ಶಿವಮೊಗ್ಗ: ಯುವತಿಯನ್ನು ಫಾಲೋ ಮಾಡಿದ ಯುವಕ: ಬುದ್ಧಿ ಹೇಳಿದ್ದಕ್ಕೆ ಗ್ರಾಮಕ್ಕೆ ನುಗ್ಗಿ ಹಲ್ಲೆ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಹಿಂದು ಹುಡುಗಿಯನ್ನು ಹಿಂಬಾಲಿಸಿದ ಅನ್ಯಕೋಮಿನ ಯುವಕನಿಗೆ ಬೈದು ಬುದ್ದಿ ಹೇಳಿದ ಸ್ಥಳೀಯರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಬೈದು ಬುದ್ದಿ ಹೇಳಿದ್ದಕ್ಕೆ ಆತ ಮಾತ್ರ ಗುಂಪು ಕಟ್ಟಿಕೊಂಡು ಬಂದು ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ.
ಶಿವಮೊಗ್ಗ, ಮಾರ್ಚ್ 16: ಹಿಂದು ಹುಡುಗಿ (girl) ಯನ್ನು ಹಿಂಬಾಲಿಸಿದ ಅನ್ಯಕೋಮಿನ ಯುವಕನಿಗೆ ಬೈದು ಬುದ್ದಿ ಹೇಳಿದ ಸ್ಥಳೀಯರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಘಟನೆ ನಡೆದಿದೆ. 9ನೇ ತರಗತಿಯ ಯುವತಿಯನ್ನು ಸೊರಬ ತಾಲೂಕಿನ ಉಳವಿ ಗ್ರಾಮದ ಅನ್ಯ ಕೋಮಿನ ಯುವಕ ಹಿಂಬಾಲಿಸಿದ್ದಾನೆ. ಇದನ್ನು ತಿಳಿದ ಸ್ಥಳೀಯರು ಆಗತನಿಗೆ ಬೈದು ಬುದ್ದಿ ಹೇಳಿದ್ದಾರೆ. ಆದರೆ ಆತ ಮಾತ್ರ ಗುಂಪು ಕಟ್ಟಿಕೊಂಡು ಬಂದು ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ.
ತಡರಾತ್ರಿವರೆಗೂ ಬೀಚ್ನಲ್ಲಿದ್ದ ಯುವಕ ಯುವತಿಯರು: ಬೈದು ಕಳುಹಿಸಿದ ಸ್ಥಳೀಯರು
ಉಡುಪಿ: ನಗರದ ಪಡುಕರೆ ಕಡಲ ತೀರದಲ್ಲಿ ಪ್ರವಾಸಿಗರನ್ನು ಸ್ಥಳೀಯರು ಓಡಿಸಿದ್ದಾರೆ. ವಾರದ ಹಿಂದೆ ಹೋಮ್ ಸ್ಟೇ ವಿರುದ್ಧ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸಮುದ್ರ ವಿಹಾರಕ್ಕೆ ಬಂದ ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ತಡರಾತ್ರಿವರೆಗೂ ಬೀಚ್ನಲ್ಲಿದ್ದ ಯುವಕ ಯುವತಿಯರನ್ನು ಸ್ಥಳೀಯರು ವಿಚಾರಣೆ ಮಾಡಿ ಬೈದು ಕಳುಹಿಸಿದ್ದರು.
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಕೇರಳದ ಇನ್ನಿಬ್ಬರು ಪೊಲೀಸ್ ವಶಕ್ಕೆ
ಪಡುಕೆರೆ ಬೀಚ್ನಲ್ಲಿ ತಡರಾತ್ರಿ ವೇಳೆ ಪಾರ್ಟಿಯಲ್ಲಿ ನಿರತರಾಗಿದ್ದ 5 ಮಂದಿ ಯುವಕ ಯುವತಿಯರು ಸ್ಥಳೀಯರ ಕಣ್ಣಿಗೆ ಬಿದ್ದಿದ್ದರು. ಇದನ್ನು ಗಮನಿಸಿದ ಪಡುಕೆರೆ ಗ್ರಾಮಸ್ಥರು ಬೀಚ್ ಬಿಟ್ಟು ತೆರಳುವಂತೆ ಹೇಳಿದ್ದರು. ಯುವಕ ಯುವತಿಯರು ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದರು. ಇತ್ತೀಚೆಗೆ ಈ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರತೊಡಗಿದ್ದವು.
ಇದನ್ನೂ ಓದಿ: ಮಂಗಳೂರಿನಲ್ಲೊಂದು ಅಮಾನವೀಯ ಘಟನೆ: ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್ನಿಂದ ಹೊಡೆದ ಸೊಸೆ, ಬಂಧನ
ವಾರದ ಹಿಂದೆಯಷ್ಟೇ ಹೋಮ್ ಸ್ಟೇ ವಿರುದ್ಧ ಸಭೆ ನಡೆಸಿ, ಶಾಸಕರಿಗೆ ಮತ್ತು ಪೊಲೀಸರಿಗೆ ಸ್ಥಳೀಯರು ಮನವಿ ಸಲ್ಲಿಸಿ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ದರು. ಬೀಚ್ನಲ್ಲಿ ಸಂಜೆ ನಂತ್ರ ವಿಹಾರ ಓಡಾಟ, ಬೀಚ್ ರಸ್ತೆಯಲ್ಲಿ ಸಂಚಾರ ಮಾಡಬಾರದು ಬೋರ್ಡ್ ಅಳವಡಿಸಲಾಗಿದೆ. ಗ್ರಾಮಸ್ಥರು ಬೀಚ್ಗೆ ಬರುವ ಪ್ರವಾಸಿಗರು ವಿಚಾರಣೆ ನಡೆಸಿದ್ದು, ವಾಪಾಸ್ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ. ಪ್ರವಾಸಿಗಿಂದ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ , ಸಭ್ಯರು ಓಡಾಟ ನಡೆಸಲು ಕಷ್ಟವಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:51 pm, Sat, 16 March 24