Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ದಾಯಾದಿಗಳ ನಡುವೆ ಆಸ್ತಿಗಾಗಿ ಕದನ; ಪೆಟ್ರೋಲ್ ಹಾಕಿ ಜೀವಂತ ಸುಟ್ಟ ಅಪ್ಪ-ಮಗ

ದಾಯಾದಿಗಳ ನಡುವಿನ ಆಸ್ತಿ ವಿವಾದವು ಕೊಲೆಯಲ್ಲಿ ಅಂತ್ಯವಾಗಿದೆ. ತಂದೆ ಮಗ ಸೇರಿ ಅಮಾನುಷವಾಗಿ ಸಂಬಂಧಿ ಎನ್ನುವುದನ್ನೂ ಮರೆತು ಪೆಟ್ರೋಲ್ ಸುರಿದು ಸಜೀವವಾಗಿ ಸುಟ್ಟು ಕೊಲೆ ಮಾಡಿದ್ಧಾರೆ. ಬೆಂಕಿಯಲ್ಲಿ ಸುಟ್ಟು ನರಳಾಡಿದ ವ್ಯಕ್ತಿಯು ಸಾಯುವ ಮೊದಲು ಕೊಲೆ ಮಾಡಿದರ ಹೆಸರನ್ನು ಬಹಿರಂಗ ಪಡಿಸಿದ್ದಾನೆ.

ಶಿವಮೊಗ್ಗ: ದಾಯಾದಿಗಳ ನಡುವೆ ಆಸ್ತಿಗಾಗಿ ಕದನ; ಪೆಟ್ರೋಲ್ ಹಾಕಿ ಜೀವಂತ ಸುಟ್ಟ ಅಪ್ಪ-ಮಗ
ಮೃತ ವ್ಯಕ್ತಿ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 03, 2023 | 6:09 PM

ಶಿವಮೊಗ್ಗ, ಡಿ.03: ತಾಲೂಕಿನ ಬೆಳಲಕಟ್ಟೆ ಗ್ರಾಮದಿಂದ ಇಂದು(ಡಿ.03)ಬೆಳಗ್ಗೆ ಮಗಳ ಮನೆಗೆ ಹೋಗುತ್ತಿದ್ದ ಮಹೇಶಪ್ಪ ಎನ್ನುವ ವ್ಯಕ್ತಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾರೆ. ಆಸ್ತಿ ವಿಚಾರ(Property Issue)ಕ್ಕಾಗಿ ದಾಯಾದಿಗಳ ನಡುವಿನ ಮನಸ್ತಾಪವು ಕೊಲೆಯಲ್ಲಿ ಅಂತ್ಯವಾಗಿದೆ. ಬೈಕ್ ಮೇಲೆ ಹೋಗುತ್ತಿದ್ದ ಮಹೇಶಪ್ಪನನ್ನು ದಾಯಾದಿ ಕುಮಾರಪ್ಪ ಮತ್ತು ಆತನ ಮಗ ಕಾರ್ತಿಕ್ ಎಂಬುವರು, ಬೈಕ್ ತಡೆದು ಪೆಟ್ರೋಲ್ ಸುರಿದು ಜೀವಂತ ಸುಟ್ಟಿದ್ದಾರೆ. ಜೊತೆಗೆ ಆತನ ಬಳಿಯಿದ್ದ 60 ಸಾವಿರ ರೂಪಾಯಿ ನಗದು ಮತ್ತು ಬೈಕ್​ನ್ನು ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಕರೆ ಮೂಲಕ ಆರೋಪಿಗಳ ವಿಷಯ ತಿಳಿಸಿದ ಮೃತ ವ್ಯಕ್ತಿ

ಬೆಂಕಿಯಿಂದ ಸುಟ್ಟುಗಾಯವಾಗಿದ್ದ ವ್ಯಕ್ತಿಯು ಅಳಿಯನಿಗೆ ಕಾಲ್ ಮಾಡಿ ಸಾಯುವ ಮೊದಲು ತನ್ನ ಹತ್ಯೆ ಮಾಡಿದ ಇಬ್ಬರ ಹೆಸರನ್ನು ಹೇಳಿದ್ದಾನೆ. ಸುಟ್ಟ ಗಾಯದಿಂದ ಬಳಲುತ್ತಿದ್ದ ವ್ಯಕ್ತಿಯು ನರಳಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕೊಲೆ ಮಾಡಿದ ಕುಮಾರಪ್ಪ ಮತ್ತು ಕಾರ್ತಿಕ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದು, ಕೊಲೆ ಮಾಡಿದ ತಂದೆ ಮಕ್ಕಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತನ ಮಗಳು ಒತ್ತಾಯಿಸಿದ್ದಾಳೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ತಂಗಿಯ ಮಗನನ್ನು ಕೊಲೆ ಮಾಡಿ ಬೆಂಗಳೂರಿಗೆ ಬಂದಿದ್ದ ಅಕ್ಕ ಆಟೋ ಚಾಲಕನ ಜಾಣ್ಮೆಯಿಂದ ಸಿಕ್ಕಬಿದ್ದಳು

ಮೂರು ಎಕರೆ ಜಮೀನು ವಿಚಾರ; ಸಂಬಂಧಿಯನ್ನೇ ಜೀವಂತ ಸುಟ್ಟ ಅಪ್ಪ-ಮಗ

ನಿತ್ಯ ಮಹೇಶಪ್ಪ ಮಗಳ ಮನೆಗೆ ಹೋಗಿ ತೋಟಕ್ಕೆ ನೀರು ಬಿಟ್ಟು ವಾಪಾಸಾಗುತ್ತಿದ್ದರು. ನಿನ್ನೆ(ಡಿ.02) ನೀರಿನ ಮೋಟಾರ್ ಕೆಟ್ಟಕಾರಣ ಇಂದು ಬೆಳಿಗ್ಗೆ ಮೋಟಾರ್ ಬದಲಾಯಿಸಲು ತೀರ್ಮಾನಿಸಿ, ಮನೆಯಿಂದ ದ್ವಿಚಕ್ರ ವಾಹನದಲ್ಲಿ 60 ಸಾವಿರ ರೂ ಹಣ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಶಿವಮೊಗ್ಗ ತಾಲೂಕಿನ ಮತ್ತೋಡು ಕ್ರಾಸ್ ಬಳಿ ಈ ಕೃತ್ಯ ನಡೆದಿದೆ. ಕೊಲೆಯಾದ ಮಹೇಶಪ್ಪ ಮತ್ತು ದಾಯಾದಿ ಕುಮಾರಪ್ಪ ಇಬ್ಬರ ನಡುವೆ ಮೂರು ಎಕರೆ ಜಮೀನು ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ಇದೆ. ಈ ವಿಚಾರವಾಗಿ ಪದೇ ಪದೇ ದಾಯಾದಿಗಳ ನಡುವೆ ಕಿರಿಕ್ ನಡೆಯುತ್ತಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ ಪ್ಲ್ಯಾನ್ ಮಾಡಿ ತಂದೆ ಮಗ ಸೇರಿ ಮಹೇಶಪ್ಪನನನ್ನು ಜೀವಂತ ಸುಟ್ಟಿದ್ದಾರೆ.

ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಮಹೇಶಪ್ಪ ಬದುಕುಳಿಯುವುದು ಕಷ್ಟವೆಂದಿದ್ದಾರೆ. ಬಳಿಕ ಮೆಗ್ಗಾನ್ ಗೆ ಸಾಗಿಸಲಾಗಿತ್ತು. ಮೆಗ್ಗಾನ್ ನಲ್ಲಿ ಮಹೇಶಪ್ಪ ಕೊನೆ ಉಸಿರೆಳೆದಿದ್ದಾನೆ. ಕುಮಾರಪ್ಪ, ಮಗ ಕಾರ್ತಿಕ್ ಹೆಸರನ್ನು ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿದ್ದಾನೆ. ಇದರ ಆಧಾರದ ಮೇಲೆ ಈಗಾಗಲೇ ಗ್ರಾಮಾಂತರ ಪೊಲೀಸರು ತಂದೆ ಕುಮಾರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಮಗ ಕಾರ್ತಿಕ್ ಸದ್ಯ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ:ಮೈಸೂರು: ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಅಣ್ಣ, ಅತ್ತಿಗೆಯ ಬರ್ಬರ ಕೊಲೆ

ಮಹೇಶಪ್ಪ, ಆಸ್ತಿ ವಿಚಾರವಾಗಿ ಕುಮಾರಪ್ಪನ ಬೆದರಿಕೆ ಗಲಾಟೆಗಳಿಗೆ ಕ್ಯಾರೆ ಎಂದಿರಲಿಲ್ಲ. ಈ ಜಗಳವು ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಜಮೀನು ವಿವಾದವು ಕೋರ್ಟ್​ನಲ್ಲಿತ್ತು. ಹೀಗಾಗಿ ಗ್ರಾಮಾಂತರ ಪೊಲೀಸರು ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಮಹೇಶಪ್ಪನ ಧಾರುಣ ಹತ್ಯೆ ಆಗಿದ್ದಕ್ಕೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಆಸ್ತಿಗಾಗಿ ವಯಸ್ಸಾದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಪೆಟ್ರೋಲ್ ಹಾಕಿ ಸುಟ್ಟು ಕೊಲೆ ಮಾಡಿದ್ದಾರೆ. ರಕ್ತ ಸಂಬಂಧಿ ಎನ್ನುವುದನ್ನು ಮರೆತು ಕೇವಲ ದ್ವೇಷಕ್ಕಾಗಿ ದಾಯಾದಿಯು ಮಗನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಆಸ್ತಿ ವಿಚಾರವು ಒಂದು ಜೀವವನ್ನೇ ಇಲ್ಲಿ ಬಲಿ ಪಡೆದಿದ್ದು ಮಾತ್ರ ನೋವಿನ ಸಂಗತಿ.

ರಾಜ್ಯದ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:06 pm, Sun, 3 December 23

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್