Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್

Viral Video: ಆಘಾತಕಾರಿ ಘಟನೆಯೊಂದರಲ್ಲಿ, ಬಿಹಾರದ ಅರಾರಿಯಾದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ, ಆತನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್
ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ

Updated on: Aug 27, 2024 | 10:45 PM

ಬಿಹಾರದ ಅರಾರಿಯಾದಲ್ಲಿ ವ್ಯಕ್ತಿಯೊಬ್ಬನನ್ನು ಹಗ್ಗದಿಂದ ಕಟ್ಟಿ ಆತನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿಸಲಾಗಿತ್ತು. ಈ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದ್ದು, ವ್ಯಕ್ತಿಯ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿರುವುದನ್ನು ತೋರಿಸುತ್ತದೆ. ಆತನ ಪ್ಯಾಂಟ್ ಬಿಚ್ಚಿ, ಆತನನ್ನು ಬಗ್ಗಿ ನಿಲ್ಲುವಂತೆ ಹೇಳಿ ಗುಪ್ತಾಂಗದೊಳಗೆ ಪೆನ್ಸಿಲ್ ಮೂಲಕ ಮೆಣಸಿನ ಪುಡಿ ತುಂಬಿಸಲಾಗಿದೆ.

ಈ ವಿಡಿಯೊದಲ್ಲಿರುವ ವ್ಯಕ್ತಿಯನ್ನು ಪುರುಷರ ಗುಂಪು ಸೆರೆಹಿಡಿದಿದೆ. ಅವರು ಆತ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಇಡೀ ಘಟನೆಯನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ ಮೊಹಮ್ಮದ್ ಸಿಫತ್ ಎಂದು ಗುರುತಿಸಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Shocking Video: ದೇವಸ್ಥಾನದೊಳಗೆ ಅಶ್ಲೀಲ ಚಿತ್ರ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ; ಶಾಕಿಂಗ್ ವಿಡಿಯೋ ವೈರಲ್

ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಗಮನ ಸೆಳೆದ ನಂತರ ಕ್ಲಿಪ್‌ನಲ್ಲಿ ಗುರುತಿಸಲಾದ ಮೊಹಮ್ಮದ್ ಸಿಫತ್ ಎಂದು ಗುರುತಿಸಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಗಳಲ್ಲಿ ಒಬ್ಬ ಆ ವ್ಯಕ್ತಿಯ ಬೆನ್ನಿಗೆ ಮೆಣಸಿನ ಪುಡಿ ಸುರಿದು ಪೆನ್ಸಿಲ್ ಬಳಸಿ ಗುದನಾಳದೊಳಗೆ ತುಂಬುತ್ತಿದ್ದ ದೃಶ್ಯವೂ ಕಂಡು ಬಂದಿದೆ. ಬಳಿಕ ಆತನ ಮರ್ಮಾಂಗಕ್ಕೂ ಮೆಣಸಿನ ಪುಡಿಯನ್ನು ಎರಚಲಾಗಿದೆ. ಪುರುಷರ ಗುಂಪು ಆ ವ್ಯಕ್ತಿಯ ಬಟ್ಟೆಯನ್ನು ಸಂಪೂರ್ಣವಾಗಿ ಪರೀಕ್ಷಿಸುವುದನ್ನು ಸಹ ಕಾಣಬಹುದು.


ಈ ಘಟನೆಯ ವೇಳೆ ಅಲ್ಲಿದ್ದ ಅನೇಕರು ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಇದಾದ ಬಳಿಕ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: Viral Video: ರಸ್ತೆಯಲ್ಲಿ ಓಡಾಡುವ ಕುಡುಕರಿಗೆ ಪೊರಕೆಯಲ್ಲಿ ಥಳಿಸಿದ ಮಹಿಳೆಯರು; ವಿಡಿಯೋ ವೈರಲ್

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು ಬಿಹಾರದಲ್ಲಿ “ತಾಲಿಬಾನ್ ರಾಜ್” ಅನ್ನು ತೋರಿಸಿದೆ ಎಂದು ಅವರು ಹೇಳಿದರು. ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇತರರನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us