Crime News: ದರೋಡೆ ಮಾಡಲು ವಾಚ್ ಶೋರೂಂಗೆ ನುಗ್ಗಿದ ಕಳ್ಳರಿಗೆ ಸಿಕ್ಕಿದ್ದೇನು?
ಬದ್ಲಾಪುರದಲ್ಲಿರುವ ಶೋರೂಂನಲ್ಲಿ ಕಳ್ಳತನವಾಗಿರುವುದರ ಬಗ್ಗೆ ಬೆಳಗಿನ ಜಾವ ಮಾಹಿತಿ ಬಂದ ನಂತರ ಮಾಲೀಕ ರಾಜೇಶ್ ಚವಾಲಾ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದ ಕಳ್ಳತನವನ್ನು ಪತ್ತೆಹಚ್ಚಿದ್ದಾರೆ. ಹಾಗಾದರೆ, ಶೋರೋಂಗೆ ನುಗ್ಗಿದ ಆ ದರೋಡೆಕೋರರಿಗೆ ಸಿಕ್ಕಿದ್ದಾದರೂ ಏನು? ಇಲ್ಲಿದೆ ಮಾಹಿತಿ.
ಥಾಣೆ: ಬದ್ಲಾಪುರದಲ್ಲಿರುವ ರಾಜೇಶ್ ತಮ್ಮ ವಾಚ್ ಶೋರೂಂನಲ್ಲಿ ಕಳ್ಳತನವಾಗಿರುವ ವಿಷಯ ತಿಳಿದು ಸಿಸಿಟಿವಿ ಪರಿಶೀಲಿಸಿದರು. ಆಗ ಅವರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಬುಧವಾರ ರಾತ್ರಿ ಶೋರೂಂನ ಶಟರ್ ಮುರಿದು 7 ಮಂದಿ ಕಳ್ಳರು ಶೋರೂಂನಿಂದ 23 ಲಕ್ಷ ರೂಪಾಯಿ ಮೌಲ್ಯದ 300 ದುಬಾರಿ ವಾಚ್‌ಗಳನ್ನು ಕದ್ದಿದ್ದಾರೆ. ಷಟರ್ ಒಡೆದಿರುವುದು ಮತ್ತು ಸಿಸಿಟಿವಿ ದೃಶ್ಯಾವಳಿಗಳು 7 ಕಳ್ಳರ ಕೃತ್ಯಗಳನ್ನು ಬಹಿರಂಗಪಡಿಸಿದೆ.
ತಮ್ಮ ಶೋರೋಂನ ಬೀಗ ಮುರಿದು ಕಳ್ಳರು ಒಳಗೆ ಬಂದಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಾಲೀಕರು ಅಲ್ಲಿಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಕಳ್ಳತನ ನಡೆದಿತ್ತು. ಕಳ್ಳತನವಾಗಿರುವ ಬಗ್ಗೆ ಬೆಳಗಿನ ಜಾವ ಬಂದ ಎಚ್ಚರಿಕೆಯ ನಂತರ ಶೋರೂಂ ಮಾಲೀಕ ರಾಜೇಶ್ ಚವಾಲಾ ಕಳ್ಳತನವನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: Viral Video: ಹಾವನ್ನು ಇಡಿಯಾಗಿ ನುಂಗಿ ಮತ್ತೆ ಹೊರಹಾಕಿದ ಬೃಹತ್ ನಾಗರಹಾವು; ಮೈ ಜುಮ್ಮೆನಿಸುವ ವಿಡಿಯೋ ವೈರಲ್
ಷಟರ್ ಬೀಗವನ್ನು ಮುರಿದು ಶೋರೂಮ್ ಪ್ರವೇಶಿಸುವಾಗ ಕಳ್ಳರು ತಮ್ಮ ಚಟುವಟಿಕೆಗಳನ್ನು ಮರೆಮಾಚಲು ಕಂಬಳಿ ಬಳಸಿರುವುದನ್ನು ವೀಡಿಯೊ ತೋರಿಸಿದೆ. ನಂತರ ಅವರು ಬೆಲೆಬಾಳುವ ವಾಚ್‌ಗಳನ್ನು ಚೀಲದಲ್ಲಿ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳ್ಳತನವನ್ನು ಪೂರ್ಣಗೊಳಿಸಲು ಮತ್ತು ಅವರ ಹಿಂದಿನ ಶಟರ್ ಅನ್ನು ಮುಚ್ಚಲು 40 ನಿಮಿಷಗಳನ್ನು ತೆಗೆದುಕೊಂಡರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ