Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಲ್ಲಾಪುರ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಯಕ್ಷಗಾನ ಕಲಾವಿದ ಸಾವು

ಎರಡು ಕಾರುಗಳ ನಡುವೆ ಅಪಘಾತ ಉಂಟಾಗಿದ್ದು, ಯಕ್ಷಗಾನ ಕಲಾವಿದ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮದ ಬಳಿ ನಡೆದಿದೆ.

ಯಲ್ಲಾಪುರ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಯಕ್ಷಗಾನ ಕಲಾವಿದ ಸಾವು
ಯಕ್ಷಗಾನ ಕಲಾವಿದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 14, 2022 | 4:10 PM

ಕಾರವಾರ: ಎರಡು ಕಾರುಗಳ ನಡುವೆ ಅಪಘಾತ (accident) ಉಂಟಾಗಿದ್ದು, ಯಕ್ಷಗಾನ ಕಲಾವಿದ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮದ ಬಳಿ ನಡೆದಿದೆ. ತಿಮ್ಮಪ್ಪ ಭಾಗ್ವತ್ ಬಾಳೆಹದ್ದ (65) ಸಾವನ್ನಪ್ಪಿದ ಕಲಾವಿದ. ಯಕ್ಷಗಾನದ ಪಟ್ಟು ಮತ್ತು ರಾಗಗಳಲ್ಲಿ ವಿಶೇಷ ಪರಿಣಿತ ಪಡೆದಿದ್ದರು. ಸಾಕಷ್ಟು ಕಲಾ ಪ್ರದರ್ಶನ ನೀಡಿದ್ದರು. ಅಪಘಾತದಲ್ಲಿ ಕಲಾವಿದ ತೀವ್ರ ಗಾಯಗೊಂಡಿದ್ದರು. ಹತ್ತಿರದ ಶಿರಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಲಾವಿದ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸೈಟ್​ ಖರೀದಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದವನ ಬಂಧನ

ಬೆಂಗಳೂರು: ಸೈಟ್​ ಖರೀದಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗ ಸಿಇಎನ್ ಠಾಣೆ​ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಂಧ್ರ ಮೂಲದ ವಿನೋದ್​ ಕುಮಾರ್​ ರೆಡ್ಡಿ ಬಂಧಿತ ಆರೋಪಿ. ಬಂಧಿತನ ಬಳಿ ಇದ್ದ 1.40 ಲಕ್ಷ ನಗದು, ಒಂದು ಬೊಬೈಲ್ ಜಪ್ತಿ ಮಾಡಲಾಗಿದೆ. 10ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ವಿನೋದ್ ವಂಚಿಸಿದ್ದ. ಬೆಂಗಳೂರು, ಹುಬ್ಬಳ್ಳಿ, ಗೋವಾ, ಹೈದರಾಬಾದ್​​ನಲ್ಲೂ ವಂಚನೆ ಆರೋಪ ಕೇಳಿಬಂದಿದೆ. OLX, ವೆಬ್​ಸೈಟ್​ನಲ್ಲಿ ಸೈಟ್​ ಮಾರಾಟ ಮಾಡುವವರಿಗೆ ವಂಚಿಸಿದ್ದಾನೆ. ಈ ಬಗ್ಗೆ ಈಶಾನ್ಯ ವಿಭಾಗ ಸಿಇಎನ್​ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ: Matrimonial App fraud: ಮ್ಯಾಟ್ರಿಮೋನಿ ಆ್ಯಪ್ ವಂಚನೆ: ಕೇರಳ ಕುಟ್ಟಿಗಳ ಮಾತಿಗೆ ಮರುಳಾದ ಶಿಕ್ಷಕ, ಹಣದ ಜೊತೆಗೆ ಕೆಲಸವೂ ಕಳೆದುಕೊಂಡ

ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಆರೋಪ

ಬೆಂಗಳೂರು: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಆರೋಪ ಮಾಡಿರವಂತಹ ಘಟನೆ ನಗರದ ಉಲ್ಲಾಳದ ಎಂವಿ ಲೇಔಟ್ ಬಳಿ ನಡೆದಿದೆ. ಮಹೇಶ್ವರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ವೆಯಾಗಿ ಮೂರು ತಿಂಗಳಿಗೆ ಪತ್ನಿಯಿಂದ ಕಿರುಕುಳ ಆರೋಪಿಸಲಾಗಿದೆ. ವಿನಾಕಾರಣ ಪತಿ ಜೊತೆ ಪತ್ನಿ ಕವನ ಗಲಾಟೆ ಮಾಡುತ್ತಿದ್ದರು. ಹಿರಿಯರಿಗೆ ಗೌರವ ಕೊಡದೆ ಅವಮಾನಿಸುತ್ತಿದ್ದಳು. ಕವನ ಕಿರುಕುಳಕ್ಕೆ ರೋಸಿ ಮಹೇಶ್ವರ ಆತ್ಮಹತ್ಯೆ ಆರೋಪ ಮಾಡಿದ್ದಾರೆ. ಕಳೆದ 5 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 21-08 -2022 ರಂದು ದಂಪತಿ ಮದ್ವೆಯಾಗಿದ್ದರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಿಟ್ ಅಂಡ್ ರನ್, 3 ಸಾವು ಪ್ರಕರಣಕ್ಕೆ ಟ್ವಿಸ್ಟ್

ಆನೇಕಲ್: ಹಿಟ್ ಅಂಡ್ ರನ್ ವೇಳೆ ನಡೆದ ಅಪಾಘಾತದಲ್ಲಿ ಮೂವರು ಯುವಕರ ಸಾವನ್ನಪ್ಪಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಯುವಕರಿಗೆ ಗುದ್ದಿದ್ದು ಒಂದು ಲಾರಿ ಅಲ್ಲ. ಎರಡು ಲಾರಿ ಗುದ್ದಿರುವ ಶಂಕೆ ವ್ಯಕ್ತವಾಗಿದೆ. ವೇಗದ ಜಿದ್ದಿಗೆ ಬಿದ್ದ ಎರಡು ಲಾರಿಗಳು ಓವರ್ ಟೇಕ್ ಮಾಡಲು ಹೋಗಿ ಮೂವರು ಯುವಕರಿಗೆ ಗುದ್ದಿರುವ ಸಾಧ್ಯತೆ ಇದೆ. ಏಕಪಥ ರಸ್ತೆಯಲ್ಲಿ ವೇಗವಾಗಿ ಲಾರಿ ಚಾಲಾಯಿಸಿಕೊಂಡು ಓವರ್​ಟೇಕ್ ಮಾಡಲು ಹೋದಾಗ ಎಡ ಬದಿಗೆ ಬಂದ ಲಾರಿಯಿಂದ ತಪ್ಪಿಸಿಕೊಳ್ಳಲು ಬಲ ಬದಿಗೆ ಯುವಕರು ಸರಿದಿದಿದ್ದಾರೆ. ಈ ವೇಳೆ ಬಲ ಬದಿಯಿಂದ ಬಂದ ಲಾರಿಗೆ ಸಿಕ್ಕಿ ಯುವಕರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳದಲ್ಲಿ ಸಿಕ್ಕ ಲಾರಿಯ ಅವಶೇಷಗಳ ಪರಿಶೀಲನೆ ನಡೆಸಿದ ಪೊಲೀಸರು ಲಾರಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಲಾಡ್ಜ್​ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ರೂಮ್​ಗೆ ಬಂದು ಹೋಗಿದ್ದ ಮಹಿಳೆ ಚಲನವಲನ ಸಿಸಿಟಿವಿಯಲ್ಲಿ ಸೆರೆ

ಮೃತರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ಸೋಜಿಗವೆಂಬುವಂತೆ ಮೃತರೆಲ್ಲರೂ ತಂದೆ ತಾಯಿಯ ಒಂದೇ ಸಂತಾನದವರಾಗಿದ್ದಾರೆ. 13 ಸಾವಿರ ವೇತನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವಕರು, ಘಟನೆಯ ದಿನ ರಾತ್ರಿ 8 ಗಂಟೆಗೆ ಚಿಕನ್ ತರಲು ಮನೆಯಿಂದ ಹೊರಟಿದ್ದರು. ಉಳಿದ ಸ್ನೇಹಿತರಿಗೆ ಅನ್ನ ರೆಡಿ ಮಾಡಿ ಇಡಿ ಎಂದು ಹೇಳಿ ಹೋಗಿದ್ದರು. ಹೀಗೆ ಹೋದವರು ರಾತ್ರಿ 11 ಗಂಟೆಯಾದರೂ ವಾಪಸ್ ಬರದ ಸ್ನೇಹಿತರಿಗೆ ಪೊಲೀಸರು ಅಪಘಾತದ ಸುದ್ದಿ ತಿಳಿಸಿದಾಗಲೇ ತಿಳಿದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:59 pm, Wed, 14 December 22

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ