ಲಕ್ನೋ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ವಿವಾದ ಉಂಟಾಗಿ, ನಿವೃತ್ತ ಸೇನಾಧಿಕಾರಿಯೊಬ್ಬರು ತನ್ನ ತಂದೆ ಮತ್ತು ತಮ್ಮನನ್ನು ಶೂಟ್ ಮಾಡಿ (Murder) ಕೊಂದಿದ್ದಾರೆ. ತನ್ನ ಮನೆಯಲ್ಲಿ ಇಬ್ಬರನ್ನು ಕೊಂದ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿಯನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ (Uttar Pradesh) ಅಜಂಗಢ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ಧಂಧರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶೂಟ್ ಮಾಡಿ ಕೊಂದ ಆರೋಪಿಯನ್ನು ನಿವೃತ್ತ ಸೇನಾಧಿಕಾರಿ ಮನೋಜ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದ್ದು, ಮೃತರನ್ನು ಶಿವನಾರಾಯಣ (70), ಮತ್ತು ಮನೀಶ್ ಸಿಂಗ್ (30) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮನೋಜ್ ಕುಮಾರ್ ಸಿಂಗ್ ಅವರ ತಂದೆ ಶಿವನಾರಾಯಣ ಅವರ ಆಸ್ತಿ ವಿವರ ಮತ್ತು ಕೃಷಿಯಿಂದ ಪಡೆದ ಹಣದ ಬಗ್ಗೆ ಕೇಳಿದ್ದರು. ಈ ವೇಳೆ ಚರ್ಚೆಯು ವಾದಕ್ಕೆ ತಿರುಗಿತು. ಆಗ ಕೋಪದಿಂದ ಮನೋಜ್ ಸಿಂಗ್ ತನ್ನ ಅಪ್ಪ ಮತ್ತು ತಮ್ಮನಿಗೆ ಗುಂಡು ಹಾರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ
ಶಿವನಾರಾಯಣ ಮತ್ತು ಮನೋಜ್ ಸಿಂಗ್ ನಡುವೆ ವಾಗ್ವಾದ ನಡೆದಾಗ ಮನೀಶ್ ಕೂಡ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಕೆರಳಿದ ಮನೋಜ್ ಸಿಂಗ್ ಏಕಾಏಕಿ ತನ್ನ ಬಳಿ ಇದ್ದ ಲೈಸನ್ಸ್ ಪಡೆದ ಪಿಸ್ತೂಲ್ ತೆಗೆದು ತಂದೆ ಶಿವನಾರಾಯಣನಿಗೆ ಗುಂಡು ಹಾರಿಸಿದ್ದಾರೆ. ಶಿವನಾರಾಯಣ ನೆಲಕ್ಕೆ ಬಿದ್ದಾಗ ಮನೀಶ್ ತನ್ನ ಅಣ್ಣ ಮನೋಜ್‌ನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಮನೋಜ್ ತನ್ನ ತಮ್ಮ ಮನೀಶ್ ಮೇಲೂ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳಿದ ಅವರ ಚಿಕ್ಕಮ್ಮ ಅವಧ್ರಾಜಿ (65) ಮನೋಜ್ ಅವರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಮನೋಜ್ ಅವರಿಗೆ ದೊಣ್ಣೆಯಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ, ಮನೋಜ್ ತಮ್ಮ ಲೈಸೆನ್ಸ್ ಪಡೆದ ಪಿಸ್ತೂಲ್‌ನೊಂದಿಗೆ ಕೆಲವು ಗಂಟೆಗಳ ನಂತರ ಕಪ್ತಂಗಂಜ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!
ಮನೋಜ್‌ನನ್ನು ಬಂಧಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಜಂಗಢದ ಸರ್ಕಲ್ ಅಧಿಕಾರಿ ಲಲ್ತಾ ಪ್ರಸಾದ್ ತಿಳಿಸಿದ್ದಾರೆ. ಮನೀಷ್ 6 ವರ್ಷದವನಾಗಿದ್ದಾಗ ಅವಧ್ರಾಜಿ ದತ್ತು ಪಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ ಎಂದು ಕಪ್ತಂಗಂಜ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Thu, 23 June 22