ಯುವಕನಿಂದ ಅಪ್ರಾಪ್ತ ಬಾಲಕನ ಅಪಹರಣ: ಕಾರಣ ಕೇಳಿ ದಂಗಾದ ಪೊಲೀಸರು

ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದಕ್ಕಾಗಿ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಅಪಹರಣಕ್ಕೆ ಯುವಕ ನೀಡಿದ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ,

ಯುವಕನಿಂದ ಅಪ್ರಾಪ್ತ ಬಾಲಕನ ಅಪಹರಣ: ಕಾರಣ ಕೇಳಿ ದಂಗಾದ ಪೊಲೀಸರು
ಸಾಂಧರ್ಬಿಕ ಚಿತ್ರ
Edited By:

Updated on: Jan 08, 2023 | 10:23 AM

ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದಕ್ಕಾಗಿ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಅಪಹರಣಕ್ಕೆ ಯುವಕ ನೀಡಿದ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ, ಸಂತಾನವಿಲ್ಲದ ತನ್ನ ಚಿಕ್ಕಪ್ಪನಿಗೆ ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಅಪ್ರಾಪ್ತನನ್ನು ಅಪಹರಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೌತಮಪುರಿಯ ಮನೆಯ ಹೊರಗೆ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕ ನಾಪತ್ತೆಯಾಗಿದ್ದ. ಎರಡು ದಿನಗಳ ಕಾಲ ಬಾಲಕನಿಗಾಗಿ ಹುಡುಕಾಟ ನಡೆಸಿದ ನಂತರ ಆತನ ತಂದೆ ಪೊಲೀಸರನ್ನು ಸಂಪರ್ಕಿಸಿದರು.

ದೂರುದಾರರ ನೆರೆಹೊರೆಯವರಾದ ನೀರಜ್ ಕೂಡ ಅದೇ ರಾತ್ರಿ ಪ್ರದೇಶವನ್ನು ತೊರೆದಿದ್ದು ಮರುದಿನ ಬೆಳಗಿನವರೆಗೂ ಹಿಂತಿರುಗಿಲ್ಲ ಎಂದು ತನಿಖೆಯ ಸಮಯದಲ್ಲಿ ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ.

ಪೊಲೀಸರು ನೀರಜ್ ನನ್ನು ಪತ್ತೆ ಹಚ್ಚಿದ್ದಾರೆ. ಮಗುವನ್ನು ಅಪಹರಿಸಿ ಅಲಿಘರ್‌ನಲ್ಲಿರುವ ತನ್ನ ಚಿಕ್ಕಪ್ಪ ಸುನೀತ್ ಬಾಬು ಮನೆಗೆ ಕಳುಹಿಸಿದ್ದಾಗಿ ನೀರಜ್ ಹೇಳಿದ್ದಾನೆ. ಅವನ ತಾ ಚಿಕ್ಕಪ್ಪನ ಹೆಂಡತಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದಳು, ಆದರೆ ಯಾರೂ ಬದುಕುಳಿಯಲಿಲ್ಲ.
ಹಾಗಾಗಿ ಅಪ್ರಾಪ್ತ ವಯಸ್ಕನನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು. ಪೊಲೀಸರು ಮಗುವನ್ನು ರಕ್ಷಿಸಿ ಚಿಕ್ಕಪ್ಪ-ಸೋದರಳಿಯನನ್ನು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us