AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚರ…ಎಚ್ಚರ.. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ

ಶಿವಮೊಗ್ಗದಲ್ಲಿ ಸಿಬಿಐ ಅಧಿಕಾರಿಯೆಂದು ಸೋಗು ಹಾಕಿಕೊಂಡು ವೃದ್ಧರೊಬ್ಬರಿಂದ 41 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಯುಪಿ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 23 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಬಗ್ಗೆ ಹೆದರಿಸಿ ಹಣ ಪಡೆದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಚ್ಚರ...ಎಚ್ಚರ.. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ
ಎಚ್ಚರ...ಎಚ್ಚರ.. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 15, 2024 | 9:12 PM

Share

ಶಿವಮೊಗ್ಗ, ನವೆಂಬರ್ 15: ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ. ವಂಚನೆ (fraud) ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗದ ಸೆನ್​ ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಯುಪಿ ಮೂಲದ ಮೊಹಮ್ಮದ್ ಅಹ್ಮದ್ ಮತ್ತು ಅಭಿಷೇಕ್ ಕುಮಾರ್ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಂದ 23 ಲಕ್ಷದ 89 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧಗೆ ಕರೆ 

ನಗರದ ಗೋಪಾಳ ಬಡಾವಣೆಯ ವೃದ್ಧ ಆನಂದ್ ಎಂಬುವವರು ವಂಚನೆಗೊಳಗಾದವರು. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧ ಆನಂದ್‌ಗೆ ಕರೆ ಮಾಡಿದ್ದ ಖದೀಮರು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ ಎಂದಿದ್ದಾರೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್ ಜಾರಿಯಾಗಿದೆ. ಅರೆಸ್ಟ್ ಮಾಡಲು ಬರುತ್ತಿದ್ದೇವೆ ಎಂಬ ಬಗ್ಗೆ ಭಯ ಹುಟ್ಟಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲೂ ಸಹ 7 ಬಾಂಗ್ಲಾ ಪ್ರಜೆಗಳು ಪತ್ತೆ: ವಿಚಾರಣೆಗೆ ಕರೆದೊಯ್ದ ಪೊಲೀಸರು

ನಿಮ್ಮನ್ನು ಬಂಧಿಸಬಾರದು ಅಂದರೆ ಹಣ ಕೊಡಿ ಎಂದು ಹೆದರಿಸಿದ್ದರು. ಆನಂದ್ ಖಾತೆಯಿಂದ 41 ಲಕ್ಷ ರೂ. ಹಣವನ್ನು ಖದೀಮರು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವ ಬಗ್ಗೆ ಆನಂದ್​ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಶಿವಮೊಗ್ಗದ ಸೆನ್​ ಠಾಣೆಗೆ ದೂರು ನೀಡಿದ್ದಾರೆ.

ಕತ್ತೆ ಹಾಲು ಹೆಸರಿನಲ್ಲಿ ರೈತರಿಗೆ ಕೋಟ್ಯಂತರ ರೂಪಾಯಿ ವಂಚನೆ ಕೇಸ್​ಗೆ ಸಂಬಂಧಿಸಿದಂತೆ ಬಂಧಿತ ಐವರು ಆರೋಪಿಗಳನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಕೋರ್ಟ್‌ನಿಂದ ಸಿಐಡಿ ತಂಡ ಕಸ್ಟಡಿಗೆ ಪಡೆದುಕೊಂಡಿದೆ.

ಇದನ್ನೂ ಓದಿ: ವಾಲಿಬಾಲ್ ತರಬೇತಿ ವೇಳೆ ಶಾಲೆ ಆವರಣದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು

ಜೆನ್ನಿ ಮಿಲ್ಕ್ ಕಂಪನಿ ಎಂಡಿ ನೂತಲಪತಿ ಮುರಳಿ, ಮ್ಯಾನೇಜರ್ ಶಂಕರರೆಡ್ಡಿ‌ ಸೇರಿ ಐವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೊಸಪೇಟೆ ಠಾಣೆಗೆ ಕರೆದೊಯ್ದು ಸಿಐಡಿ ಅಧಿಕಾರಿಗಳಿಂದ ವಿಚಾರಣೆ ಮಾಡಲಾಗಿದೆ. ಸಿಐಡಿ ಡಿವೈಎಸ್‌ಪಿ ಅಸ್ಲಂ ಬಾಷಾ ಆ್ಯಂಡ್​ ತಂಡದಿಂದ ತನಿಖೆ ನಡೆಯುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.