ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ಮೂವರು ನದಿ ಪಾಲು; ಗಂಗಾವಳಿ ನದಿಯಲ್ಲಿ ಮೃತ ದೇಹ ಪತ್ತೆ

ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ಮೂವರು ನದಿ ಪಾಲು; ಗಂಗಾವಳಿ ನದಿಯಲ್ಲಿ ಮೃತ ದೇಹ ಪತ್ತೆ
ಸಾಂದರ್ಭಿಕ ಚಿತ್ರ

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಉ.ಕ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಶಿವಾನಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 24, 2022 | 9:04 PM

ಕಾರವಾರ: ಕಪ್ಪೆ ಚಿಪ್ಪು ತೆಗೆಯಲು ತೆರಳಿದ್ದ ಮೂವರು ನದಿ (River) ಪಾಲಾಗಿರುವಂತಹ ಘಟನೆ ಉ.ಕ ಜಿಲ್ಲೆಯ ಅಂಕೋಲಾ ತಾಲೂಕಿನ ಕರಿಕಲ್ ಕಡಕಾರ ಬಳಿಯ ಗಂಗಾವಳಿ ನದಿಯಲ್ಲಿ ನಡೆದಿದೆ. ಕಡಕಾರ ನಿವಾಸಿ ಪೂಜಾ ಮಹೇಶ ನಾಯ್ಕ (18), ಕುಮಟಾ ಕೋನಳ್ಳಿ ನಿವಾಸಿ ದಿಲೀಪ ನಾಯ್ಕ(20), ಅಘನಾಶಿನಿ ನಿವಾಸಿ ನಾಗೇಂದ್ರ (16) ನಾಯ್ಕ ಮೃತ ದುರ್ದೈವಿಗಳು. ಪಿ.ಯು.ಸಿ ವ್ಯಾಸಾಂಗ ಮುಗಿಸಿ ಪದವಿಗೆ ಪೂಜಾ ನಾಯ್ಕ ಸೇರಿದ್ದರು. ಸಂಬಂಧಿಗಳಾದ ದಿಲೀಪ ಮತ್ತು ನಾಗೇಂದ್ರ ಕುಮಟಾ ನಿವಾಸಿಗಳು. ಮೂವರ ಮೃತ ದೇಹ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಂಕೋಲಾ ಪೊಲೀಸರು ಪರಿಶೀಲಿಸಿದ್ದಾರೆ.

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ;

ಕಾರವಾರ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಉ.ಕ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಶಿವಾನಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಭಟ್ಕಳದ ಶಾಸಕ ಸುನೀಲ್ ನಾಯಕ್ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ನಡೆದ ಅಪಘಾತವಾಗಿದ್ದು, ಗಾಯಾಳುಗಳಿಗೆ ನೇರವಾಗಿ ಶಾಸಕ ಸುನಿಲ್ ನಾಯಕ್ ಮಾನವಿಯತೆ ಮೇರೆದಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಓರ್ವ ದುರ್ಮರಣ;

ಕಲಬುರಗಿ: ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಾಯವಾದಂತಹ ಘಟನೆ ಜಿಲ್ಲೆ ಶಹಬಾದ್ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ. ರಾವೂರ್ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ದುರ್ಘಟನೆ ಸಂಭವಿಸಿದ್ದು, ರಾವೂರು ಗ್ರಾಮದ ಲಕ್ಷ್ಮಿಕಾಂತ್ ಕೆಸಬಳ್ಳಿ 25 ಮೃತ ಯುವಕ. ಭೀಮಾಶಂಕರ ಪೂಜಾರಿ , ಯಂಕಪ್ಪ ನೆಡಲ್​ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಾರ ಹಾಗೂ ಸ್ಕೂಟಿ ನಡುವೆ ಅಪಘಾತ; ಸ್ಕೂಟಿ ಚಾಲಕ ಸಾವು

ಕಾರವಾರ: ಕಾರ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಅಂಕೋಲಾ ತಾಲೂಕಿ ಬಾಳೆಗುಳಿ ಸಮೀಪ ನಡೆದಿದೆ. ಗಾಂಧಿ ನಾರಾಯಣ ಶೆಟ್ಟಿ(52) ಮೃತ ವ್ಯಕ್ತಿ. ಕಾರವಾರ ಕಡೆಯಿಂದ ಅಂಕೋಲಾ ಕಡೆ ಬರುತ್ತಿ ವೇಳೆ ಅಪಾಘಾತ ನಡೆದಿದ್ದು, ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ:

ಕೇರಳ ಮುಸ್ಲೀಂರ ಅಂಗಡಿಗಳಲ್ಲಿ ಚಿನ್ನ ಖರೀದಿ ವಿಚಾರವಾಗಿ ಪ್ರಮೋದ ಮುತಾಲಿಕ್ ವಿರುದ್ಧ ಹರಿಹಾಯ್ದ ಸಚಿವ ಉಮೇಶ ಕತ್ತಿ

‘ಪಾಪ ಪಿಎಚ್​​ಡಿ ವಿದ್ಯಾರ್ಥಿಗಳು’ ಶೀರ್ಷಿಕೆಯೊಂದಿಗೆ ಐಐಟಿಯಲ್ಲಿನ ಬದುಕು ಹೇಗಿದೆ ಅಂತ ತೋರಿಸುವ ಫೋಟೊ ಟ್ವೀಟ್ ಮಾಡಿದ ಪ್ರೊಫೆಸರ್

Follow us on

Related Stories

Most Read Stories

Click on your DTH Provider to Add TV9 Kannada