Viral News: 47 ಲಕ್ಷ ರೂ. ಜೊತೆ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿಯ ಹೆಂಡತಿ ಪರಾರಿ!

Extra Marital Affair: ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಕೋಟ್ಯಧಿಪತಿಯಾಗಿದ್ದ ಉದ್ಯಮಿ ತನಗಿಂತಲೂ 13 ವರ್ಷ ಸಣ್ಣ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು.

Viral News: 47 ಲಕ್ಷ ರೂ. ಜೊತೆ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿಯ ಹೆಂಡತಿ ಪರಾರಿ!
ಸಾಂದರ್ಭಿಕ ಚಿತ್ರ
Edited By:

Updated on: Oct 27, 2021 | 7:56 PM

ಇಂದೋರ್: ಆಕೆಯ ಗಂಡ ಕೋಟ್ಯಧಿಪತಿ. ಆಕೆಗೆ ಮನೆಯಲ್ಲಿ ಏನೆಲ್ಲ ಬೇಕೋ ಅದೆಲ್ಲವೂ ಇತ್ತು. ಆದರೂ ಆಕೆಗೆ ಆಟೋ ಚಾಲಕನತ್ತ ಸೆಳೆತ. ಆಟೋ ಚಾಲಕನ ಪ್ರೇಮಪಾಶಕ್ಕೆ ಬಿದ್ದ ಕೋಟ್ಯಧಿಪತಿಯ ಹೆಂಡತಿ ಆತನೊಂದಿಗೆ ಪರಾರಿಯಾಗಿದ್ದಾಳೆ. ಅಷ್ಟೇ ಅಲ್ಲ; ಹೋಗುವಾಗ ಮನೆಯಲ್ಲಿದ್ದ 47 ಲಕ್ಷ ರೂ. ಹಣವನ್ನೂ ತೆಗೆದುಕೊಂಡು ಓಡಿಹೋಗಿದ್ದಾಳೆ. ಹೆಂಡತಿ ಆಟೋ ಚಾಲಕನೊಂದಿಗೆ ಓಡಿಹೋದ ಸುದ್ದಿ ಗೊತ್ತಾಗುತ್ತಿದ್ದಂತೆ ಆ ಕೋಟ್ಯಾಧೀಶ್ವರ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಕೋಟ್ಯಧಿಪತಿಯಾಗಿದ್ದ ಉದ್ಯಮಿ ತನಗಿಂತಲೂ 13 ವರ್ಷ ಸಣ್ಣ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು. ಆಕೆಗೆ ಗಂಡನಿಂದ ಪ್ರೀತಿ ಸಿಕ್ಕಿರಲಿಲ್ಲ. ಹೀಗಾಗಿ, ಆಟೋ ಚಾಲಕನೊಂದಿಗೆ ಸ್ನೇಹ ಬೆಳೆಸಿದ ಆಕೆ ಆತನೊಂದಿಗೆ ಪರಾರಿಯಾಗಿದ್ದಾಳೆ. ಅಕ್ಟೋಬರ್ 13 ರಂದು ಇಂದೋರ್​ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ, ಮನೆಯಲ್ಲಿದ್ದ 47 ಲಕ್ಷ ರೂ. ಹಣವೂ ನಾಪತ್ತೆಯಾಗಿದೆ ಎಂದು ಆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಉದ್ಯಮಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ 13 ರಂದು ರಾತ್ರಿಯಾದರೂ ಪತ್ನಿ ಮನೆಗೆ ಬಾರದಿದ್ದಾಗ ಆ ಉದ್ಯಮಿಗೆ ಅನುಮಾನ ಉಂಟಾಗಿತ್ತು. ಬೆಡ್​ ರೂಂನಲ್ಲಿದ್ದ ಲಾಕರ್ ತೆಗೆದು ನೋಡಿದಾಗ 47 ಲಕ್ಷ ರೂ. ಹಣ ನಾಪತ್ತೆಯಾಗಿರುವುದು ಗೊತ್ತಾಗಿತ್ತು.

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೋಟ್ಯಾಧಿಪತಿಯ ಪತ್ನಿ ಹಾಗೂ ಆಟೋ ರಿಕ್ಷಾ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಟೊರಿಕ್ಷಾ ಚಾಲಕನ ಹೆಸರು ಇಮ್ರಾನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು 32 ವರ್ಷ ವಯಸ್ಸಿನವರಾಗಿದೆ. ಚಾಲಕ ಮತ್ತು ಆರೋಪಿ ಮಹಿಳೆಯ ಪತ್ತೆಗಾಗಿ ಪೊಲೀಸರು ಮೇಲಿನ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ವಿಚಾರಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಅನುಮಾನಗೊಂಡ ವ್ಯಕ್ತಿಯ ಮನೆಗೆ ತೆರಳಿ ವಿಚಾರಿಸಿದಾಗ ಅಲ್ಲಿ 33 ಲಕ್ಷ ರೂ ಸಿಕ್ಕಿದೆ. ಕೊನೆಗೆ ಆ ವ್ಯಕ್ತಿ ಇಮ್ರಾನ್​ನ ಸ್ನೇಹಿತ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!

Murder: ಲೇಡಿ ಪೊಲೀಸ್​ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!

TV9 Web

TV9 Kannada

Read More
Loading...
Unable to load recommendations.
Follow Us