ಮಹಿಳೆ ವಿಚಾರಕ್ಕೆ ಸ್ನೇಹಿತನ ಕೊಲೆ; ಪಶ್ವಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಅವರೆಲ್ಲ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ತಲೆ ಎತ್ತುತ್ತಿರುವ ಐಫೋನ್​ನ ಫಾಕ್ಸ್ ಕಾನ್ ಕಂಪನಿ ಕೆಲಸ ಮಾಡಲು ಬಂದಿರುವ ಕಾರ್ಮಿಕರು. ಹೀಗಾಗೆ ಎಲ್ಲರೂ ಒಂದೆಡೆ ಶೆಡ್​ಗಳಲ್ಲಿ ವಾಸಿಸುತ್ತಿದ್ದು, ಖಾಲಿ ಸಮಯದಲ್ಲಿ ಹರಟೆ ಹೊಡೆಯುತ್ತಿದ್ದರು. ಇದೇ ರೀತಿ ಕಾಮಿಡಿಗೆ ಶುರುವಾದ ಮಾತಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮಹಿಳೆ ವಿಚಾರಕ್ಕೆ ಸ್ನೆಹಿತನನ್ನೆ ಕೊಂದ ಇಬ್ಬರು ಅಂದರ್ ಆಗಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಮಹಿಳೆ ವಿಚಾರಕ್ಕೆ ಸ್ನೇಹಿತನ ಕೊಲೆ; ಪಶ್ವಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 10:09 PM

ಬೆಂಗಳೂರು ಗ್ರಾಮಾಂತರ, ಸೆ.29: ದೊಡ್ಡಬಳ್ಳಾಪುರ ಬಳಿ 300 ಎಕರೆ ಪ್ರದೇಶದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ನೂತನ ಐಪೋನ್ ತಯಾರಿಕಾ ಘಟಕ ನಿರ್ಮಾಣವಾಗುತ್ತಿದ್ದು, ಹೈ ಪ್ರಾಜೆಕ್ಟ್​ಗೆ ಸಾವಿರಾರು ಜನ ಕೂಲಿ ಕಾರ್ಮಿಕರು ಉತ್ತರ ಭಾರತದಿಂದ ಬಂದಿದ್ದಾರೆ. ಜೊತೆಗೆ ಬಂದ ಎಲ್ಲರಿಗೂ ಅಕ್ಕ-ಪಕ್ಕದ ಗ್ರಾಮಗಳ ಬಳಿ ಶೆಡ್​ಗಳಲ್ಲಿ ಜೀವನ ಕಟ್ಟಿಕೊಂಡಿದ್ದು, ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕೈರ್ ಸಿಂಗ್ ಎಂಬಾತ ಈತ ಸಹ ಪಶ್ವಿಮ ಬಂಗಾಳದಿಂದ ಬಂದು ಇಲ್ಲಿಯೇ ಕೆಲಸ ಮಾಡಿಕೊಂಡು ಸುಶಾಂತ್ ಸಿಂಗ್ ಹಾಗೂ ಸಾಧನ್ ಸಿಂಗ್ ಎನ್ನುವ ಸ್ನೇಹಿತರ ಜೊತೆ ವಾಸವಾಗಿದ್ದ. ಚೆನ್ನಾಗಿದ್ದ ಸ್ನೇಹಿತರ ನಡುವೆ ಕಳೆದ 13 ರಂದು ಮಹಿಳೆಯೊಬ್ಬರ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಸುಶಾಂತ್ ಸಿಂಗ್ ಮತ್ತು ಸಾಧನ್ ಸಿಂಗ್ ಸೇರಿ ಕೈರ್ ಸಿಂಗ್​ಗೆ ಕುತ್ತಿಗೆಗೆ ಚಾಕುವಿನಿಂವ ಇರಿದಿದ್ದಾರೆ.

8 ದಿನ ಸಾವು ಬದುಕಿನ ನಡುವೆ ಹೋರಾಟ 9 ನೇ ದಿನ ಸಾವು

ಸ್ನೇಹಿತರಿಂದ ಚಾಕುವಿನಿಂದ ಇರಿತಕ್ಕೋಳಗಾದ ಕೈರ್ ಸಿಂಗ್​ನನ್ನ ಇತರ ಕಾರ್ಮಿಕರು ದೊಡ್ಡಬಳ್ಳಾಪುರದ ಖಾಸಗಿ ಆಸ್ವತ್ರೆಗೆ ಸೇರಿಸಿದ್ದು, 8 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಆದ್ರೆ, ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣ 8 ದಿನಗಳ ಕಾಲ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದ.

ಇದನ್ನೂ ಓದಿ:ರಾಯಚೂರು: ಮನೆ ಖಾಲಿ ಮಾಡು ಎಂದ ಮಾಲೀಕಿಯನ್ನೇ ಕೊಂದ ಬಾಡಿಗೆದಾರ, ಕೊಲೆ ಸುಳಿವು ಸಿಕ್ಕಿದ್ದೇ ರೋಚಕ

ಪಶ್ವಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಫಿಗಳ ಬಂಧನ

ಇನ್ನೂ ಕೈರ್ ಸಿಂಗ್ ಸಾವನ್ನಪುತ್ತಿದ್ದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳ ಬೆನ್ನತ್ತಿದ್ದರು. ಅದರಂತೆ ಇಂದು ಪಶ್ವಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಒಟ್ಟಾರೆ ಹೊಟ್ಟೆ ಪಾಡಿಗೆ ಎಂದು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದ ಸ್ನೆಹಿತರು, ಸ್ನೇಹಿತ ಅನ್ನೋದನ್ನ ಮರೆತು ಮಹಿಳೆಯ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ಕೊಲೆ ಮಾಡಿದ್ದು ಮಾತ್ರ ನಿಜಕ್ಕೂ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು