ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗೂ ಬರುತ್ತಿದೆ ಪಿಕ್ ಅಪ್, ಡ್ರಾಪ್ ಬಸ್ ವ್ಯವಸ್ಥೆ

ಆಧುನಿಕ ಜಗತ್ತಲ್ಲಿ ಖಾಸಗಿ ಶಾಲೆಯ ಹೈಟೆಕ್ ಸೌಲಭ್ಯಗಳಿಗೆ ಮನಸೋತು ಕ್ವಾಲಿಟಿ ಶಿಕ್ಷಣಕ್ಕೆ ಪ್ರೈವೇಟ್ ಸ್ಕೂಲ್ ಮೊರೆ ಹೋಗುತ್ತಿರುವ ಹೊತ್ತಲ್ಲಿ ಗವರ್ನಮೆಂಟ್ ಶಾಲೆಯಲ್ಲಿ ಅತ್ಯುತ್ತಮ ಸೌಲಭ್ಯ ಕೊಡುವ ವ್ಯವಸ್ಥೆ ಶಿಕ್ಷಣ ಇಲಾಖೆ ಮಾಡ್ತಿದೆ. 4 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆ ತರಲು ಶಾಲಾ ಬಸ್ ಫ್ರೀ ಆಗಿ ಪೂರೈಕೆ ಮಾಡಲು ಇಲಾಖೆ ಮುಂದಾಗಿದೆ.

ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗೂ ಬರುತ್ತಿದೆ ಪಿಕ್ ಅಪ್, ಡ್ರಾಪ್ ಬಸ್ ವ್ಯವಸ್ಥೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Sep 16, 2024 | 8:14 AM

ಬೆಂಗಳೂರು, ಸೆ.16: ಸರ್ಕಾರಿ ಶಾಲೆಗೆ (Government School) ಮಕ್ಕಳು ಬರಬೇಕು. ಸರ್ಕಾರಿ ಶಾಲೆಯ ಅವನತಿ ಆಗಲು ಬಿಡಬಾರದು. ಈ ರೀತಿಯ ಹಲವು ಕೂಗಿನ ಮಧ್ಯೆ ಖಾಸಗಿ ಶಾಲೆಗಳತ್ತ(Private Schools) ಮಕ್ಕಳ ಅಡ್ಮಿಷನ್ ಮಾಡಿಸುವ ಪೋಷಕರ ಸಂಖ್ಯೆಯೇ ಜಾಸ್ತಿ ಆಗಿದೆ. ಈ ಮಧ್ಯೆ ಸರ್ಕಾರಿ ಶಾಲೆಗೆ ಮಕ್ಕಳನ್ನ ಕರೆ ತರಲು ಜೊತೆಗೆ ಶಾಲೆಯಿಂದ ದೂರ ಉಳಿಯುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಆರಂಭವಾದ್ದದ್ದೆ KPS ಕರ್ಣಾಟಕ ಪಬ್ಲಿಕ್ ಶಾಲೆಗಳು. ಈ ಶಾಲೆಗೆ ಮಕ್ಕಳ ಸೆಳೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹೊಸ ಫೆಸಿಲಿಟಿಗಳನ್ನು ನೀಡಲು ಮುಂದಾಗಿದ್ದು ಪಿಕ್ ಅಪ್ & ಡ್ರಾಪ್​ಗೆ ಚಿಂತನೆ ನಡೆಸಿದೆ.

ಮಕ್ಕಳು ಶೈಕ್ಷಣಿಕ ಜೀವನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕೂಡ ಪಿಕ್ & ಡ್ರಾಪ್ ವ್ಯವಸ್ಥೆ ಮಾಡೋ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಮಾಹಿತಿ ಕೊಟ್ಟಿದ್ದಾರೆ. KPS ಶಾಲೆಗೆ ಮಕ್ಕಳು ಬರಲು ಎನ್ಕರೇಜ್ ಮಾಡುವ ವಿನೂತನ ಪ್ರಯತ್ನ ಇದಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಮಹತ್ತರ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಲು ನಯಾ ಪ್ಲಾನ್ ಮಾಡಲಾಗಿದೆ.

ಕೆಪಿಎಸ್ ಶಾಲೆಯಲ್ಲಿ ಓದುವ ಮಕ್ಕಳಿಗಾಗಿ ಟ್ರಾನ್ಸ್ಪೋರ್ಟಶನ್ ಒದಗಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಸದ್ಯ 285 ಕರ್ನಾಟಕ ಪಬ್ಲಿಕ್ ಸ್ಕೂಲ್ ಅಸ್ತಿತ್ವದಲ್ಲಿವೆ. ಇನ್ನು 500 ಕೆಪಿಎಸ್ ಪ್ರಸಕ್ತ ಸಾಲಿನಲ್ಲಿ ಆರಂಭಿಸುವ ಚಿಂತನೆ ಇದೆ. Lkg ಇಂದ 12 ನೇ ತರಗತಿವರೆಗೂ ಒಂದೇ ಕಡೆ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗ್ತೀದೆ. ಹೀಗಾಗಿ 4 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆ ತರಲು ಶಾಲಾ ಬಸ್ ಫ್ರೀ ಆಗಿ ಪೂರೈಕೆ ಮಾಡಲು ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ರಾಜಧಾನಿ ಸೇರಿದ್ದಂತೆ ಕೆಲವು ಶಾಲೆಗಳಲ್ಲಿ ಮಾತ್ರ ಆರಂಭ ಮಾಡೋ ಐಡಿಯಾ ಮಾಡಿದ್ದು ಮುಂದಿನ ವರ್ಷ ಇದನ್ನ 2000 ಶಾಲೆಗಳಿಗೆ ವಿಸ್ತರಿಸುವ ಗುರಿ ಹಾಕಿಕೊಂಡಿದೆ.

ಇದನ್ನೂ ಓದಿ: ಇಂದಿರಾನಗರದ ಡಿಫೆನ್ಸ್ ಕಾಲೋನಿ ಸುತ್ತ ವೆಹಿಕಲ್ ಗಾರ್ಡನಿಂಗ್; ಪಾರ್ಕಿಂಗ್​ಗಾಗಿ ಹೊಸ ಪ್ರಯೋಗಕ್ಕೆ ಕೈ ಹಾಕಿದ ಜನ

ರಾಜ್ಯದಲ್ಲಿ ಪ್ರಸ್ತುತ 285 ಕರ್ನಾಟಕ ಪಬ್ಲಿಕ್‌ ಶಾಲೆಗಳು ಯಶಸ್ವಿಯಾಗಿ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಸರ್ಕಾರವೂ ಒಂದೇ ಸೂರಿನಡಿ, ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೂ ಶಿಕ್ಷಣ ನೀಡುವ ಉತ್ತಮ ಶೈಕ್ಷಣಿಕ ವಾತಾವರಣ KPS ಅಲ್ಲಿ ಇರುತ್ತೆ. ಮುಂದಿನ ಹಂತದಲ್ಲಿ ಪಿಕ್ ಅಪ್ & ಡ್ರಾಪ್ ಕೊಡುವ ವ್ಯವಸ್ಥೆ ಮಾಡೋ ಬಗ್ಗೆ ಚಿಂತನೆ ನಡೆಯುತ್ತಿದ್ದು ಇಲ್ಲಿ ಆ ಚಾರ್ಜ್ ಈ ಚಾರ್ಜ್ ಅಂತ ಮಕ್ಕಳ ಬಳಿ ಹಣ ಪೀಕುವ ಕೆಲಸ ಮಾಡಲ್ಲ. ಬದಲಾಗಿ ಮಕ್ಕಳು KPS ಶಾಲೆಗೆ ಬರಲು ಎನ್ಕರೇಜ್ ಮಾಡುವ ಪ್ರಯತ್ನವಾಗಿದೆ. ಅನೇಕ ಬಡ ಮಕ್ಕಳಿಗೆ ಇದ್ರಿಂದ ಅನುಕೂಲವೇ ಹೆಚ್ಚು. ಸುತ್ತ 4/5 ಕಿಲೋಮೀಟರ್ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆ ತರಲು ಶಾಲಾ ಬಸ್ ಫ್ರೀ ಆಗಿ ಪೂರೈಕೆ ಮಾಡೋ ಚಿಂತನೆ ಇದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ