Ramanagara: ಕಾರಿಗೆ ಬೈಕ್ ಡಿಕ್ಕಿ: ಮೂವರು ಸವಾರರು ಸ್ಥಳದಲ್ಲೇ ಸಾವು
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಇಂಡಸ್ಟ್ರಿಯಲ್ ಏರಿಯಾ ಬಳಿ ಕಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕಾರು ಮಾಲೀಕನನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರ ಗುರುತು ಪರಿಚಯ ಪರಿಶೀಲನೆ ಮಾಡಲಾಗುತ್ತಿದೆ. ಡಿಸಿಎಂ ಸ್ವಕ್ಷೇತ್ರದಲ್ಲಿ ಆನೆ ದಾಳಿ ಮುಂದುವರೆದಿದೆ.
ರಾಮನಗರ, ಫೆಬ್ರವರಿ 10: ಕಾರಿಗೆ ಬೈಕ್ ಡಿಕ್ಕಿ (accident) ಯಾಗಿ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹಾರೋಹಳ್ಳಿಯ ಇಂಡಸ್ಟ್ರಿಯಲ್ ಏರಿಯಾ ಬಳಿ ಅಪಘಾತ ಸಂಭವಿಸಿದೆ. ಮೃತ ಮೂವರು ಉತ್ತರ ಭಾರತದ ಮೂಲದವರು ಎನ್ನಲಾಗುತ್ತಿದೆ. ದಯಾನಂದ್ ಸಾಗರ್ ಆಸ್ಪತ್ರೆಗೆ ಮೂವರ ಮೃತದೇಹ ಸ್ಥಳಾಂತರ ಮಾಡಲಾಗಿದ್ದು, ಮೃತರ ಗುರುತು ಪರಿಚಯ ಪರಿಶೀಲನೆ ಮಾಡಲಾಗುತ್ತಿದೆ. ಕಾರು ಮಾಲೀಕನನ್ನು ವಶಕ್ಕೆ ಪಡೆದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡಿಸಿಎಂ ಸ್ವಕ್ಷೇತ್ರದಲ್ಲಿ ಮುಂದುವರಿದ ಆನೆ ದಾಳಿ: ಮತ್ತೊಬ್ಬ ರೈತ ಸಾವು
ಡಿಸಿಎಂ ಸ್ವಕ್ಷೇತ್ರದಲ್ಲಿ ಆನೆ ದಾಳಿ ಮುಂದುವರೆದಿದೆ. ಕನಕಪುರದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಸಾವನ್ನಪ್ಪಿರುವಂತಹ ಘಟನೆ ಕನಕಪುರ ತಾಲೂಕಿನ ಮುಗ್ಗೂರು ಗ್ರಾಮದ ಬಳಿ ನಡೆದಿದೆ. ರಾಜು (67) ಮೃತ ರೈತ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಿಯಕರ ರೂಮ್ಗೆ ಬೀಗ ಜಡಿದು ಪರಾರಿ
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕಾಡಾನೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡು ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ
ಶಿವಮೊಗ್ಗ: ನಗರದ ಮಂಜುನಾಥ ಬಡಾವಣೆ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಅಕ್ರಿಖಾನ್, ಮುಸ್ತಾಕ್ ಅಹಮ್ಮದ್, ಆದಿಲ್ ಪಾಶ, ಮಾಜ್ ಬೇಗ್ ಬಂಧಿತರು. ಬಂಧಿತರಿಂದ ಆಯುಧಗಳು, ಖಾರದಪುಡಿ, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಲಕಿ ಸಾವು: ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರ ಬಂಧನ
ಖಾರದ ಪುಡಿ ಎರಚಿ ಆಯುಧ ತೋರಿಸಿ ಚಿನ್ನಾಭರಣ, ಹಣ ದೋಚಲು ಗ್ಯಾಂಗ್ ಸ್ಕೆಚ್ ಹಾಕಿತ್ತು. ಹಣದ ಅವಶ್ಯಕತೆ ಇದ್ದ ಕಾರಣ ದರೋಡೆಗೆ ಸಂಚು ಹಾಕಿದ್ದಾರೆ. ಪೊಲೀಸರ ಎದುರು ದರೋಡೆ ಸಂಚು ಬಹಿರಂಗಪಡಿಸಿದ್ದಾರೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಾಲಕ ವಿರೇಶ್ ನಿರ್ಲಕ್ಷ: ಬೊಲೆರೊ ವಾಹನ ಪಲ್ಟಿಯಾಗಿ ಯುವಕ ಸಾವು
ರಾಯಚೂರು: ಬೊಲೆರೊ ಪಲ್ಟಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಬಳಿಯ ಎನ್ಎಚ್ 150 (C) ಮಾರ್ಗದಲ್ಲಿ ನಡೆದಿದೆ. ಆಂಜನೇಯ(23)ಮೃತ ಪ್ರಯಾಣಿಕ. ಮೃತ ಆಂಜನೇಯ ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಗ್ರಾಮದ ಯುವಕ.
ಬೊಲೆರೊದಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಪಲ್ಟಿ ಆಗಿದೆ. ಚಾಲಕ ವಿರೇಶ್ ನಿರ್ಲಕ್ಷಕ್ಕೆ ಬೊಲೆರೊ ಪಲ್ಟಿ ಆಗಲು ಕಾರಣವೆಂದು ಆರೋಪ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 pm, Sat, 10 February 24