AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಆಂಟಿಯ ಕೊಂದ ಯುವಕ ಅರೆಸ್ಟ್, ಮೊದಲು ಅನೈತಿಕ ಸಂಬಂಧ.. ಬಳಿಕ ಅವಾಯ್ಡ್ ಮಾಡಿದ್ದಕ್ಕೆ ಹತ್ಯೆಯಂತೆ

ಕಳೆದ ಎರಡು ತಿಂಗಳಿನಿಂದ ದೇವಣ್ಙನನ್ನ ಅವಾಯ್ಡ್ ಮಾಡಿದ್ಲು.. ಇದರಿಂದ ದೇವಣ್ಣನ ಪಿತ್ತ ನೆತ್ತಿಗೇರಿತ್ತು.. ಹದಿಹರೆಯದರಲ್ಲೇ ಮೋಹದ ಜಾಲಕ್ಕೆ ಸಿಲುಕಿದ್ದ ಆಸಾಮಿಗೆ ವಿಜಯಲಕ್ಷ್ಮೀ ಬಿಟ್ಟಿರಲಾಗಲಿಲ್ಲ..ಈ ಮಧ್ಯೆ ಇದೇ ಮಾರ್ಚ್‌10 ರಂದು ಆಕೆ ಮುದಗಲ್ ಬಳಿಯ ದೇವಸ್ಥಾನಕ್ಕೆ ಹೋಗಿದ್ಲು..ಆ ಮಾಹಿತಿ ತಿಳಿದು ಆತನು‌ ಆಕೆಯ ಜೊತೆ ಹೋಗಿದ್ದ.. ನಂತರ ವಾಪಸ್ ಬರೋವಾಗ ಆಕೆಯನ್ನ ಪುಸಲಾಯಿಸಿ ಲಿಂಗಸುಗೂರು ಪಟ್ಟಣದ ಪೊದೆಯೊಂದರ ಒಳಗೆ ಕರೆದೊಯ್ದಿದ್ದ.. ಅಲ್ಲಿ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದ..

ರಾಯಚೂರಿನಲ್ಲಿ ಆಂಟಿಯ ಕೊಂದ ಯುವಕ ಅರೆಸ್ಟ್, ಮೊದಲು ಅನೈತಿಕ ಸಂಬಂಧ.. ಬಳಿಕ ಅವಾಯ್ಡ್ ಮಾಡಿದ್ದಕ್ಕೆ ಹತ್ಯೆಯಂತೆ
ರಾಯಚೂರಿನಲ್ಲಿ ಆಂಟಿಯ ಕೊಂದಿದ್ದ ಯುವಕ ಅರೆಸ್ಟ್, ಮೊದಲು ಅನೈತಿಕ ಸಂಬಂಧ.. ಬಳಿಕ ಅವಾಯ್ಡ್ ಮಾಡಿದ್ದಕ್ಕೆ ಹತ್ಯೆ
Follow us
ಭೀಮೇಶ್​​ ಪೂಜಾರ್
| Updated By: ಸಾಧು ಶ್ರೀನಾಥ್​

Updated on:Mar 16, 2024 | 10:01 AM

ಆತ ಅತ್ತೆ ಅತ್ತೆ ಎನ್ನುತ್ತಲೇ ಅತ್ತೆಯಾಗಬೇಕಿದ್ದವಳ ಜೊತೆ ಮಂಚ ಏರಿದ್ದ.. ಚಿಗುರು ಮೀಸೆ ಹುರುಪಲ್ಲಿ ಕಾಮಜಾಲಕ್ಕೆ ಸಿಲುಕಿದ್ದ ಆತ ಜೊತೆಗಿದ್ದವಳ ಕೊಂದು ಹಾಕಿದ್ದ.. ಮಹಿಳೆಯ ಹತ್ಯೆಗೈದು ಊರು ಬಿಟ್ಟಿದ್ದ ಕಿರಾತಕನ್ನ ಸ್ಥಳೀಯ ಪೊಲೀಸರು ಪಡೆ ಹೆಡೆ ಮುರಿ ಕಟ್ಟಿದೆ.

ಹೌದು.. ಅದು ಮಾರ್ಚ್ 10ನೇ ತಾರೀಖು.. ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಎನ್ ಜಿಎಲ್ ಲಾಡ್ಜ್ ಬಳಿಯ ಪೊದೆಯಲ್ಲಿ ಮಹಿಳೆಯೊಬ್ಬರನ್ನ ಬರ್ಬರವಾಗಿ ಕೊಚ್ಚಿ ಕೊಲ್ಲಲಾಗಿತ್ತು.. ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಪರಿಶೀಲನೆ‌ ನಡೆಸಿದಾಗ ಅಲ್ಲೊಂದು ಆಧಾರ್ ಕಾರ್ಡ್ ಸಿಕ್ಕಿತ್ತು.. ಅದರಲ್ಲಿ ವಿಜಯಲಕ್ಷ್ಮೀ ಅನ್ನೋ ಹೆಸರಿನ ಮಹಿಳೆ, ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದಾಕೆ ಅನ್ನೋದು ಗೊತ್ತಾಗಿತ್ತು.. ನಂತರ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಆಕೆ ತವರು ಮನೆ ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಗ್ರಾಮ ಅಂತ ಗೊತ್ತಾಗಿದೆ.. ನಂತರ ಪೊಲೀಸರು ತನಿಖೆ ಶುರುಮಾಡಿದ್ರು.. ಆಗ ಆಕೆ ಹಿನ್ನೆಲೆ ಪತ್ತೆ ಹಚ್ಚಿದಾಗ 22 ವರ್ಷದ ಚಿರ ಯುವಕನ ಹೆಸರು ತಳುಕು ಹಾಕಿಕೊಂಡಿತ್ತು.

ಇತ್ತ ಲಿಂಗಸುಗೂರು ಪೊಲೀಸರು ತಾಂತ್ರಿಕ ಮಾಹಿತಿ ಪಡೆದು ಆರೋಪಿ ದೇವಣ್ಣನನ್ನ ಬಂಧಿಸಿದ್ದಾರೆ.. ತನಿಖೆ ವೇಳೆ ಬೆಚ್ಚಿ ಬೀಳಿಸೊ ವಿಚಾರ ಬೆಳಕಿಗೆ ಬಂದಿದೆ.. ಮೃತ ವಿಜಯಲಕ್ಷ್ಮೀಯನ್ನ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಸೋಮನಾಥ ಅನ್ನೋರ ಜೊತೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು.. ಈ ದಂಪತಿಗೆ ಓಬ್ಬ ಮಗ ಹುಟ್ಟಿದ್ದ..

ಈ ಮಧ್ಯೆ ಕಳೆದ ಎರಡು ವರ್ಷಗಳ ಹಿಂದೆ ಪತಿ ಸೋಮನಾಥ ತೀರಿಹೋಗಿದ್ರು.. ಆಗ ಗಂಡನ ಮನೆ ಬಿಟ್ಟು ಮಗನೊಂದಿಗೆ ವಿಜಯಲಕ್ಷ್ಮೀ ತವರು ಸೇರಿದ್ರು.. ಇದಾದ ಬಳಿಕವೇ ಆಕೆ ಜೀವನೇ ಬದಲಾಗಿ ಹೋಗಿತ್ತು.. ಕೂಲಿ ಕೆಲಸ ಮಾಡ್ತಿದ್ದ ವಿಜಯಲಕ್ಷ್ಮೀಗೆ ಗಾರೆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ದೇವಣ್ಣ ಅನ್ನೋನ ಪರಿಚಯವಾಗಿತ್ತು.

Also Read: ಮಗಳ ಪ್ರೇಮ್ ಕಹಾನಿಗೆ ರೈಲಿಗೆ ತಲೆ ಕೊಟ್ಟು ತಂದೆ ತಾಯಿ ಖಲ್ಲಾಸ್, ಇಂಜಿನಿಯರಿಂಗ್ ಮಗಳು ಸಾವು ಬದುಕಿನ ಮಧ್ಯೆ ಹೋರಾಟ

ದೇವಣ್ಣ ವಿಜಯಲಕ್ಷ್ಮೀ ಸಿಕ್ಕಾಗಲೆಲ್ಲಾ ಅತ್ತೆ ಅತ್ತೆ ಅಂತ ಕರೆಯುತ್ತಿದ್ದ.. ಈ 22 ವರ್ಷದ ದೇವಪ್ಪ ಮಾತ್ರ ಸದ್ದಿಲ್ಲದೇ ವಿಜಯಲಕ್ಷ್ಮೀಗೆ ಹತ್ತಿರವಾಗಿದ್ದ.. ಪರಿಚಯದಿಂದ ಆ ಸಲುಗೆ ಅನೈತಿಕ ಸಂಬಂಧಕ್ಕೆ ನಾಂದಿ ಹಾಡಿತ್ತು.. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರೂ ಸೇರುತ್ತಿದ್ದರು.. ಪಟ್ಟಣಕ್ಕೆ ಹೋದಾಗಲೂ ಸೇರುತ್ತಿದ್ರು.

ಓಮ್ಮೊಮ್ಮೆ ವಿಜಯಲಕ್ಷ್ಮೀ ಕೈಗೆ ಸಿಗದೇ ಇದ್ದಾಗ ಮಾಳಿಗೆ ಏರಿ ಆಕೆಯನ್ನ ಭೇಟಿಯಾಗೋಕೆ ದೇವಣ್ಣ ಮುಂದಾಗ್ತಿದ್ದ..ಈ ವಿಚಾರ ವಿಜಯಲಕ್ಷ್ಮೀ ಅಣ್ಣ ಚೌಡಪ್ಪನಿಗೆ ಗೊತ್ತಾಗಿ ದೇವಣ್ಣಗೆ ಹಲವು ಬಾರಿ ಬೈದು ವಾರ್ನ್ ಮಾಡಿದ್ದ.. ಆದ್ರೆ ಆತ ಮಾತ್ರ ಬುದ್ದಿ ಕಲಿತಿರ್ಲಿಲ್ಲ.. ಕೊಲೆನೆ ಚೌಡಪ್ಪ ತಂಗಿ ವಿಜಯಲಕ್ಷ್ಮೀಗೆ ಹೊಡೆದು ಬುದ್ದಿ ಹೇಳಿದ್ದ.. ನಂತ್ರ ಆಕೆ‌ ದೇವಣ್ಣನ ಸಂಪರ್ಕ ಬಿಟ್ಟಿದ್ಲು.

Also Read: ಬಂಗಾರಪೇಟೆಯಲ್ಲಿ ಮಹಾಶಿವರಾತ್ರಿಗೆ ನಾನ್​ ವೆಜ್​ ಪೂಜೆ! ಮೇಕೆ, ಕೋಳಿಯ ಕತ್ತನ್ನು ಕಚ್ಚಿ ಬಿಸಿ ರಕ್ತ ಸೇವಿಸುವ ತಮಿಳು ಸಂಸ್ಕೃತಿ

ಆದರೆ ಕಳೆದ ಎರಡು ತಿಂಗಳಿನಿಂದ ದೇವಣ್ಙನನ್ನ ಅವಾಯ್ಡ್ ಮಾಡಿದ್ಲು.. ಇದರಿಂದ ದೇವಣ್ಣನ ಪಿತ್ತ ನೆತ್ತಿಗೇರಿತ್ತು.. ಹದಿಹರೆಯದರಲ್ಲೇ ಮೋಹದ ಜಾಲಕ್ಕೆ ಸಿಲುಕಿದ್ದ ಆಸಾಮಿಗೆ ವಿಜಯಲಕ್ಷ್ಮೀ ಬಿಟ್ಟಿರಲಾಗಲಿಲ್ಲ..ಈ ಮಧ್ಯೆ ಇದೇ ಮಾರ್ಚ್‌10 ರಂದು ಆಕೆ ಮುದಗಲ್ ಬಳಿಯ ದೇವಸ್ಥಾನಕ್ಕೆ ಹೋಗಿದ್ಲು..ಆ ಮಾಹಿತಿ ತಿಳಿದು ಆತನು‌ ಆಕೆಯ ಜೊತೆ ಹೋಗಿದ್ದ.. ನಂತರ ವಾಪಸ್ ಬರೋವಾಗ ಆಕೆಯನ್ನ ಪುಸಲಾಯಿಸಿ ಲಿಂಗಸುಗೂರು ಪಟ್ಟಣದ ಪೊದೆಯೊಂದರ ಒಳಗೆ ಕರೆದೊಯ್ದಿದ್ದ.. ಅಲ್ಲಿ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದ.. ನಂತರ ನನ್ನನ್ನ ಯಾಕೆ ಅವಾಯ್ಡ್ ಮಾಡ್ತಿದಿಯಾ ಅಂತ ಕ್ಯಾತೆ ತೆಗೆದಿದ್ದ.. ನಂತರ ಆಕೆಯನ್ನ ಕಲ್ಲಿನಿಂದ ತಲೆಗೆ ಹೊಡೆದು, ಆಕೆಯ‌ ಸೀರೆಯಿಂದಲೇ ಉಸಿರುಗಟ್ಟಿಸಿ ಕೊಲೆಗೈದಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿ ದೇವಪ್ಪನ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Sat, 16 March 24

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು