ಹಾಸನ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಲೆಗೈದ ಅಳಿಯ

ಅರಸೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದ ಸಾವಿತ್ರಮ್ಮ ಎಂಬುವರು ಏಳು ವರ್ಷದ ಹಿಂದೆ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಾರೆ. ಸಾವಿತ್ರಮ್ಮ ಮತ್ತು ಅಣ್ಣ ಪ್ರಭುಸ್ವಾಮಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಪ್ರಭುಸ್ವಾಮಿ ಜಮೀನು ವಿಚಾರವಾಗಿ ಆಗಾಗ್ಗೆ ತಂಗಿ ಜೊತೆ ಜಗಳವಾಡುತ್ತಿದ್ದರು.

ಹಾಸನ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಲೆಗೈದ ಅಳಿಯ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Nov 02, 2023 | 8:27 AM

ಹಾಸನ ನ.02: ಚಾಕುವಿನಿಂದ ಇರಿದು ಸೋದರ ಮಾವನನ್ನು ಅಳಿಯ ಕೊಲೆ ಮಾಡಿರುವ ಘಟನೆ ಅರಸೀಕೆರೆ (Arasikere) ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಪ್ರಭುಸ್ವಾಮಿ (50) ಕೊಲೆಯಾದ ಮಾವ. ಅಜಯ್ (22) ಕೊಲೆಗೈದ ಅಳಿಯ. ಗಂಜಿಗೆರೆ ಗ್ರಾಮದ ಸಾವಿತ್ರಮ್ಮ ಎಂಬುವರು ಏಳು ವರ್ಷದ ಹಿಂದೆ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಾರೆ. ಸಾವಿತ್ರಮ್ಮ ಮತ್ತು ಅಣ್ಣ ಪ್ರಭುಸ್ವಾಮಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಪ್ರಭುಸ್ವಾಮಿ ಜಮೀನು ವಿಚಾರವಾಗಿ ಆಗಾಗ್ಗೆ ತಂಗಿ ಜೊತೆ ಜಗಳವಾಡುತ್ತಿದ್ದರು.

ಪ್ರಭುಸ್ವಾಮಿ ಕುಡಿದು ಬಂದು ತಂಗಿ ಮತ್ತು ಆಕೆಯ ಮಗಳನ್ನು ನಿಂದಿಸುತ್ತಿದ್ದನು. ಗಲಾಟೆ ವಿಚಾರವನ್ನು ಸಾವಿತ್ರಮ್ಮ ಮಗ ಅಜಯ್​ಗೆ​ ಹೇಳಿದ್ದರು. ಮಗ ಅಜಯ್​ ಬೇರೊಂದು ಊರಲ್ಲಿ ವಾಸವಾಗಿದ್ದು, ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ್ದನು. ತನ್ನ ತಾಯಿಯೊಂದಿಗೆ ಜಗಳವಾಡುತ್ತಿರುವುದಕ್ಕೆ ಅಜಯ್​, ಮಾವ ಪ್ರಭುಸ್ವಾಮಿಯ ಜೊತೆ ಜಗಳ ತೆಗೆದಿದ್ದನು. ಜಗಳ ತಾರಕಕ್ಕೇರಿ ಅಜಯ್​, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದನು. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Thu, 2 November 23

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us