2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಶಾಲೆಗಳಲ್ಲಿನ ಕಲಿಕಾ ಮಟ್ಟ ಕುಸಿತ: ಎನ್ಎಎಸ್ ಸಮೀಕ್ಷೆ

NAS 2021 8ನೇ ಕ್ಲಾಸು ವಿದ್ಯಾರ್ಥಿಗಳಿಗೆ ಭಾಷೆ,ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ತಿಳುವಳಿಕೆಯನ್ನು ಪರೀಕ್ಷಿಸಲಾಯಿತು. ಪಂಜಾಬ್, ರಾಜಸ್ಥಾನ, ಚಂಡೀಗಢ ಮತ್ತು ಹರಿಯಾಣ 2017 ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಿದೆ.

2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಶಾಲೆಗಳಲ್ಲಿನ ಕಲಿಕಾ ಮಟ್ಟ ಕುಸಿತ: ಎನ್ಎಎಸ್ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

May 27, 2022 | 5:38 PM

ರಾಷ್ಟ್ರೀಯ ಸಾಧನೆ ಸಮೀಕ್ಷೆ 2021 ರ (NAS 2021)  ಪ್ರಕಾರ ಪಂಜಾಬ್ (Punjab) ಮತ್ತು ರಾಜಸ್ಥಾನವನ್ನು(Rajasthan) ಹೊರತುಪಡಿಸಿ, ದೇಶಾದ್ಯಂತದ ಶಾಲೆಗಳಲ್ಲಿನ  ಕಲಿಕಾ ಮಟ್ಟವು 2017 ರಲ್ಲಿ ದಾಖಲಾದ ಮಟ್ಟಕ್ಕಿಂತ ಕುಸಿದಿದೆ. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ (Covid-19) ಉಂಟಾದ ಅಡಚಣೆಯಿಂದಾಗಿ ಕಲಿಕೆಗೆ ತೊಂದರೆಯಾಗಿದೆ. 720 ಜಿಲ್ಲೆಗಳಲ್ಲಿ 1.18 ಲಕ್ಷ ಶಾಲೆಗಳಲ್ಲಿ ನಡೆಸಿದ ಪರೀಕ್ಷೆಗಳ ಆಧಾರದ ಮೇಲೆ ಸಮೀಕ್ಷೆ ಬಹಿರಂಗ ಪಡಿಸಿರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

3ನೇ ಕ್ಲಾಸು: ಗಣಿತ ಮತ್ತು ಭಾಷಾ ಕೌಶಲ್ಯಗಳು ಮತ್ತು ಪರಿಸರ ವಿಜ್ಞಾನದ ಪರಿಕಲ್ಪನಾ ತಿಳುವಳಿಕೆಯನ್ನು ಪರೀಕ್ಷಿಸಲಾಯಿತು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವಿಷಯಗಳಲ್ಲಿ ಸಾಧಿಸಿದ ಅಂಕಗಳ ಒಟ್ಟು ಮೊತ್ತವು ಶೇಕಡಾವಾರು ಪ್ರಮಾಣದಲ್ಲಿ ನೀಡಲಾಗಿದೆ. ಪಂಜಾಬ್ ಮತ್ತು ರಾಜಸ್ಥಾನವನ್ನು ಹೊರತುಪಡಿಸಿ ಇದು 2017 ರ ಎನ್ಎಎಸ್ ಸುತ್ತಿನಲ್ಲಿ ದಾಖಲಾದ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. 2017 ಕ್ಕೆ ಹೋಲಿಸಿದರೆ ಕೇರಳದಂತಹ ಕೆಲವು ರಾಜ್ಯಗಳು ತಮ್ಮ ಗಣಿತದ ಸ್ಕೋರ್ ಅನ್ನು ಉತ್ತಮಗೊಳಿಸಿವೆ. ಆದರೆ ಒಟ್ಟಾರೆ ಸ್ಕೋರ್ ಕಡಿಮೆಯಾಗಿದೆ. ರಾಜಸ್ಥಾನ, ಪಂಜಾಬ್ ಮತ್ತು ಕೇರಳ ಅತ್ಯುತ್ತಮ ಪ್ರದರ್ಶನ ನೀಡಿದ್ದು ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ಕೊನೆಯ ಮೂರು ಸ್ಥಾನಗಳಲ್ಲಿದೆ.

ಜಿಲ್ಲಾ ಮಟ್ಟದ ಕಾರ್ಯತಂತ್ರ III, V, VIII ಮತ್ತು X ತರಗತಿಗಳ 34 ಲಕ್ಷ ವಿದ್ಯಾರ್ಥಿಗಳ ನಡುವೆ ನವೆಂಬರ್‌ನಲ್ಲಿ ಸಮೀಕ್ಷೆಯನ್ನು ನಡೆಸಿದ ಶಿಕ್ಷಣ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿರುವುದರಿಂದ, ಕಾರ್ಯಕ್ಷಮತೆಯ ಆಧಾರದ ಮೇಲೆ ಜಿಲ್ಲಾ ಮಟ್ಟದ ಕಾರ್ಯತಂತ್ರಗಳನ್ನು ಸಿದ್ಧಪಡಿಸಲು ಈ ಸಂಶೋಧನೆಗಳು ಮಹತ್ವದ್ದಾಗಿದೆ.

5ನೇ ಕ್ಲಾಸು: ಇಲ್ಲಿಯೂ ಗಣಿತ ಮತ್ತು ಭಾಷಾ ಕೌಶಲ್ಯಗಳು ಮತ್ತು ಪರಿಸರ ವಿಜ್ಞಾನದ ಪರಿಕಲ್ಪನಾ ತಿಳುವಳಿಕೆಯನ್ನು ಪರೀಕ್ಷಿಸಲಾಯಿತು. ಪಂಜಾಬ್ ಮತ್ತು ರಾಜಸ್ಥಾನ 2017 ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಂಕಗಳಿದ್ದರೂ ಈ ರಾಜ್ಯಗಳ ಫಲಿತಾಂಶಗಳು ಹೆಚ್ಚು ಭಿನ್ನವಾಗಿರಲಿಲ್ಲ.  ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತಮ ಪ್ರದರ್ಶನ ನೀಡಿದವು. ಆದರೆ ಇದು ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ಶೈಕ್ಷಣಿಕ ಸಾಧನೆ 2017 ರ ರಾಷ್ಟ್ರೀಯ ಸ್ಕೋರ್‌ಗಿಂತ ಕಡಿಮೆ. ಈ ವಿಭಾಗದಲ್ಲಿ ತೆಲಂಗಾಣ, ಮೇಘಾಲಯ ಮತ್ತು ಛತ್ತೀಸ್‌ಗಢ ಕಳಪೆ ಪ್ರದರ್ಶನ ನೀಡಿದೆ.

8ನೇ ಕ್ಲಾಸು: ಭಾಷೆ,ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ತಿಳುವಳಿಕೆಯನ್ನು ಪರೀಕ್ಷಿಸಲಾಯಿತು. ಪಂಜಾಬ್, ರಾಜಸ್ಥಾನ, ಚಂಡೀಗಢ ಮತ್ತು ಹರಿಯಾಣ 2017 ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಿತು. ಮೇಘಾಲಯ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಕೆಳಗಿನ ಹಂತದಲ್ಲಿದೆ. ವಿವಿಧ ಕ್ಲಾಸುಗಳವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ವಿವಿಧ ಸೂಚಕಗಳ ಮೇಲೆ ಮೌಲ್ಯಮಾಪನ ಮಾಡಲಿದೆ. ಉದಾಹರಣೆಗೆ 3ನೇ ತರಗತಿಯ ವಿದ್ಯಾರ್ಥಿಗಳಿಗೆ ಗ್ರಹಿಕೆಯೊಂದಿಗೆ ಸಣ್ಣ ಪಠ್ಯಗಳನ್ನು ಓದಲು ಮತ್ತು ಮೂರು-ಅಂಕಿಯ ಸಂಖ್ಯೆಗಳ ಸಂಕಲನ ಮತ್ತು ವ್ಯವಕಲನವನ್ನು ಬಳಸಿಕೊಂಡು ಸರಳ ದೈನಂದಿನ ಜೀವನದ ಸಂಖ್ಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕೇಳಲಾಯಿತು. ಗಣಿತ ಪ್ರಶ್ನೆಗಳನ್ನು ನೀಡಿ ಸ್ಕ್ವೇರ್,ಕ್ಯೂಬ್ಸ್, ಸ್ಕ್ವೇರ್ ರೂಟ್ಸ್ ಮತ್ತು ಕ್ಯೂಬ್ ರೂಟ್ಸ್ ಕಂಡು ಹಿಡಿಯುವಂತೆ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೇಳಲಾಯಿತು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ಅವರ ಜ್ಞಾನ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಪ್ರಚಾರವನ್ನು ಸಹ ಪರೀಕ್ಷಿಸಲಾಯಿತು.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada