Crime Story: ಸೆಕ್ಯುರಿಟಿ ಗಾರ್ಡ್​ನ ವಿಚಿತ್ರ ಲವ್: ‘ಲೇಡಿ ಆಫ್ ಸ್ಮೆಲ್’ ಮರ್ಡರ್ ಸ್ಟೋರಿ..!

| Updated By: ಝಾಹಿರ್ ಯೂಸುಫ್

Updated on: Aug 28, 2021 | 1:32 PM

Crime News in Kannada: ಗೋವಾದ ಅಂದಿನ ಪೊಲೀಸ್ ಮಹಾನಿರ್ದೇಶಕ ಮುಕ್ತೇಶ್ ಚಂದ್ ತಕ್ಷಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿದರು.

Crime Story: ಸೆಕ್ಯುರಿಟಿ ಗಾರ್ಡ್​ನ ವಿಚಿತ್ರ ಲವ್: ಲೇಡಿ ಆಫ್ ಸ್ಮೆಲ್ ಮರ್ಡರ್ ಸ್ಟೋರಿ..!
ಹಂತಕ ರಾಜೇಶ್-ಮೋನಿಕಾ
Follow us on

ಮೋನಿಕಾ ಗುರ್ಡೆ ಅಥವಾ ‘ಲೇಡಿ ಆಫ್ ಸ್ಮೆಲ್’… ಮೋನಿಕಾ ಮೂಲತಃ ಮಹಾರಾಷ್ಟ್ರದ ನಾಗಪುರ ನಗರದ ನಿವಾಸಿ. ಇವರ ತಂದೆ ನಿವೃತ್ತ ನ್ಯಾಯಾಧೀಶರು. ತಂದೆಯ ಸಲಹೆಯಂತೆ ಮೋನಿಕಾ ಮುಂಬೈನಲ್ಲಿ ತನ್ನ ಉನ್ನತ ಶಿಕ್ಷಣವನ್ನು ಪಡೆದಿದ್ದಳು. ಶಿಕ್ಷಣದ ಹೊರತಾಗಿ ಮೋನಿಕಾ ಫೋಟೋಗ್ರಫಿ ಬಗ್ಗೆ ಹೆಚ್ಚಿನ ಒಲವಿತ್ತು. ಬಾಲ್ಯದಿಂದಲೂ ವಿಭಿನ್ನವಾದದ್ದನ್ನು ಮಾಡಬೇಕೆಂದು ಉತ್ಸುಕತೆ ಹೊಂದಿದ್ದ ಛಾಯಾಗ್ರಹಣವನ್ನೇ ವೃತ್ತಿಯಾಗಿಸುವ ಯೋಚನೆಯಲ್ಲಿದ್ದರು. ಇದರ ಜೊತೆಗೆ ದೇಶೀಯ ಮತ್ತು ವಿದೇಶಿ ಅಮೂಲ್ಯವಾದ ಸುಗಂಧ ದ್ರವ್ಯಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಅತ್ಯುತ್ತಮವಾದ ಸುಗಂಧಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದರು. ಅತ್ತ ಮೋನಿಕಾ ಮುಂಬೈನ ಜೆಜೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಆರ್ಟ್ಸ್‌ನಿಂದ ಫೋಟೋಗ್ರಫಿಯಲ್ಲಿ ಪದವಿ ಕೋರ್ಸ್ ಮುಗಿಸಿದರು. ಇನ್ನೇನು ಫೋಟೋಗ್ರಫಿ ವೃತ್ತಿ ಶುರು ಮಾಡಬೇಕೆಂದು ಬಯಸಿದರೂ ಅತ್ತ ಸುಗಂಧ ದ್ರವ್ಯಗಳ ಸುವಾಸನೆ ಮೋನಿಕಾಳನ್ನು ಸೆಳೆಯುತ್ತಿತ್ತು.

ಸುಗಂಧ ದ್ರವ್ಯದೊಂದಿಗಿನ ಅವರ ಒಲವಿನಿಂದ ದೂರವಿರಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಸುಗಂಧ ದ್ರವ್ಯ ಮತ್ತು ಛಾಯಾಗ್ರಹಣ ಜೊತೆ ಏಕಕಾಲದಲ್ಲಿ ಜೀವನ ಪ್ರಯಾಣ ಮುಂದುವರೆಸಲು ನಿರ್ಧರಿಸಿದರು. ಅದರಂತೆ ಮೋನಿಕಾ ಛಾಯಾಗ್ರಹಣವನ್ನು ತನ್ನ ಹವ್ಯಾಸವಾಗಿ ಮತ್ತು ಸುಗಂಧ ದ್ರವ್ಯದ ವ್ಯಾಪಾರವಾಗಿಸಿಕೊಂಡಳು. ಸುಂದರ ಕನಸುಗಳಿಗೆ ರೆಕ್ಕೆಗಳನ್ನು ಕೊಡುವ ಭರವಸೆಯೊಂದಿಗೆ ಮೋನಿಕಾ ಮುಂಬೈ ಬಿಟ್ಟಳು.

ಆ ಬಳಿಕ ನೆಲೆ ಕಂಡುಕೊಂಡಿದ್ದೇ ನಮ್ಮ ಬೆಂಗಳೂರಿನಲ್ಲಿ. ಸಿಲಿಕಾಟ್ ಸಿಟಿಗೆ ಬಂದ ಸ್ವಲ್ಪ ಸಮಯದಲ್ಲೇ ಮೋನಿಕಾಗೆ ಛಾಯಾಗ್ರಾಹಕರೊಬ್ಬರು ಪರಿಚಯರಾದರು. ಪರಿಚಯ ಪ್ರೇಮವಾಗಿ ಪ್ರೇಮ ಪ್ರಣಯವಾಗಿ ಇಬ್ಬರು ವಿವಾಹವಾದರು. ಅದು 2004, ಹೊಸ ಜೀವನ ಆರಂಭಿಸಿದ್ದ ಇಬ್ಬರೂ ಬೆಂಗಳೂರು ಬಿಟ್ಟು ಬೇರೊಂದು ನಗರವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ 2009 ರಲ್ಲಿ ಚೆನ್ನೈನಲ್ಲಿ ಹೊಸ ಬಾಳನ್ನು ಆರಂಭಿಸಿದರು.

ಇತ್ತ ಬೆಂಗಳೂರಿನಲ್ಲಿದ್ದ ಈ ಜೋಡಿಗೆ ಚೆನ್ನೈ ಅಷ್ಟೊಂದು ಹಿಡಿಸಿರಲಿಲ್ಲ. ಹೀಗಾಗಿ 2011 ರಲ್ಲಿ ಇಬ್ಬರೂ ಗೋವಾಗೆ ಶಿಫ್ಟ್ ಆದರು. ಮೋನಿಕಾ ಛಾಯಾಗ್ರಹಣ ಮತ್ತು ಸುಗಂಧ ದ್ರವ್ಯಗಳ ವ್ಯಾಪಾರವನ್ನು ಅಲ್ಲೂ ಆರಂಭಿಸಿದಳು. ಆದರೆ ಈ ಬಾರಿ ಮೋನಿಕಾಳ ಅದೃಷ್ಟ ಕೈ ಹಿಡಿದಿತ್ತು. ಗೋವಾದಲ್ಲಿ ಮೋನಿಕಾ ರಾತ್ರೋರಾತ್ರಿ ಖ್ಯಾತಿ ಪಡೆದಳು. ಈಕೆ ನೀಡುತ್ತಿದ್ದ ಸುಗಂಧ ದ್ರವ್ಯಕ್ಕೆ ದೇಶ-ವಿದೇಶಿಗಳೂ ಕೂಡ ಮಾರು ಹೋದರು. ಖ್ಯಾತಿಯು ವಿಶ್ವ ಖ್ಯಾತಿಯಾಯಿತು. ವಿಶ್ವದ ಪ್ರಸಿದ್ಧ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಾದ ಮಿಂಟ್, ಎಲ್ಡೆಕೋರ್, ವೋಗ್, ಮುಖಪುಟದಲ್ಲಿ ಮೋನಿಕಾ ಗುರ್ಡೆ ಫೋಟೋಗಳು ಕಾಣಿಸಿಕೊಂಡಿತು.

ಇನ್ನೊಂದೆಡೆ 2016 ರಲ್ಲಿ, ಮೋನಿಕಾ ಛಾಯಾಗ್ರಹಣಕ್ಕಾಗಿ “ಎಕ್ಸಲೆನ್ಸ್ ಅವಾರ್ಡ್” ಪಡೆದರು. ಜೊತೆಗೆ ಸುಗಂಧ ದ್ರವ್ಯದ ವ್ಯವಹಾರ ಕೂಡ ವಿದೇಶಕ್ಕೆ ವ್ಯಾಪಿಸಿತು. ಇವರ ಸುಗಂಧ ದ್ರವ್ಯಗಳಿಗೆ ಇಂಗ್ಲೆಂಡ್​ನಲ್ಲಿ ಮಾರುಕಟ್ಟೆ ಸೃಷ್ಟಿಯಾಯಿತು. ಸುಗಂಧ ದ್ರವ್ಯದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮೋನಿಕಾ “ಲೇಡಿ ಆಫ್ ಸ್ಮೆಲ್” ಎಂಬ ಹೆಸರಿನಿಂದ ಗುರುತಿಸಿಕೊಂಡರು.

ಸುಗಂಧ ದ್ರವ್ಯ ವ್ಯಾಪಾರದ ಖ್ಯಾತಿ ಮತ್ತು ಕೆಲಸದ ಹೊರೆ ಮೋನಿಕಾಳನ್ನು ಮನೆಯ ಜೀವನದ ಟ್ರ್ಯಾಕ್ ತಪ್ಪಿಸಿತು. ಕೆಲವೇ ವರ್ಷಗಳಲ್ಲಿ, ಮೋನಿಕಾ ತನ್ನ ಗಂಡನಿಂದ ದೂರವಾದಳು. ಪತಿಯಿಂದ ಬೇರ್ಪಟ್ಟ ಬಳಿಕ, ಮೋನಿಕಾ ಮತ್ತೆ ಗೋವಾದಲ್ಲೇ ಉಳಿದು ಸುಗಂಧ ದ್ರವ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಳು. ‘MO’ ಹೆಸರಿನಲ್ಲಿ ದೊಡ್ಡ ಸುಗಂಧ ದ್ರವ್ಯ ಪ್ರಯೋಗಾಲಯವನ್ನು ಸ್ಥಾಪಿಸಿದರು. ಪತಿಯಿಂದ ಬೇರ್ಪಟ್ಟ ಒಂದು ವರ್ಷದ ನಂತರ, ಅಂದರೆ ಏಪ್ರಿಲ್ 2016 ರಲ್ಲಿ, ಪಣಜಿಯಿಂದ (ಗೋವಾದ ರಾಜಧಾನಿ) 10-12 ಕಿಮೀ ದೂರದಲ್ಲಿರುವ ಕಲಂಗೂಟ್ ಬೀಚ್ ಬಳಿ ಐಷಾರಾಮಿ ಫ್ಲ್ಯಾಟ್​ ಖರೀದಿಸಿದರು.

ಅದು ಅಕ್ಟೋಬರ್ 7, 2016.. ಬೆಳಿಗ್ಗೆ 9 ಗಂಟೆ ಸುಮಾರಿಗೆ ಲೇಡಿ ಆಫ್ ಸ್ಮೆಲ್ ಉಸಿರು ನಿಲ್ಲಿಸಿರುವುದಾಗಿ ವರದಿಯಾಗಿತ್ತು. ಫ್ಲ್ಯಾಟ್​ನಲ್ಲಿ ಮೋನಿಕಾ ಗುರ್ಡೆ ಕೊಲೆ ಮಾಡಿರುವ ರೂಪದಲ್ಲಿ ಕಂಡು ಬಂತು. ಗೋವಾ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದಾಗ, ಅದು ದಿಗ್ಭ್ರಮೆಗೊಂಡರು. ಕೊಲೆಗೂ ಮುನ್ನ ಮೋನಿಕಾ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಿತ್ತು.

ಗೋವಾದ ಅಂದಿನ ಪೊಲೀಸ್ ಮಹಾನಿರ್ದೇಶಕ ಮುಕ್ತೇಶ್ ಚಂದ್ ತಕ್ಷಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿದರು. ಮೋನಿಕಾ ಕೊಲೆ ಪ್ರಕರಣದಲ್ಲಿ, ಗೋವಾ ಪೊಲೀಸರು ಫ್ಲ್ಯಾಟ್ ಸೆಕ್ಯುರಿಟಿ ಗಾರ್ಡ್ ರಾಜೇಶ್ ಕುಮಾರ್ ಸಿಂಗ್ ಅವರನ್ನು ಬಂಧಿಸಿದರು. ಆ ಬಳಿಕ ಆತನನ್ನು ವಿಚಾರಿಸಿದಾಗ ಒಂದೊಂದೇ ವಿಷಯ ಬಾಯಿಬಿಟ್ಟಿದ್ದಾನೆ.

ಕೊಲೆ ಆರೋಪಿ ರಾಜೇಶ್ ಕುಮಾರ್​ಗೆ ಮೋನಿಕಾ ಮೇಲೆ ಲವ್ ಆಗಿತ್ತು. ಅದು ಕೂಡ ಒನ್​​ಸೈಡ್ ಲವ್. ಆದರೆ ಕೇವಲ ಸೆಕ್ಯುರಿಟಿ ಗಾರ್ಡ್ ಆಗಿದ್ದ ರಾಜೇಶ್​ಗೆ ಮೋನಿಕಾಳನ್ನು ಒಲೈಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಆಕೆ ಬಳಸುತ್ತಿದ್ದ ಹಲವು ವಸ್ತುಗಳನ್ನು ಕದ್ದೊಯ್ಯುತ್ತಿದ್ದ. ಒಂದಾರ್ಥದಲ್ಲಿ ರಾಜೇಶ್ ಲೇಡಿ ಆಪ್​ ಸ್ಮೆಲ್​ಗೆ ಸೈಕೋ ಆಗಿದ್ದ.

ಅದೊಂದು ದಿನ ಕಾರನ್ನು ಸ್ವಚ್ಛಗೊಳಿಸುವಾಗ ರಾಜೇಶ್ ಮೋನಿಕಾಳ ಕೊಡೆ ಕದ್ದಿದ್ದ. ಈ ವೇಳೆ ಸಿಕ್ಕಿಬಿದ್ದ ರಾಜೇಶ್​ನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದರಿಂದ ನೊಂದಿದ್ದ ರಾಜೇಶ್ ಮೋನಿಕಾ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧಿಸಿದ್ದ. ಅದರಂತೆ ಮೋನಿಕಾ ಫ್ಲ್ಯಾಟ್​ಗೆ ನುಗಿದ್ದ ರಾಜೇಶ್ ಆಕೆಯ ಕೈಗಳನ್ನು ಕಟ್ಟಿಹಾಕಿ ಅತ್ಯಾಚಾರ ಎಸೆಗಿದ್ದ. ಆ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಎಸ್ಕೇಪ್ ಆಗಿದ್ದನು. ಈ ಕೊಲೆ ಪ್ರಕರಣ ಅಂದು ಗೋವಾದಲ್ಲಿ ಸಂಚಲನ ಸೃಷ್ಟಿಸಿತ್ತು. ಲೇಡಿ ಆಫ್ ಸ್ಮೆಲ್​ ಎಂದೇ ಹೆಸರುವಾಸಿಯಾಗಿದ್ದ 38 ವರ್ಷದ ಮೋನಿಕಾ ಕೊಲೆಯ ವಿಚಾರ ಅಂದು ವಿದೇಶಿ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(perfumer monika ghurdes murder case inside story)

Published On - 9:47 pm, Thu, 26 August 21