AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಂಬಂಧಕ್ಕೆ ಅಡ್ಡಿ; ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ, ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿ; ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ, ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು
ದಾವಣಗೆರೆ ಎಸ್ಪಿ, ಕೊಲೆ ಆರೋಪಿಗಳಾದ ಮಂಜುನಾಥ್​, ಆಯೇಷಾ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Sep 26, 2024 | 5:48 PM

Share

ದಾವಣಗೆರೆ, ಸೆ.26: ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿತ್ತು. ಇದೀಗ ಕೊಲೆಯಾದ ಒಂದು ವರ್ಷದ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೌದು, 2023ರ ಫೆಬ್ರವರಿಯಲ್ಲಿ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಕಾಣೆಯಾದ ಇಲಿಯಾಸ್ ಅಹಮ್ಮದ್ ಎಂದು ಅನುಮಾನಗೊಂಡಿದ್ದ ಪೊಲೀಸರು, ಕೂಡಲೇ‌ ಮೃತನ ಮಕ್ಕಳ ಹಾಗೂ ಮೃತದೇಹದ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ನಂತರ ಪರೀಕ್ಷೆಯಲ್ಲಿ ಮೃತ ಇಲಿಯಾಸ್ ಅಹಮ್ಮದ್ ಎಂದು ದೃಢಪಟ್ಟಿತ್ತು.

ಇಲಿಯಾಸ್ ಸಾವಿನ ಜಾಡು ಹಿಡಿದು ಹೊರಟ ಬಸವಪಟ್ಟಣ ಪೊಲೀಸರು

ಘಟನೆ ಬಳಿಕ ಇಲಿಯಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆತನ ಪೋಷಕರು, ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೂಡಲೇ ಆ್ಯಕ್ಟೀವ್​ ಆದ ಪೋಲಿಸರು, ಇಲಿಯಾಸ್ ಪತ್ನಿ ಭಿಭಿ ಆಯೇಷಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಇದೊಂದು ಪೂರ್ವನಿಯೋಜಿತ ಕೊಲೆ ಎನ್ನುವುದು ಬಯಲಿಗೆ ಬಂದಿದ್ದು, ಆಕೆಯ ಪ್ರಿಯಕರ ಮಂಜುನಾಥ್​ ಹಾಗೂ ಭಿಭಿ ಆಯೇಷಾ ಸೇರಿ ಇಲಿಯಾಸ್​ನನ್ನು ಕೊಲೆ ಮಾಡಿರುವುದು ಖಚಿತವಾಗಿದೆ.

ಇದನ್ನೂ ಓದಿ:ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್: ಹಂತಕ ಅಶ್ರಫ್ ಅಲ್ಲ, ಹೊರರಾಜ್ಯದವನು; ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

ಅಕ್ರಮ ಸಂಬಂಧಕ್ಕೆ ಅಡ್ಡಿ; ಕಟ್ಟಿಕೊಂಡ ಗಂಡನಿಗೆ ಕಟ್ಟಿದಳು ಚಟ್ಟ

ಪತಿ ಇಲಿಯಾಸ್​ಗೆ ನಿದ್ದೆ ಮಾತ್ರೆ ಹಾಕಿ ದೈಹಿಕ ಸಂಪರ್ಕ ನಡೆಸುತ್ತಿದ್ದ ಆಯೇಷಾ ಮತ್ತು ಮಂಜುನಾಥ್, ಇಲಿಯಾಸ್​ನನ್ನು ಕೊಂದರೆ ಅಕ್ರಮ ಸಂಬಂಧಕ್ಕೆ ಅಡ್ಡಿ ಇರುವುದಿಲ್ಲ ಎಂದು ಪ್ಲ್ಯಾನ್​ ಮಾಡಿದ್ದಾರೆ. ಉಪಾಯದಿಂದ‌ ಇಲಿಯಾಸ್​ನನ್ನು ಸಾಗರಪೇಟೆ ಬಳಿ ಡಾಬಾಗೆ ಪಾರ್ಟಿಗೆ ಕರೆದುಕೊಂಡು ಹೋಗಿದ್ದ ಮಂಜುನಾಥ್, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಇಲಿಯಾಸ್​ಗೆ ಕುಡಿಸಿದ್ದ. ಬಳಿಕ ಬಲವಂತವಾಗಿ ಚಾನಲ್‌ನಲ್ಲಿ ಈಜಾಡಲು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇದೀಗ ಕೊಲೆ ಆರೋಪಿಗಳಾದ ಇಲಿಯಾಸ್ ಪತ್ನಿ ಆಯೇಷಾ, ಪ್ರಿಯಕರ ಮಂಜುನಾಥ್​ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Thu, 26 September 24