ಬೆಂಗಳೂರಿನಲ್ಲಿ Learn And Earn ಗೆ ಹೆಚ್ಚಿದ ಬೇಡಿಕೆ: ಸಂಜೆ ಕಾಲೇಜು ಶುರು ಮಾಡಲು ಜ್ಞಾನಭಾರತಿ ವಿವಿ ಪ್ಲಾನ್

ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವುದು ಸಾಕಷ್ಟು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ, ದುಡಿಮೆಯ ಅನಿವಾರ್ಯತೆ ಇರುವ ಈ ದಿನಗಳಲ್ಲಿ ಸಾಮಾನ್ಯ ಶಿಕ್ಷಣ ಪಡೆದು ಔದ್ಯೋಗಿಕ ಜೀವನಕ್ಕೆ ಹೊಂದಿಕೊಂಡಿರುವವರೇ ಹೆಚ್ಚು. ಆದರೆ ಈಗ ಉದ್ಯೋಗದ ಜತೆಗೆ ಪದವಿ, ಸ್ನಾತಕೋತ್ತರ ಪದವಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಜೆ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ Learn And Earn ಗೆ ಹೆಚ್ಚಿದ ಬೇಡಿಕೆ: ಸಂಜೆ ಕಾಲೇಜು ಶುರು ಮಾಡಲು ಜ್ಞಾನಭಾರತಿ ವಿವಿ ಪ್ಲಾನ್
ಜ್ಞಾನಭಾರತಿ ವಿಶ್ವವಿದ್ಯಾಲಯ
Follow us
| Updated By: ಗಣಪತಿ ಶರ್ಮ

Updated on: Sep 17, 2024 | 6:47 AM

ಬೆಂಗಳೂರು, ಸೆಪ್ಟೆಂಬರ್ 17: ಬಿಎ, ಎಂಎ, ಎಂಎಸ್​​ಸಿ, ಎಂಕಾಮ್, ಎಂಜಿನಿಯರಿಂಗ್, ಎಂಟೆಕ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಪ್ರತಿಯೊಬ್ಬ ವಿದ್ಯಾರ್ಥಿ ಕನಸು ಕಾಣುತ್ತಿರುತ್ತಾರೆ. ಆದರೆ ಬೆಂಗಳೂರಿನ ದುಬಾರಿ ದುನಿಯಾದಲ್ಲಿ ಆರ್ಥಿಕ ಸಮಸ್ಯೆಯ ಕಾರಣ ಉನ್ನತ ಶಿಕ್ಷಣ ಆಸೆ ಬಿಟ್ಟು ಕೆಲಸದ ಮೊರೆ ಹೋಗಿರುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಐಟಿಬಿಟಿ ಸೇರಿದಂತೆ ಹಲವು ಕಾರ್ಪೋರೇಟ್ ಕ್ಷೇತ್ರದ ಕಂಪನಿಗಳಲ್ಲಿ ಬಡ್ತಿ ಸೇರಿದಂತೆ ಉತ್ತಮ ವೇತನ ಪ್ಯಾಕೇಜ್​ಗೆ ಉನ್ನತ ಶಿಕ್ಷಣದ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆ ಹೆಚ್ಚಾಗಿದೆ. ಹೀಗಾಗಿ ಐಟಿ ಬಿಟಿ ಉದ್ಯೋಗಿಗಳು ಸೇರಿದಂತೆ ಸಾಕಷ್ಟು ಉದ್ಯೋಗಿಗಳು, Earn and learn ಮೊರೆ ಹೋಗುತ್ತಿದ್ದಾರೆ.

ಕೆಲಸದ ಜೊತೆ ಶಿಕ್ಷಣ ಪಡೆಯಲು ಬಹುತೇಕ ಉದ್ಯೋಗಿಗಳು ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಸಂಜೆ ಕಾಲೇಜುಗಳನ್ನು ಹೆಚ್ಚಾಗಿ ಶುರು ಮಾಡಿ ಪದವಿ ಶಿಕ್ಷಣ ನೀಡಲು ಮುಂದಾಗಿದೆ. ಈ ಬಗ್ಗೆ ಜ್ಞಾನಭಾರತಿ ವಿಶ್ವವಿದ್ಯಾಲಯದ ಕುಲಪತಿ ಜಯಕರ್ ಶೆಟ್ಟಿ ಕೂಡ ಮಾಹಿತಿ ನೀಡಿದ್ದಾರೆ.

ಸಂಜೆ ಕಾಲೇಜುಗಳ ಮೂಲಕ ಸಾಕಷ್ಟು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಉದ್ಯೋಗದ ಜೊತೆ ಉನ್ನತ ಶಿಕ್ಷಣ ಕೂಡ ಪಡೆಯಲು ಮುಂದಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ ಬಹುತೇಕ ಉದ್ಯೋಗಿಗಳು Earn and learn ಮೊರೆ ಹೋಗುತ್ತಿದ್ದು ಸಂಜೆ ಕಾಲೇಜು ಹೆಚ್ಚು ಶುರವಾದಷ್ಟು ಅನಕೂಲವಾಗಲಿದೆ. ಹೀಗಾಗಿ ಸರ್ಕಾರ ಸಾಕಷ್ಟು ಕೋರ್ಸ್​​​ಗಳನ್ನು ಸಂಜೆ ಕಾಲೇಜುಗಳಲ್ಲಿ ಶುರು ಮಾಡಿ ಶಿಕ್ಷಣ ನೀಡುವುದು ಒಳ್ಳೆಯ ಬೆಳವಣಿಗೆ ಎಂಬುದು ವಿದ್ಯಾರ್ಥಿಗಳ ಅಬಿಪ್ರಾಯವಾಗಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗೂ ಬರುತ್ತಿದೆ ಪಿಕ್ ಅಪ್, ಡ್ರಾಪ್ ಬಸ್ ವ್ಯವಸ್ಥೆ

ಚೆನ್ನಾಗಿ ಓದಬೇಕೆಂದು ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳು, ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ಈವರೆಗೆ ಓದಿನಿಂದ ದೂರ ಆಗುತ್ತಿದ್ದರು. ಆದರೆ ಈ ರೀತಿಯ ಸಂಜೆ ಕಾಲೇಜಿನ ಅವಕಾಶವನ್ನು ಬೆಂಗಳೂರು ವಿವಿ ನೀಡುತ್ತಿರುವುದು ಇವರ ಕನಸನ್ನು ನನಸಾಗಿಸುತ್ತಿದೆ ಎನ್ನಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ