‘ನನ್ನ ಪಾರ್ಟಿಗಳಿಗೆ ರಾಗಿಣಿ ಬಂದಿದ್ದು ಕೇವಲ 2 ಬಾರಿ.. ಸಂಜನಾ ಬಂದಿದ್ದು ಹಲವು ಬಾರಿ’
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಗಳ ಬಗ್ಗೆ ವಿರೇನ್ ಖನ್ನಾನಿಂದ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. CCB ವಿಚಾರಣೆ ವೇಳೆ ಮಾಹಿತಿ ನೀಡಿರುವ ವಿರೇನ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಕೇವಲ ನಟ ನಟಿಯರು, ರಾಜಕಾರಣಿಗಳ ಪುತ್ರರು, ಉದ್ಯಮಿಗಳು ಮಾತ್ರ ಬರುತ್ತಿರಲಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಬರ್ತಿದ್ದರು ಎಂಬ ಮಾಹಿತಿ ನೀಡಿದ್ದಾನಂತೆ. ನನ್ನ ಪಾರ್ಟಿಗಳಿಗೆ ರಾಗಿಣಿ ಬಂದಿದ್ದು ಕೇವಲ 2 ಬಾರಿ ಮಾತ್ರ. ಆದರೆ, ನಟಿ ಸಂಜನಾ ಗಲ್ರಾನಿ ಹಲವು ಬಾರಿ ಪಾರ್ಟಿಗೆ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಗಳ ಬಗ್ಗೆ ವಿರೇನ್ ಖನ್ನಾನಿಂದ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. CCB ವಿಚಾರಣೆ ವೇಳೆ ಮಾಹಿತಿ ನೀಡಿರುವ ವಿರೇನ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಕೇವಲ ನಟ ನಟಿಯರು, ರಾಜಕಾರಣಿಗಳ ಪುತ್ರರು, ಉದ್ಯಮಿಗಳು ಮಾತ್ರ ಬರುತ್ತಿರಲಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಬರ್ತಿದ್ದರು ಎಂಬ ಮಾಹಿತಿ ನೀಡಿದ್ದಾನಂತೆ.
ನನ್ನ ಪಾರ್ಟಿಗಳಿಗೆ ರಾಗಿಣಿ ಬಂದಿದ್ದು ಕೇವಲ 2 ಬಾರಿ ಮಾತ್ರ. ಆದರೆ, ನಟಿ ಸಂಜನಾ ಗಲ್ರಾನಿ ಹಲವು ಬಾರಿ ಪಾರ್ಟಿಗೆ ಬಂದಿದ್ದಳು ಎಂದು CCB ವಿಚಾರಣೆ ವೇಳೆ ವಿರೇನ್ ಖನ್ನಾ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗಿದೆ. ಆದರೆ, ಉಳಿದಂತೆ ಬೇರೆಯವರ ಹೆಸರು ಹೇಳದ ವಿರೇನ್ ಖನ್ನಾ ಲೋಕಲ್ ಪಾರ್ಟಿಗೆ ಯಾರು ಬರುತ್ತಿದ್ದರೆಂಬ ಪ್ರಶ್ನೆಗೆ ಉತ್ತರ ನೀಡದೆ ಸೈಲೆಂಟ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಜೊತೆಗೆ, ರಾಜಕಾರಣಿಗಳ ಬಗ್ಗೆ ಸಹ ಆರೋಪಿ ವಿರೇನ್ ಖನ್ನಾ ಬಾಯ್ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.
ಸದ್ಯ ವಿರೇನ್‌ನ ಒಂದು ಮೊಬೈಲ್‌ನ ಮಾಹಿತಿ ರಿಟ್ರೀವ್ ಆಗಿಲ್ಲ. ರಿಟ್ರೀವ್ ಆದ ಬಳಿಕ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ. ಜೊತೆಗೆ, ನಾಳೆ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆತನನ್ನು ಸಿಸಿಬಿ ಅಧಿಕಾರಿಗಳು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.