ಇಂದಿರಾನಗರದ ಡಿಫೆನ್ಸ್ ಕಾಲೋನಿ ಸುತ್ತ ವೆಹಿಕಲ್ ಗಾರ್ಡನಿಂಗ್; ಪಾರ್ಕಿಂಗ್ಗಾಗಿ ಹೊಸ ಪ್ರಯೋಗಕ್ಕೆ ಕೈ ಹಾಕಿದ ಜನ
ಇಂದಿರಾನಗರದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಗಿಡಗಳ ಪಾಟ್ ಗಳನ್ನು ಇಟ್ಟು, ಪಾರ್ಕಿಂಗ್ ಸ್ಥಳ ಕಾಯ್ದಿರಿಸಿ ನಂತರ ಅಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ವ್ಯವಸ್ಥೆಯನ್ನು ಇಲ್ಲಿನ ಜನ ಅಳವಡಿಸಿಕೊಂಡಿದ್ದಾರೆ. ಇದನ್ನೇ ಪಾರ್ಕಿಂಗ್ ಗಾರ್ಡನ್ ಎನ್ನಲಾಗುತ್ತೆ. ಇಲ್ಲಿ ಗಲ್ಲಿಗಲ್ಲಿಗೂ ವೆಹಿಕಲ್ ಗಾರ್ಡನಿಂಗ್ ಕಾಣ ಸಿಗುತ್ತೆ.
ಬೆಂಗಳೂರು, ಸೆ.16: ಓದುಗರೇ.. ನೀವು ಹೋಮ್ ಗಾರ್ಡನಿಂಗ್ ನೋಡಿರ್ತಿರಾ. ಟೆರೆಸ್ ಗಾರ್ಡನ್ ಬಗ್ಗೆ ಕೇಳಿರ್ತಿರಾ. ಆದರೆ ಯಾವತ್ತಾದ್ರೂ ವೆಹಿಕಲ್ ಗಾರ್ಡನಿಂಗ್ ಬಗ್ಗೆ ಕೇಳಿದ್ದೀರಾ? ಇಲ್ಲ ಅಂತಾದ್ರೆ ಇಂದಿರಾನಗರದ ಸುತ್ತ ಒಂದು ರೌಂಡ್ ಹೊಡೀರಿ ಸಾಕು. ನಿಮಗೆ ಆಶ್ಚರ್ಯವಾಗೋ ರೀತಿಯಲ್ಲಿ ಗಲ್ಲಿಗಲ್ಲಿಗೂ ವೆಹಿಕಲ್ ಗಾರ್ಡನಿಂಗ್ ಕಾಣ ಸಿಗುತ್ತೆ.
ಸಿಟಿ ತುಂಬಾ ವಾಹನಗಳದ್ದೆ ಕಾರುಬಾರು. ಮನೆಗೊಂದು ಕಾರು, ಬೈಕ್ ಫಿಕ್ಸ್. ಪ್ರತಿ ನಿತ್ಯ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತೆ. ಟ್ರಾಫಿಕ್ ಒತ್ತಡದಿಂದ ಸಿಟಿ ಜನ ಫಸ್ಟ್ರೇಟ್ ಆದ್ರೂ, ಹೊಸ ವಾಹನ ಖರೀದಿ ಬಿಟ್ಟಿಲ್ಲ. ಹೀಗಾಗಿ ಒಂದು ಕಡೆ ರಾಜಧಾನಿ ಬೆಂಗಳೂರು ಟ್ರಾಫಿಕ್ ಸಿಟಿ ಆದ್ರೆ, ಮತ್ತೊಂದು ಕಡೆ ವೆಹಿಕಲ್ ಪಾರ್ಕಿಂಗ್ ಒಂದು ತಲೆ ನೋವಾಗಿ ಪರಿಣಮಿಸಿದೆ. ಮನೆಯಲ್ಲಿ ಪಾರ್ಕಿಂಗ್ ಪ್ಲೇಸ್ ಇಲ್ಲದ ಕಾರಣ ಕೆಲವರು ರಸ್ತೆಯನ್ನೆ ಪ್ಲಾನ್ಡ್ ಆಗಿ ಪಾರ್ಕಿಂಗ್ ಗಾರ್ಡನಿಂಗ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ
ಏನಿದು ಪಾರ್ಕಿಂಗ್ ಗಾರ್ಡನಿಂಗ್?
ಪಾರ್ಕಿಂಗ್ ಓಕೆ. ಇದ್ಯಾವುದು ಪಾರ್ಕಿಂಗ್ ಗಾರ್ಡನಿಂಗ್ ಅಂತ ಕನ್ಫ್ತೂಸ್ ಆಗಬೇಡಿ. ಗಾರ್ಡನಿಂಗ್ ಮಾಡಿ, ಅಂದ್ರೆ ಗಿಡಗಳ ಪಾಟ್ ಗಳನ್ನು ಇಟ್ಟು, ಪಾರ್ಕಿಂಗ್ ಸ್ಥಳ ಕಾಯ್ದಿರಿಸಿ ನಂತರ ಅಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡೋದೇ ಈ ಪಾರ್ಕಿಂಗ್ ಗಾರ್ಡನ್. ಸದ್ಯ ಇಂಥದೊಂದು ಬ್ರಿಲಿಯೆಂಟ್ ಇಡಿಯಾ ಇಂದಿರಾನಗರದಲ್ಲಿ ಕ್ಲಿಕ್ ಆಗಿದೆ. ಇಂದಿರಾನಗರದ ಡಿಫೆನ್ಸ್ ಕಾಲೋನಿ ಸುತ್ತ, ಕೆಲ ಜನ ರಸ್ತೆ ಬದಿಗಳಲ್ಲಿ ಪಾಟ್ ಗಳನ್ನು ಇರಿಸಿ, ಅಲ್ಲಿ ಪಾರ್ಕಿಂಗ್ ಮಾಡ್ತಿದ್ದಾರೆ ಅನ್ನೊ ಆರೋಪ ಕೇಳಿ ಬಂದಿದೆ.
ಪಾಟ್ ಗಳನ್ನು ಇರಿಸಿ ಪಾರ್ಕಿಂಗ್ ಮಾಡ್ತಿರೋ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ಆಗ್ತಿದೆ. ಮಕ್ಕಳು ಸೈಕಲ್ ಓಡಿಸಿ ಬರುವಾಗ ಪಾಟ್ ತಗುಲಿ ಬಿದ್ದು ಮೈಕೈ ಗಾಯ ಮಾಡಿಕೊಂಡಿರುವ ಉದಾಹರಣೆಗಳು ಕೂಡ ಇದೆ ಎಂದು ತಿಳಿದುಬಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ