NAS 2021 ಗಣಿತದಿಂದ ಸಮಾಜ ವಿಜ್ಞಾನದವರೆಗಿನ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಶೇ 9ರಷ್ಟು ಕುಸಿತ

3ನೇ ತರಗತಿಯ ಭಾಷಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ರಾಷ್ಟ್ರೀಯ ಸರಾಸರಿ ಅಂಕಗಳು 2021 ರಲ್ಲಿ 62 ಆಗಿದ್ದು 2017 ರಲ್ಲಿ ಇದು 68 ಆಗಿದೆ. ಅದೇ ವೇಳೆ ಗಣಿತದಲ್ಲಿ ಇದು ಕ್ರಮವಾಗಿ 57 ಮತ್ತು 64 ಆಗಿದೆ.

NAS 2021 ಗಣಿತದಿಂದ ಸಮಾಜ ವಿಜ್ಞಾನದವರೆಗಿನ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಶೇ 9ರಷ್ಟು ಕುಸಿತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 27, 2022 | 6:33 PM

ದೆಹಲಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಾಧನೆ ಸಮೀಕ್ಷೆ 2021 (NAS 2021) ವರದಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯು 3, 5, 8 ಮತ್ತು 10ನೇ ತರಗತಿಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯಗಳ ಸಮಗ್ರ ಮೌಲ್ಯಮಾಪನ  ನಡೆಸುವ ಮೂಲಕ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಯನ್ನು ನಿರ್ಣಯಿಸುತ್ತದೆ. ಇದು ಶಾಲಾ ಶಿಕ್ಷಣ (School Education) ವ್ಯವಸ್ಥೆಯ ಒಟ್ಟಾರೆ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ 720 ಜಿಲ್ಲೆಗಳ 1.18 ಲಕ್ಷ ಶಾಲೆಗಳ ಸುಮಾರು 34 ಲಕ್ಷ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆ ಪ್ರಕಾರ 2017 ಮತ್ತು 2021ರ ನಡುವಿನ ಈ ವರ್ಷಗಳಲ್ಲಿ ಗಣಿತದಿಂದ ಸಮಾಜ ವಿಜ್ಞಾನದವರೆಗಿನ ವಿಷಯಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯಲ್ಲಿ ಶೇ 9ರಷ್ಟು ಕುಸಿತ ಆಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ .

ರಾಷ್ಟ್ರೀಯ ಸಾಧನೆ ಸಮೀಕ್ಷೆ 2021: ಮುಖ್ಯಾಂಶಗಳು

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 24 ರಷ್ಟು ವಿದ್ಯಾರ್ಥಿಗಳು ಮನೆಯಲ್ಲಿ ಡಿಜಿಟಲ್ ಸಾಧನಗಳನ್ನು ಹೊಂದಿಲ್ಲ.

ಇದನ್ನೂ ಓದಿ
Image
NAS 2021 ಕರ್ನಾಟಕದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಾ ವಿಷಯ ಕಷ್ಟ: ಎನ್ಎಎಸ್ ಸಮೀಕ್ಷೆ
Image
2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಶಾಲೆಗಳಲ್ಲಿನ ಕಲಿಕಾ ಮಟ್ಟ ಕುಸಿತ: ಎನ್ಎಎಸ್ ಸಮೀಕ್ಷೆ
Image
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಅರ್ಹತೆ ಬಿಡುಗಡೆ
Image
ದೇವನೂರು ಮಹದೇವ ತಿರುಗೇಟು: ಸಚಿವ ನಾಗೇಶ್ ನಾಗಪುರದ ಆರ್‌ಎಸ್‌ಎಸ್‌ ಪ್ರಭಾವಕ್ಕೆ ಒಳಗಾಗಿದ್ದಾರೆ, ನನ್ನ ಪಾಠ ಮಾಡಬೇಡಿ ಎಂದು ಸರ್ಕಾರ ಹೇಳಲಿ

ಶೇ 38 ವಿದ್ಯಾರ್ಥಿಗಳು ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿ ಕಲಿಕೆಯ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ತೊಂದರೆಯನ್ನು ಎದುರಿಸುತ್ತಿರುವುದಾಗಿ ಹೇಳಿದರು.

ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಗೆಳೆಯರ ಸಹಾಯದಿಂದ ಶಾಲೆಯಲ್ಲಿ ಉತ್ತಮವಾಗಿ ಕಲಿಯುತ್ತೇವೆ ಎಂದು ಹೇಳಿದರು.

ತರಗತಿ ಆಧಾರದ ಮೇಲೆ ಸಾಧನೆಯ ಲೆಕ್ಕಾಚಾರ 

3ನೇ ತರಗತಿ: ಭಾಷಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ರಾಷ್ಟ್ರೀಯ ಸರಾಸರಿ ಅಂಕಗಳು 2021 ರಲ್ಲಿ 62 ಆಗಿದ್ದು 2017 ರಲ್ಲಿ ಇದು 68 ಆಗಿದೆ. ಅದೇ ವೇಳೆ ಗಣಿತದಲ್ಲಿ ಇದು ಕ್ರಮವಾಗಿ 57 ಮತ್ತು 64 ಆಗಿದೆ. ಇಲ್ಲಿ ಇದು ಏಳು ಶೇಕಡಾ ಅಂಕಗಳ ಕುಸಿತವನ್ನು ತೋರಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ, ಹೆಚ್ಚಿನ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡಿದ್ದಾರೆ ಎಂದು ತೋರಿಸುತ್ತದೆ. ಉದಾಹರಣೆಗೆ, ಜಾರ್ಖಂಡ್ ಮತ್ತು ದೆಹಲಿಯ ವಿದ್ಯಾರ್ಥಿಗಳ ಗಣಿತದ ಅಂಕಗಳು ತಲಾ 47 ರಷ್ಟಿದೆ.

5ನೇ ತರಗತಿ: ಗಣಿತದಲ್ಲಿ ರಾಷ್ಟ್ರೀಯ ಸರಾಸರಿ ಸ್ಕೋರ್ 44 ಆಗಿದೆ. 2017 ರಲ್ಲಿ ಇದು 53 ಆಗಿದ್ದು ಶೇ9 ಅಂಕಗಳ ಕುಸಿತ ತೋರಿಸುತ್ತದೆ. ಭಾಷಾ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ 2017 ರಲ್ಲಿ 58 ಆಗಿತ್ತು. 2021 ರಲ್ಲಿ 55 ಆಗಿದೆ.ಅಂದರೆ ಶೇ ಮೂರು ಅಂಕ ಹೆಚ್ಚು. ಗಣಿತದಲ್ಲಿ ಆಂಧ್ರಪ್ರದೇಶ 40, ಛತ್ತೀಸ್‌ಗಢ 35 ಮತ್ತು ದೆಹಲಿ 38 ಅಂಕಗಳನ್ನು ಗಳಿಸಿದೆ ಎಂದು ರಾಜ್ಯವಾರು ಸರಾಸರಿ ಅಂಕಗಳು ತೋರಿಸುತ್ತವೆ. ಮತ್ತೊಂದೆಡೆ ರಾಜಸ್ಥಾನ 53 ಅಂಕಗಳನ್ನು ಗಳಿಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಶೇ 9 ಅಂಕ ಹೆಚ್ಚು.

8ನೇ ತರಗತಿ: ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಈ ರಾಷ್ಟ್ರೀಯ ಸರಾಸರಿಯು ಗಣಿತದಲ್ಲಿ 42 ರಿಂದ 36 ಕ್ಕೆ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ 44 ರಿಂದ 39ಕ್ಕೆ,ಭಾಷಾ ವಿಷಯದಲ್ಲಿ 57 ರಿಂದ 53 ಕ್ಕೆ ಕುಸಿದಿದೆ. ಗಣಿತದಲ್ಲಿ ತಮಿಳುನಾಡು ಮತ್ತು ಛತ್ತೀಸ್‌ಗಢ ತಲಾ 30 ಅಂಕಗಳೊಂದಿಗೆ ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿವೆ. 50 ಅಂಕಗಳೊಂದಿಗೆ ಪಂಜಾಬ್, ರಾಜಸ್ಥಾನ (46) ಮತ್ತು ಹರಿಯಾಣ (42) ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಅಂಕ ಗಳಿಸಿವೆ.

10 ನೇ ತರಗತಿ: 2017 ರ ಎನ್ಎಎಸ್ ಸಮೀಕ್ಷೆಯು ಈ ತರಗತಿಯಲ್ಲಿನ ವಿದ್ಯಾರ್ಥಿಗಳನ್ನು ಒಳಗೊಂಡಿಲ್ಲದ ಕಾರಣ ಯಾವುದೇ ತುಲನಾತ್ಮಕ ವಿಶ್ಲೇಷಣೆಯನ್ನು ಮಾಡಲಾಗಲಿಲ್ಲ. ಸಮೀಕ್ಷೆಯ ಪ್ರಕಾರ ಗಣಿತದಲ್ಲಿ ರಾಷ್ಟ್ರೀಯ ಸರಾಸರಿ 32 ಆಗಿದೆ. ಅದೇ ವೇಳೆ ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಆಧುನಿಕ ಭಾರತೀಯ ಭಾಷೆಯಲ್ಲಿ ಕ್ರಮವಾಗಿ 35, 37, 43 ಮತ್ತು 41 ಅಂಕಗಳು ಆಗಿವೆ.

ಶಿಕ್ಷಣ ವಿಭಾಗದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ