೂಂನಲ್ಲಿ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ಇದ್ದಕ್ಕಿದ್ದಂತೆ ಮನೆಗೆ ಬಂದಿದ್ದಾನೆ. ತನ್ನ ಹೆಂಡತಿ ಬೇರೊಬ್ಬನ ಜೊತೆ ಇರುವುದನ್ನು ಕಂಡ ಕೋಪಗೊಂಡ ಆತ ಹೆಂಡತಿಗೆ ಜೋರು ಮಾಡಿದ್ದಾನೆ. ಆದರೆ, ಅವನ ಮಾತಿಗೆ ಹೆದರದ ಆಕೆ ಗಂಡನನ್ನೇ ಥಳಿಸಿದ್ದಾಳೆ.
ಘಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಗೆ ಥಳಿಸಿದ್ದಾರೆ. ಆ ಮಹಿಳೆ ತನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಆದರೆ, ಆಕೆಯ ಗಂಡ ಬೇಗನೇ ಮನೆಗೆ ಬಂದಿದ್ದ. ಮನೆಗೆ ಬಂದಾಗ ಆಕೆ ತನ್ನ ಪ್ರೇಮಿಯನ್ನು ಅಪ್ಪಿಕೊಂಡು ಇರುವುದನ್ನು ಕಂಡು ಗಂಡ ಕೋಪಗೊಂಡಿದ್ದ.
ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಮಾಹಿತಿ ಸಿಕ್ಕಿ ಬೇಗ ಮನೆಗೆ ಬಂದಿದ್ದ ಗಂಡನ ಕೈಗೆ ಆತನ ಹೆಂಡತಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಮನೆಯಿಂದ ಹೊರಗೆ ಆಕೆಯನ್ನು ಕರೆದುಕೊಂಡು ಹೋಗಿ ಎಲ್ಲರ ಮುಂದೆ ಆಕೆಯ ಅವಮಾನ ಮಾಡಿದ್ದ ಗಂಡನ ವಿರುದ್ಧ ಕೋಪಗೊಂಡ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನಿಗೆ ಥಳಿಸಿದ್ದಾಳೆ.
ಇದನ್ನೂ ಓದಿ: Shocking News: ನನ್ನ ಆರ್ಡರ್ ಇನ್ನೂ ರೆಡಿ ಆಗಿಲ್ಲವಾ? ಎಂದು ಕೇಳಿದ ಗ್ರಾಹಕನನ್ನು ಕೊಂದ ಹೋಟೆಲ್ ಮಾಲೀಕ!
ಎಲ್ಲರ ಮುಂದೆ ತಾನೇ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದಳು. ಇದೇ ವೇಳೆ ಮಹಿಳೆಯ ಪ್ರಿಯಕರ ಕೂಡ ಮಹಿಳೆಯ ಪತಿಗೆ ಒದ್ದು ಗುದ್ದಲು ಆರಂಭಿಸಿದ್ದಾನೆ. ಅಲ್ಲಿಗೆ ಬಂದ ಪೊಲೀಸರು ಗಲಾಟೆ ಹೆಚ್ಚುತ್ತಿರುವುದನ್ನು ಕಂಡು ಕೂಡಲೇ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime News: 9 ವರ್ಷದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ; ಪೊಲೀಸರೆದುರು ದಾರುಣ ಕತೆ ಬಿಚ್ಚಿಟ್ಟ ತಾಯಿ
ಭೂಪೇಂದ್ರಪುರಿ ಕಾಲೋನಿಯಲ್ಲಿ ವಾಸವಾಗಿರುವ ಸಂತ್ರಸ್ತೆಯ ಪತಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಟಿಬ್ರಾ ರಸ್ತೆಯಲ್ಲಿ ವಾಸವಾಗಿರುವ ಅಮನ್‌ಕುಮಾರ್ ಎಂಬುವವರೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿದೆ. ಇದನ್ನು ವಿರೋಧಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಗಂಡ ದೂರು ನೀಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ