GATE 2022: ಫೆಬ್ರವರಿಯಲ್ಲಿ ನಡೆಯುವ ಗೇಟ್ ಪರೀಕ್ಷೆಗೆ 2 ಹೊಸ ಪೇಪರ್ಗಳ ಸೇರ್ಪಡೆ; ಸಂಪೂರ್ಣ ವಿವರ ಇಲ್ಲಿದೆ
ಗೇಟ್ ಪರೀಕ್ಷೆ 2022: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಐಐಟಿ ಖಗಗ್ಪುರದ ಅಧಿಕೃತ ವೆಬ್ಸೈಟ್ನಲ್ಲಿ iitkgp.ac.in ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. iitkgp.ac.in ವೆಬ್ಸೈಟ್ನಲ್ಲಿ ಪರೀಕ್ಷೆಯ ಮಾಹಿತಿಯನ್ನು ಅಪ್ಡೇಟ್ ಮಾಡಲಾಗುವುದು ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.
ಎಂಜಿನಿಯರಿಂಗ್ನಲ್ಲಿ ಗ್ರೇಜುಯೇಟ್ ಆ್ಯಪ್ಟಿಟ್ಯೂಡ್ ಟೆಸ್ಟ್ (GATE 2022) ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ. 5,6,12 ಮತ್ತು 13ನೇ ತಾರೀಕಿನಂದು ಪರೀಕ್ಷೆ ನಡೆಯಲಿದೆ. ಈ ವರ್ಷದ ಪರೀಕ್ಷೆಯಲ್ಲಿ 2 ಹೊಸ ಪೇಪರ್ಗಳು ಸೇರ್ಪಡೆಯಾಗಿವೆ ಎಂದು ಐಐಟಿ ಖಗರ್ಪುರ್(iit Kharagpur) ಇತ್ತೀಚೆಗೆ ಘೋಷಿಸಿದೆ. ಗೇಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಐಐಟಿ ಖಗಗ್ಪುರದ ಅಧಿಕೃತ ವೆಬ್ಸೈಟ್ನಲ್ಲಿ iitkgp.ac.in ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. iitkgp.ac.in ವೆಬ್ಸೈಟ್ನಲ್ಲಿ ಪರೀಕ್ಷೆಯ ಮಾಹಿತಿಯನ್ನು ಅಪ್ಡೇಟ್ ಮಾಡಲಾಗುವುದು ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.
ಮಾಹಿತಿಯ ಪ್ರಕಾರ 2 ಹೊಸ ಪೇಪರ್ಗಳು ಸೇರ್ಪಡೆಯಾಗಿವೆ. ಆ ಹೊಸ ಪೇಪರ್ಗಳು ಜಿಯೋಮ್ಯಾಟಿಕ್ ಎಂಜಿನಿಯರಿಂಗ್( Geomatics Engineering) ಮತ್ತು ನೇವಲ್ ಆರ್ಕಿಟೆಕ್ಷರ್( naval architecture) ಎಂಬ ಪೇಪರ್ಗಳು ಸೇರ್ಪಡೆಯಾಗಿವೆ. ಈ ಮೊದಲು ಗೇಟ್ ಪರೀಕ್ಷೆಯ ಪೇಪರ್ಗಳ ಸಂಖ್ಯೆ 27 ಆಗಿತ್ತು. ಈ ಎರಡು ಹೊಸ ಪೇಪರ್ಗಳ ಸೇರ್ಪಡೆಯ ನಂತರ ಒಟ್ಟು ಪರೀಕ್ಷೆ ಪೇಪರ್ಗಳ ಸಂಖ್ಯೆ 29ಕ್ಕೆ ಏರಿದೆ.
ಗೇಟ್ ಬ್ರಾಂಡ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಪ್ರವೇಶಿಸಲು ಹೆಚ್ಚಿನ ಅಂಕಗಳ ನಿರೀಕ್ಷೆ ಇರಲೇಬೇಕು. ಈ ಎರಡು ಪತ್ರಿಕೆಗಳು ವಿಷಯಗಳಿಗೆ ತಕ್ಕಂತಹ ಕ್ಷೇತ್ರದಲ್ಲಿ ನೇರ ಪ್ರಯೋಜನಗಳನ್ನು ಒದಗಿಸುತ್ತದೆ. ಅದರಲ್ಲಿಯೂ ಹಡಗು ನಿರ್ಮಾಣ ಮತ್ತು ಜಿಯೋ-ಇನ್ಫಾರ್ಮ್ಯಾಟಿಕ್ಸ್ನಲ್ಲಿ ಸುಧಾರಿತ ಸಾಮರ್ಥ್ಯಗಳೊಂದಿಗೆ ಮಾನವ ಸಂಪನ್ಯೂಲದ ಅಗತ್ಯತೆ ಇದ್ದಾಗ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗೇಟ್ 2022ಗಾಗಿ ವೆಬ್ಸೈಟ್ನಲ್ಲಿ ವಿವರವಾದ ಮಾಹಿತಿ ಲಭ್ಯವಾಗಲಿದೆ. ಬಿಡಿಎಸ್ (BDS) ಮತ್ತು ಎಂ.ಫಾರ್ಮ್ (M Form) ಪದವಿ ಹೊಂದಿರುವವರಿಗೆ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲಾಗಿದೆ. ಈ ವರ್ಷ ಒಟ್ಟು 858,9890 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.
ಐಐಟಿ ಖಗರ್ಪುರ್ ಶೀರ್ಘ್ರದಲ್ಲಿಯೇ ಆನ್ಲೈನ್ ಅರ್ಜಿಯನ್ನು ಬಿಡುಗಡೆ ಮಾಡಲಿದೆ. ಗೇಟ್ 2022 ಪರೀಕ್ಷೆ ನಡೆಸಲು ಒಟ್ಟು 195 ಕೆಂದ್ರಗಳನ್ನು ಗೊತ್ತುಪಡಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಯನ್ನು ಶೀರ್ಘ್ರದಲ್ಲಿಯೇ gate.iitd.ac.in ನಲ್ಲಿ ಪಡೆಯಬಹುದು.
ಇದನ್ನೂ ಓದಿ:
Published On - 11:48 am, Fri, 30 July 21