ಬಾಗಲಕೋಟೆ: ನಿದ್ದೆ ಮಂಪರಿನಿಂದ ಕ್ಯಾಂಟರ್ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ಸಾವು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದ್ದು ಅಪಘಾತ ಸಂಭವಿಸಿದೆ.
ಬಾಗಲಕೋಟೆ, ಸೆ.26: ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ (Death) ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಅಪಘಾತದಲ್ಲಿ (Accident) ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಎಂಬ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತರು, ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರು ಮುದ್ದೇಬಿಹಾಳದ ಕಡೆ ಹೊರಟ್ಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ತೆರಳಿತ್ತು. ನಿದ್ದೆ ಮಂಪರಿನಿಂದ ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಕ್ಯಾಂಟರ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮೃತರು ಹೊಸಪೇಟೆ ಬಳಿಯ ಹುಲಿಗೆಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ಮರಳುವಾಗ ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಕರೆಂಟ್ ಶಾಕ್‌ಗೆ ಅಣ್ಣ-ತಮ್ಮ ದುರ್ಮರಣ
ದ್ರಾಕ್ಷಿ ತೋಟದಲ್ಲಿ ವಿದ್ಯುತ್ ಹರಿದು ಸೋದರರು ಸಾವನ್ನಪ್ಪಿರುವ ಘಟನೆ ವಿಜಯಪುರದ ತಿಕೋಟಾದ ಬಾಬಾನಗರ ಬಾಬಾನಗರ ಗ್ರಾಮದಲ್ಲಿ ನಡೆದಿದೆ. ತಮ್ಮ ಶ್ರೀಕಾಂತ ವಿಜಾಪುರ ಮತ್ತು ಅಣ್ಣ ರಾಜಕುಮಾರ ವಿಜಾಪುರ ಮೃತ ದುರ್ದೈವಿಗಳು. ತಮ್ಮ ತೋಟದಲ್ಲಿ ಕೆಲಸ ಮಾಡ್ತಿದ್ದ ವೇಳೆ ಕಬ್ಬಿಣದ ಆ್ಯಂಗಲ್‌ಗೆ ವಿದ್ಯುತ್ ತಂತಿ ತಗುಲಿ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಐವರಿಗೆ ಗಾಯ
ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿಕ್ಕಿಯಾಗಿ ಐವರು ಗಾಯಗೊಂಡ ಘಟನೆ ಬೈಂದೂರಿನ ಕೊಲ್ಲೂರಿನ ಇಡೂರು ಸಮೀಪದ ಜನ್ನಾಲ್ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಖಾಸಗಿ ಬಸ್ ಪಲ್ಟಿಯಾಗಿದೆ. ರಾಘವೇಂದ್ರ, ವಾಸಿಂ, ಅಮೃತಾ, ಪ್ರತ್ಯಸ್ಥಿ ಮತ್ತು ಅಖಿತ್ ಎಂಬ ಗಾಯಾಳುಗಳನ್ನ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:02 am, Thu, 26 September 24