CBSE 10th Result 2022: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ , ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ , ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸಿಬಿಎಸ್ಇಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪರಿಶೀಲಿಸಬಹುದು.
ಹಾಗೆಯೇ ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳು ವೆಬ್ಸೈಟ್ಗಳಾದ sbseresults.nic.in, parikshasangam.cbse.gov.in ಹಾಗೂ results.cbse.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಸಿಬಿಎಸ್ಇಯ ಹತ್ತನೇ ತರಗತಿಯಲ್ಲಿ ಶೇ.94.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹುಡುಗಿಯರು ಹುಡುಗರಿಗಿಂತ ಶೇ.1.41ರಷ್ಟು ಸಾಧನೆ ಮಾಡಿದ್ದಾರೆ.
ಹಾಗೆಯೇ 64,908 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚಿನ ಅಂಕಗಳಿಸಿದ್ದು, 2.36 ಲಕ್ಷ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಿಬಿಎಸ್ಇಯ 10ನೇ ತರಗತಿ ಪರೀಕ್ಷೆಯು ಏಪ್ರಿಲ್ 26ರಿಂದ ಮೇ 4 ರವರೆಗೆ ನಡೆದಿತ್ತು. ವಿದ್ಯಾರ್ಥಿಗಳು ಫಲಿತಾಂಶವನ್ನು ಡಿಜಿಲಾಕರ್ನಲ್ಲಿ ಹಾಗೂ ಎಸ್ಎಂಎಸ್ ಮೂಲಕವೂ ಪಡೆಯಬಹುದಾಗಿದೆ.
ಸಿಬಿಎಸ್ಇಯು ಬೆಳಗ್ಗೆಯಷ್ಟೇ ತನ್ನ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿತ್ತು. ಹುಡುಗಿಯರ ಉತ್ತೀರ್ಣತೆಯು ಶೇಕಡಾ 95.21 ರಷ್ಟಿದ್ದರೆ, ಶೇಕಡಾ 93.80 ರಷ್ಟು ಹುಡುಗರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತೃತೀಯಲಿಂಗಿ ಅಭ್ಯರ್ಥಿಗಳ ತೇರ್ಗಡೆ ಪ್ರಮಾಣ ಶೇ.90 ರಷ್ಟಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರವು ಹೊರಡಿಸಿದ ಎಲ್ಲಾ COVID19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಯನ್ನು ನಡೆಸಲಾಯಿತು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು CBSE ಯ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.
CBSE 10 ನೇ ಫಲಿತಾಂಶ ವೀಕ್ಷಿಸುವುದು ಹೇಗೆ?
-cbse.gov.in ನಲ್ಲಿ CBSE ಯ ಅಧಿಕೃತ ಸೈಟ್‌ಗೆ ಭೇಟಿ ನೀಡಿ. -ಫಲಿತಾಂಶ ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ವೆಬ್‌ಸೈಟ್ ತೆರೆಯುತ್ತದೆ. -ಮುಖಪುಟದಲ್ಲಿ ಲಭ್ಯವಿರುವ 10 ನೇ ತರಗತಿಯ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. -ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಕ್ಲಿಕ್ ಮಾಡಿ. -ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ವೀಕ್ಷಿಸಬಹುದು -ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ. -ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ
Published On - 2:59 pm, Fri, 22 July 22