ಭಾವನ ಮೇಲಿನ ಹಲ್ಲೆ ಪ್ರಶ್ನಿಸಿದ್ದಕ್ಕೆ ಸೋದರರ ಮೇಲೆ ಅಟ್ಯಾಕ್, ಓರ್ವ ಸಾವು

ಮೈಸೂರು: ಭಾವನ ಮೇಲೆ ಹಲ್ಲೆ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಸಹೋದರ ಸಾವಿಗೀಡಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕೆಲ ದಿನಗಳ ಹಿಂದೆ ಧರ್ಮಪಾಲ ಎಂಬುವರ ಮೇಲೆ ಹಲ್ಲೆ ರಾಜು ಎಂಬುವರು ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿರುವ ಬಗ್ಗೆ ಕಾಂತರಾಜು ಮತ್ತು ನಾರಾಯಣ್ ಎಂಬುವರು ರಾಜು ಬಳಿ ಕೇಳಿದ್ದಾರೆ. ಹಲ್ಲೆ ವಿಚಾರವಾಗಿ ಗಲಾಟೆಯಾಗಿ ರಾಜು ಮತ್ತು ಆತನ ಸಹೋದರ ಸಂತೋಷ್ ಇಬ್ಬರೂ […]

ಭಾವನ ಮೇಲಿನ ಹಲ್ಲೆ ಪ್ರಶ್ನಿಸಿದ್ದಕ್ಕೆ ಸೋದರರ ಮೇಲೆ ಅಟ್ಯಾಕ್, ಓರ್ವ ಸಾವು
ಸಾಧು ಶ್ರೀನಾಥ್​

Updated on: Feb 12, 2020 | 1:24 PM

ಮೈಸೂರು: ಭಾವನ ಮೇಲೆ ಹಲ್ಲೆ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬ ಸಹೋದರ ಸಾವಿಗೀಡಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಕೆಲ ದಿನಗಳ ಹಿಂದೆ ಧರ್ಮಪಾಲ ಎಂಬುವರ ಮೇಲೆ ಹಲ್ಲೆ ರಾಜು ಎಂಬುವರು ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿರುವ ಬಗ್ಗೆ ಕಾಂತರಾಜು ಮತ್ತು ನಾರಾಯಣ್ ಎಂಬುವರು ರಾಜು ಬಳಿ ಕೇಳಿದ್ದಾರೆ. ಹಲ್ಲೆ ವಿಚಾರವಾಗಿ ಗಲಾಟೆಯಾಗಿ ರಾಜು ಮತ್ತು ಆತನ ಸಹೋದರ ಸಂತೋಷ್ ಇಬ್ಬರೂ ಸೇರಿಕೊಂಡು ಕಾಂತರಾಜು ಮತ್ತು ನಾರಾಯಣ್ ಮೇಲೆ ಕಬ್ಬಿಣದ ರಾಡುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ನಾರಾಯಣ್ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಸಂತೋಷ್ ಮತ್ತು ರಾಜುರನ್ನು ಬಂಧಿಸಿದ್ದಾರೆ.

Published On - 11:14 am, Wed, 12 February 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us