CBSE Class 10 Result 2021: ಇಂದು ಮಧ್ಯಾಹ್ನ 12ಗಂಟೆಗೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ..
ಈ ಬಾರಿ ಕೊವಿಡ್ 19 (Covid 19) ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತಿದೆ.
ಸಿಬಿಎಸ್ಇ 10ನೇ ತರಗತಿ ಫಲಿತಾಂಶ (CBSE Class 10 Result )ಇಂದು ಘೋಷಣೆಯಾಗಲಿದೆ. ಈ ಬಗ್ಗೆ ಸಿಬಿಎಸ್ಇ ಎಚ್ಕ್ಯೂ ಟ್ವೀಟ್ ಮಾಡಿದೆ. ಸಿಬಿಎಸ್ಇ 10ನೇ ತರಗತಿ ಫಲಿತಾಂಶ ನಿನ್ನೆ ಅಂದರೆ ಆಗಸ್ಟ್ 2ಕ್ಕೆ ಪ್ರಕಟವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಮುಂದೂಡಲ್ಪಟ್ಟಿತ್ತು. ಆದರೆ ಇಂದು ಮಧ್ಯಾಹ್ನ 12 ಗಂಟೆಹೊತ್ತಿಗೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ (CBSE Class 10 Result )ಪ್ರಕಟವಾಗುವುದು ಪಕ್ಕಾ ಆಗಿದೆ. ಇನ್ನು ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಶುಕ್ರವಾರವೇ ಘೋಷಣೆಯಾಗಿದೆ. ಈ ಬಾರಿ ಕೊವಿಡ್ 19 (Covid 19) ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ಅಂಕಗಳನ್ನು ನೀಡಲಾಗುತ್ತಿದೆ. ಹಾಗೊಮ್ಮೆ ರಿಸಲ್ಟ್ ಬಂದ ಮೇಲೆ ಯಾವುದೇ ವಿದ್ಯಾರ್ಥಿಗೆ ತಮ್ಮ ಅಂಕದಿಂದ ಸಮಾಧಾನ ಆಗದೆ ಇದ್ದರೆ, ಕೊವಿಡ್ 19 ಪರಿಸ್ಥಿತಿ ಸುಧಾರಿಸಿದ ಮೇಲೆ ನಡೆಸಲಿರುವ ಪರೀಕ್ಷೆಗಳನ್ನು ಬರೆಯಲು, ತಮ್ಮ ಶಾಲೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳು https://cbseresults.nic.in ಅಥವಾ https://cbse.gov.in ಅಥವಾ Digi Locker (ಡಿಜಿಲಾಕರ್) ಮೂಲಕ ತಮ್ಮ ರಿಸಲ್ಟ್ ವೀಕ್ಷಿಸಬಹುದಾಗಿದೆ. ಹಾಗೇ, ರೋಲ್ ನಂಬರ್ ಪಡೆಯಲು https://cbseit.in/cbse/2021/rfinder/landing.aspx ಗೆ ಭೇಟಿಕೊಡಬಹುದು.
CBSE Class X Results to be announced today at 12 Noon.#CBSEResults #CBSE pic.twitter.com/LJU1MUaB4Z
— CBSE HQ (@cbseindia29) August 3, 2021
Published On - 10:53 am, Tue, 3 August 21