ಕೋಟ್ಯಾಂತರ ರೂ ಹಣದ ಲಾಲಸೆ: ಸ್ಕೂಲ್ ವ್ಯಾನ್ ಅಡ್ಡಹಾಕಿ ಕಿಡ್ನ್ಯಾಪ್​​ಗೆ ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ

ಸ್ಕೂಲ್ ವ್ಯಾನ್ ಅಡ್ಡಹಾಕಿ ಕಿಡ್ನ್ಯಾಪ್​​ಗೆ ಯತ್ನಿಸಿದ ಇಬ್ಬರನ್ನು ಬೆಂಗಳೂರು ಹೊರವಲಯದ ಅವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೋಟ್ಯಾಂತರ ರೂ ಹಣದ ಲಾಲಸೆ: ಸ್ಕೂಲ್ ವ್ಯಾನ್ ಅಡ್ಡಹಾಕಿ ಕಿಡ್ನ್ಯಾಪ್​​ಗೆ ಯತ್ನಿಸಿದ ಇಬ್ಬರು ಆರೋಪಿಗಳ ಬಂಧನ
ಶಕ್ತಿವೇಲು, ಸುನೀತಾ ಬಂಧಿತ ಆರೋಪಿಗಳು
TV9kannada Web Team

| Edited By: Vivek Biradar

Jul 02, 2022 | 5:14 PM

ಬೆಂಗಳೂರು: ಶಾಲಾ ವಾಹನ (School Van) ಅಡ್ಡಹಾಕಿ ಕಿಡ್ನ್ಯಾಪ್​​ಗೆ (Kidnap) ಯತ್ನಿಸಿದ ಇಬ್ಬರನ್ನು ಬೆಂಗಳೂರು ಹೊರವಲಯದ ಅವಲಹಳ್ಳಿ ಪೊಲೀಸರು (Police) ಬಂಧಿಸಿದ್ದಾರೆ. ಶಕ್ತಿವೇಲು, ಸುನೀತಾ ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡಿದಾಗ  ಆರೋಪಿ ಶಕ್ತಿವೇಲು, ದೂರುದಾರರ ಮನೆಯಲ್ಲಿ ಹತ್ತು ದಿನಗಳ ಕಾಲ ಕೆಲಸ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ. ಈ ವೇಳೆ ಇವರ ಬಳಿ ಕೋಟ್ಯಾಂತರ ಹಣ ಇದೆ ಅಂತಾ ಸ್ನೇಹಿತೆ ಸುನೀತಾ ಜೊತೆಗೆ ಸೇರಿ ಪ್ಲಾನ್ ಮಾಡಿ ಕೃತ್ಯ  ಎಸಗಲು ಮುಂದಾಗಿದ್ದಾರೆ. ನಂತರ ಬಾಲಕನ ಪೋಷಕರಿಗೆ ಕರೆ ಮಾಡಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ:  ವಿದ್ಯಾಪೀಠ ಸರ್ಕಲ್ ಬಳಿ ಒಂಟಿ ವೃದ್ಧೆಯ ಬರ್ಬರ ಹತ್ಯೆ

ಬಾಲಕ ಶಾಲೆಯ ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಆರೋಪಿಗಳು ವಾಹನಕ್ಕೆ ಅಡ್ಡಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಆದರೆ ಶಾಲಾ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಕಿಡ್ನ್ಯಾಪ್ ತಪ್ಪಿಸಿದ್ದನು. ಘಟನೆ ಸಂಬಂಧ ಆವಲಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಶ್ರೀರಾಮಪುರ ಪೊಲೀಸರಿಂದ ಮಾದಕ ವಸ್ತು ಮಾರಾಟಗಾರನ ಬಂಧನ

ಬೆಂಗಳೂರು: ಕುಖ್ಯಾತ ಮಾದಕ ವಸ್ತು ಮಾರಾಟಗಾರ ಆರೋಪಿ ನಾರಾಯಣನನ್ನು PIT NDPS ಕಾಯ್ದೆಯಡಿ ಶ್ರೀರಾಮಪುರ ಪೊಲೀಸರು ಬಂಧಸಿದ್ದಾರೆ. ಆರೋಪಿ ನಿರಂತರವಾಗಿ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದನು. ಇದುವರೆಗೂ ಏಳು ಬಾರಿ ಮಾದಕ ವಸ್ತು ಮಾರಾಟದ ವೇಳೆ ಸಿಕ್ಕಿಬಿದ್ದಿದ್ದನು.  ನಾರಾಯಣ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕವು ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದನು. ಈ ಹಿನ್ನೆಲೆ PIT NDPS ಕಾಯ್ದೆಯಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ, ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ನೇಣಿಗೆ ಶರಣು

ಬೆಂಗಳೂರಿನಲ್ಲಿ ಬ್ರೇಕ್ ಪೇಲ್ ಆಗಿ ಬೃಹತ್ ಸರಕು ಸಾಗಣೆ ಲಾರಿ ಅಪಘಾತ

ಬೆಂಗಳೂರು:  ಬ್ರೇಕ್ ಪೇಲ್ ಆಗಿ ಬೃಹತ್ ಸರಕು ಸಾಗಣೆ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರಾಗಿರುವ ಘಟನೆ ಬೆಂಗಳೂರಿನ ಚಂದ್ರಲೇಟ್ ಬಳಿ ನಾಗರಬಾವಿಯ ಅಂಡರ್ ಪಾಸ್ ನಲ್ಲಿ ನಡೆದಿದೆ. ಬ್ರೇಕ್ ಫೈಲ್ ಆಗಿ ಅಡ್ಡಾದಿಡ್ಡಿಯಾಗಿ ಬರ್ತಿದ್ದನ್ನ ಗಮನಿಸಿ ಬೈಕ್ ಸವಾರ ಬೈಕ್ ಬಿಟ್ಟು ಜಂಪ್ ಮಾಡಿ ಜೀವ ಉಳಿಸಿಕೊಂಡಿದ್ದಾನೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನ ಜಖಂ ಆಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶುದ್ಧ ನೀರಿನ ಘಟಕದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಚಿತ್ರದುರ್ಗ: ಹಿರಿಯೂರು ತಾಲೂಕಿನ ಮದ್ದನಕುಂಟೆ ಗ್ರಾಮದ ಶುದ್ಧ ನೀರಿನ ಘಟಕದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ.  ಆದರ್ಶ (24) ಮೃತ ಯುವಕ. ನೀರಿನ ಘಟಕದಲ್ಲಿ 2 ದಿನಗಳಿಂದ ವಿದ್ಯುತ್ ಸಮಸ್ಯೆ ಹಿನ್ನೆಲೆ ರಿಪೇರಿ ಮಾಡಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಎಂ.ಡಿ.ಕೋಟೆ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆಂದು ಆರೋಪಿಸಲಾಗುತ್ತದೆ. ಐಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada